ಪಿಎಂ ಕಿಸಾನ್ ಯೋಜನೆಯ 10ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ; ಹಣ ಜಮಾ ಆಗಿದ್ದನ್ನು ಚೆಕ್ ಮಾಡಿಕೊಳ್ಳಿ
Pradhan Mantri Kisan Samman Nidhi: ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ 6000 ರೂ. ಹಣವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡುತ್ತದೆ. ಅದರ 9 ಕಂತುಗಳಷ್ಟನ್ನು ರೈತರು ಇದುವರೆಗೆ ಸ್ವೀಕರಿಸಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 10ನೇ ಕಂತನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಡಿ ದೇಶದ 10 ಕೋಟಿ ರೈತರ ಬ್ಯಾಂಕ್ ಖಾತೆಗೆ 2 ಸಾವಿರ ರೂ.ಜಮೆಯಾಗಿದೆ. 10ನೇ ಕಂತಿನಡಿ ಹಣ ಪಡೆಯಲು ಅನೇಕ ರೈತರು ಕಾಯುತ್ತಿದ್ದರು. ಅವರಿಗೆ ಹೊಸವರ್ಷದ ಮೊದಲ ದಿನವೇ ಪ್ರಧಾನಿ ಮೋದಿ ಶುಭ ಸಮಾಚಾರ ನೀಡಿದ್ದಾರೆ. ಇಂದು ಕಿಸಾನ್ ಸಮ್ಮಾನ್ ಯೋಜನೆಯ 10ನೇ ಕಂತನ್ನು ಮಾತ್ರವಲ್ಲದೆ, ಪ್ರಧಾನಿ ಮೋದಿ, 351 ರೈತ ಉತ್ಪಾದನಾ ಸಂಸ್ಥೆಗಳಿಗೆ 14 ಕೋಟಿ ರೂಪಾಯಿ ಇಕ್ವಿಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಿಂದ ಸುಮಾರು 1.24 ಲಕ್ಷ ರೈತರಿಗೆ ಅನುಕೂಲವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ 6000 ರೂ. ಹಣವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡುತ್ತದೆ. ಅದರ 9 ಕಂತುಗಳಷ್ಟನ್ನು ರೈತರು ಇದುವರೆಗೆ ಸ್ವೀಕರಿಸಿದ್ದರು.
दिल्ली: प्रधानमंत्री ने वीडियो कॉन्फ्रेंसिंग के जरिए 10 करोड़ से अधिक लाभार्थी किसान परिवारों को 20,000 करोड़ से अधिक की राशि ट्रांसफर की। साथ ही PM ने लगभग 351 किसान उत्पादक संगठनों को 14 करोड़ से अधिक का इक्विटी अनुदान भी जारी किया, इससे 1.24 लाख से अधिक किसानों को लाभ होगा। pic.twitter.com/Uge7SN0HXj
— ANI_HindiNews (@AHindinews) January 1, 2022
ನಿಮ್ಮ ಕಿಸಾನ್-ಸಮ್ಮಾನ್ ಕಂತನ್ನು ಪರಿಶೀಲನೆ ಮಾಡುವ ವಿಧಾನ ಹೀಗಿದೆ.. 1. ಮೊದಲು ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ https://pmkisan.gov.in/. ಗೆ ಭೇಟಿ ನೀಡಿ 2.ಹೋಂ ಪೇಜ್ನಲ್ಲಿರುವ ‘Farmer’s Corner Section’ ಮೇಲೆ ಕ್ಲಿಕ್ ಮಾಡಿ. 3. ಅದರಲ್ಲಿ Beneficiary Status (ಫಲಾನುಭವಿಗಳ ಸ್ಥಿತಿ) ಎಂಬ ಆಪ್ಷನ್ನ್ನು ಆಯ್ಕೆ ಮಾಡಿ. (ಅಲ್ಲಿ ಈ ಯೋಜನೆಯ ಫಲಾನುಭವಿ ಆತನ/ಆಕೆಯ ಅರ್ಜಿಯ ಸ್ಥಿತಿ ಪರಿಶೀಲನೆ ಮಾಡಬಹುದು. ಕಿಸಾನ್-ಸಮ್ಮಾನ್ ಯೋಜನೆಯ ಫಲಾನುಭವಿ ರೈತರ ಹೆಸರು ಮತ್ತು ಅವರ ಬ್ಯಾಂಕ್ಗೆ ಕಳಿಸಲಾದ ಹಣದ ಮೊತ್ತದ ಪಟ್ಟಿ ಇರುತ್ತದೆ). 4. ಫಲಾನುಭವಿಗಳ ಸ್ಥಿತಿ ಕ್ಲಿಕ್ ಮಾಡಿದ ಮೇಲೆ, ಅಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ಫೋನ್ ನಂಬರ್ ಅಥವಾ ಅಕೌಂಟ್ ನಂಬರ್ ನಮೂದಿಸಬೇಕು. ನಿಮ್ಮ ರಾಜ್ಯ, ಜಿಲ್ಲೆ, ಹಳ್ಳಿ ಇತ್ಯಾದಿ ಮಾಹಿತಿಗಳನ್ನೂ ನೀಡಬೇಕು. 5. ಇಷ್ಟಾದ ಮೇಲೆ ನಿಮ್ಮ ಡಾಟಾ ಪಡೆಯಬಹುದು.
4000 ರೂ.ಬರಬಹುದು ! ಇದು ಎಲ್ಲರಿಗೂ ಅಲ್ಲ. ಪಿಎಂ ಕಿಸಾನ್ ಯೋಜನೆಯ 9ನೇ ಕಂತಿನಡಿ ಯಾರು ಹಣ ಪಡೆದಿರಲಿಲ್ಲವೋ ಅವರಿಗೆ ಆ ಕಂತು ಮತ್ತು ಈ ಸಲದ 10ನೇ ಕಂತು ಸೇರಿ ಒಟ್ಟು 4 ಸಾವಿರ ರೂಪಾಯಿ ಬರಬಹುದು (ಅಂದರೆ ಎರಡೂ ಕಂತುಗಳ ತಲಾ 2000 ರೂ). ಹಾಗೇ, 9ನೇ ಕಂತಿನಲ್ಲಿ ಹಣ ಪಡೆಯದೆ ಇದ್ದವರು..ಈ ಸಲ ಒಟ್ಟಿಗೇ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: Moto G31: ಹೊಸ ವರ್ಷಕ್ಕೆ ಬಿಗ್ ಶಾಕ್: ಈ ಎರಡು ಸ್ಮಾರ್ಟ್ಫೋನ್ ಬೆಲೆಯಲ್ಲಿ ಬರೋಬ್ಬರಿ 3000 ರೂ. ಏರಿಕೆ
Published On - 1:03 pm, Sat, 1 January 22