ಅಂಡಮಾನ್‌ನಲ್ಲಿ 200 ಸ್ಕೂಬಾ ಡೈವರ್‌ಗಳೊಂದಿಗೆ ವಿಶ್ವ ದಾಖಲೆ ಬರೆದ ಆರ್. ಅಶೋಕ್ ಪುತ್ರ ಶರತ್
ವಿಪಕ್ಷ ನಾಯಕ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್ ಅವರು ಅಂಡಮಾನ್‌ನ ಸ್ವರಾಜ್ ದ್ವೀಪದ ಸಮುದ್ರದಾಳದಲ್ಲಿ 60x40 ಮೀಟರ್ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 200 ಸ್ಕೂಬಾ ಡೈವರ್‌ಗಳ ತಂಡದೊಂದಿಗೆ ಈ ಸಾಧನೆ ಮಾಡಿರುವ ಶರತ್, ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ ಅವರಿಂದ ಸನ್ಮಾನಿತರಾಗಿದ್ದಾರೆ.
ಬೆಂಗಳೂರು, ಆಗಸ್ಟ್ 16: ವಿಪಕ್ಷ ನಾಯಕ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್ ಅವರು ಅಂಡಮಾನ್‌ನ ಸ್ವರಾಜ್ ದ್ವೀಪದ ಸಮುದ್ರದಾಳದಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 60×40 ಮೀಟರ್ ಅಳತೆಯ ಈ ಭವ್ಯ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲು 200 ಸ್ಕೂಬಾ ಡೈವರ್‌ಗಳ ತಂಡದೊಂದಿಗೆ ಶರತ್ ಅಶೋಕ್ ಭಾಗಿಯಾಗಿದ್ದರು. ಈ ಐತಿಹಾಸಿಕ ಸಾಧನೆಗಾಗಿ ಶರತ್ ಅಶೋಕ್ ಅವರನ್ನು ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ ಅವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶರತ್ ಅವರಿಗೆ ಗಿನ್ನೆಸ್ ಪ್ರಮಾಣಪತ್ರವನ್ನೂ ಪ್ರದಾನ ಮಾಡಲಾಯಿತು. ತಮ್ಮ ಪುತ್ರನ ಈ ಅಪ್ರತಿಮ ಸಾಧನೆಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ತಂದೆಯಾಗಿ ತಮಗೆ ಇದು ಅತ್ಯಂತ ಹೆಮ್ಮೆಯ ಹಾಗೂ ಪದಗಳಲ್ಲಿ ವರ್ಣಿಸಲಾಗದ ಭಾವುಕ ಕ್ಷಣ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
