ಲೋಕಸಭಾ ಚುನಾವಣೆ ಬೆನ್ನಲ್ಲೇ ಅಲರ್ಟ್ ಆದ ರೈಲ್ವೆ ಪೊಲೀಸ್; ಪ್ರತಿ ಬೋಗಿ, ಬ್ಯಾಗ್, ಲಗೇಜ್ ತಪಾಸಣೆ

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಹಣ, ಮದ್ಯ ಸಾಗಿರುವ ಸಾಧ್ಯತೆ ಹೆಚ್ಚಿದೆ, ಹೀಗಾಗಿ ರೈಲ್ವೆ ಪೊಲೀಸರು ಅಲರ್ಟ್ ಆಗಿದ್ದಾರೆ. ಆರ್​ಪಿಎಫ್ ಮತ್ತು ರೈಲ್ವೆ ಪೊಲೀಸರು ಚುನಾವಣಾ ಚೆಕ್ ಪೋಸ್ಟ್ ನಿರ್ಮಿಸಿದ್ದು ರಾಜ್ಯಾದ್ಯಂತ ಹೊರ ರಾಜ್ಯದಿಂದ ಬರುವ ರೈಲ್ವೆ ಬೋಗಿಗಳ ತಪಾಸಣೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.

ಲೋಕಸಭಾ ಚುನಾವಣೆ ಬೆನ್ನಲ್ಲೇ ಅಲರ್ಟ್ ಆದ ರೈಲ್ವೆ ಪೊಲೀಸ್; ಪ್ರತಿ ಬೋಗಿ, ಬ್ಯಾಗ್, ಲಗೇಜ್ ತಪಾಸಣೆ
ಲೋಕಸಭಾ ಚುನಾವಣೆ ಬೆನ್ನಲ್ಲೇ ಅಲರ್ಟ್ ಆದ ರೈಲ್ವೆ ಪೊಲೀಸ್
Follow us
| Updated By: ಆಯೇಷಾ ಬಾನು

Updated on: Mar 24, 2024 | 10:54 AM

ಬೆಂಗಳೂರು, ಮಾರ್ಚ್​.24: ಲೋಕಸಭಾ ಚುನಾವಣೆಗೆ (Lok Sabha Election) ದಿನಾಂಕ ಫಿಕ್ಸ್ ಆಗಿದೆ. ಬೆಂಗಳೂರು ನಗರದಲ್ಲಿ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣೆ ಸಂಬಂಧ ದುಡ್ಡು ಸಾಗಾಣೆ, ಅನಧಿಕೃತ ಚಟುವಟಿಕೆಗಳ ಮೇಲೆ ನಿಗಾ ಇಡಲು ಚುನಾವಣಾ ಆಯೋಗ (Election Commission) ಹದ್ದಿನ ಕಣ್ಣಿಡಲು ಚೆಕ್ ಪೋಸ್ಟ್ ನಿರ್ಮಾಣ ಮಾಡಿದೆ. ಹಾಗೂ ಮತ್ತೊಂದೆಡೆ ರೈಲ್ವೇ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ರೈಲ್ವೆ ಇಲಾಖೆ ಪೊಲೀಸರಿಗೆ(Railway Police) ಮಾರ್ಗಸೂಚಿ ನೀಡಲಾಗಿದೆ. ಆರ್​ಪಿಎಫ್ ಮತ್ತು ರೈಲ್ವೆ ಪೊಲೀಸರು ಚುನಾವಣಾ ಚೆಕ್ ಪೋಸ್ಟ್ ನಿರ್ಮಿಸಿದ್ದು ರಾಜ್ಯಾದ್ಯಂತ ಹೊರ ರಾಜ್ಯದಿಂದ ಬರುವ ರೈಲ್ವೆ ಬೋಗಿಗಳ ತಪಾಸಣೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ ರೈಲ್ವೆ ನಿಲ್ದಾಣಗಳಲ್ಲಿಯೂ ಪ್ರತಿಯೊಬ್ಬರ ಲಗೇಜ್ ಪರಿಶೀಲನೆ ಮಾಡಲಾಗುತ್ತಿದೆ. ರೈಲ್ವೆ ಇಲಾಖೆ ಪೊಲೀಸರು ಮದ್ಯ ಹಾಗು ಹಣ ಸಾಗಾಣೆ ಬಗ್ಗೆ ಕಟ್ಟೆಚ್ಚರ ವಹಿಸಿದ್ದಾರೆ. ಇಪ್ಪತ್ತು ತಂಡಗಳನ್ನಾಗಿ ಮಾಡಿಕೊಂಡಿದ್ದು, ಒಂದೊಂದು ತಂಡದಲ್ಲಿ ಐದು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗ‌ದ ಸೂಚನೆ ಹಿನ್ನಲೆ ಅಲರ್ಟ್ ಆಗಿದ್ದು ಬೋಗಿಗಳಲ್ಲಿ ಬರುವ ಲಗೇಜ್, ಪ್ಯಾಕಿಂಗ್ ಗಳು ಹಾಗೂ ಅನುಮಾನಿತರ ಮೇಲೆ ನಿಗಾ ಇಡಲಾಗುತ್ತಿದೆ. ಆರ್​ಪಿಎಫ್ ತಂಡದ ಜೊತೆ ಶ್ವಾನದಳವೂ ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: ತನ್ನನ್ನು ಗೇಲಿ ಮಾಡಿದ್ದಕ್ಕೆ ಮಹಿಳೆಗೆ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದ ವ್ಯಕ್ತಿ

ಲೋಕಸಭಾ ಚುನಾವಣೆ ಹಿನ್ನಲೆ ನೀತಿ‌ ಸಂಹಿತೆ ಜಾರಿಯಾಗಿದ್ದು, ಬೆಂಗಳೂರು ನಗರ ಪ್ರದೇಶದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ದುಡ್ಡು ಸಾಗಾಣೆ, ಅನಧಿಕೃತ ಮಧ್ಯ ಸೇರಿದಂತೆ ದಾಖಲೆ ಇಲ್ಲದೇ ತಗೆದುಕೊಂಡು ಹೋಗುವ ಯಾವುದೇ ವಸ್ತುಗಳ ಮೇಲೆ ಚೆಕ್ ಪೋಸ್ಟ್‌ಗಳ ಮೂಲಕ ಚುನಾವಣಾ ಆಯೋಗದಿಂದ ಬರುವ ಹೋಗುವ ವಾಹನಗಳ ಮೇಲೆ ಹದ್ದಿನ ಕಣ್ಣಿದ್ದು ಒಟ್ಟು 104 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗ್ಗಿದ್ದು ಪ್ರತೊಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಚೆಕ್ಪೋಸ್ಟ್ ತೆರೆದಿದ್ದು, ಅಧಿಕಾರಿಗಳು ಮೂರು ಪಾಳೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇನ್ನೂ ಒಟ್ಟು 104 ಚೆಕ್ ಪೋಸ್ಟ್ ಪೈಕಿ ಬೆಂಗಳೂರು ಕೇಂದ್ರದಲ್ಲಿ 28, ದಕ್ಷಿಣ ಕ್ಷೇತ್ರ ದಲ್ಲಿ 23, ಬೆಂಗಳೂರು ಉತ್ತರದಲ್ಲಿ 21 ಹಾಗೂ ಬೆಂಗಳೂರು ನಗರ 32 ಚೆಕ್ ಪೋಸ್ಟ್ ನಿರ್ಮಾಣವಾಗಿದ್ದು, 629 ಅಧಿಕಾರಿಗಳ ನೇಮಕ, 297 ಫ್ಲೈಯಿಂಗ್ ಸ್ಕಾಡ್ ನೇಮಕ ಮಾಡಲಾಗಿದ್ದು, ಪ್ರತಿಯೊಂದು ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ಇನ್ನೂ ಚೆಕ್ ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಅನ್ನೋದರ ಕುರಿತು ಟಿವಿ ನೈನ್ ರಿಯಾಲಿಟಿ ಚೆಕ್ ನಡೆಸಿದ್ದು, ಕೆಲವು ಚೆಕ್ ಪೋಸ್ಟ್ ಗಳಲ್ಲಿ ಬರುವ ಹೋಗುವ ವಾಹನಗಳ ಮೇಲೆ‌ ಅಧಿಕಾರಿಗಳು ನಿಗಾ ವಹಿಸಿದ್ರೆ, ಇನ್ನೂ ಕೆಲವೆಡೆ ಅಧಿಕಾರಿಗಳು ಕಟ್ಟಿ ನಿಟ್ಟಿನ ಕ್ರಮಕ್ಕೆ ಮುಂದಾಗದೇ ಇರುವುದು ಕಂಡು ಬಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ