Ramadan 2023: ಚಂದ್ರದರ್ಶನ, ಇಂದಿನಿಂದ ಮುಸ್ಲಿಮರ ರಂಜಾನ್ ಉಪವಾಸ ವೃತ ಆರಂಭ

|

Updated on: Mar 24, 2023 | 6:55 AM

ಮಾರ್ಚ್ 24 ರಿಂದ ಬೆಂಗಳೂರು, ಮಂಗಳೂರು, ಮೈಸೂರು, ಧಾರವಾಡ ಮತ್ತು ಕರ್ನಾಟಕದ ಇತರ ನಗರಗಳಲ್ಲಿ ಮೊದಲ ರೋಜಾ (ಉಪವಾಸ) ಆಚರಿಸಲಾಗುತ್ತಿದೆ.

Ramadan 2023: ಚಂದ್ರದರ್ಶನ, ಇಂದಿನಿಂದ ಮುಸ್ಲಿಮರ ರಂಜಾನ್ ಉಪವಾಸ ವೃತ ಆರಂಭ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯ ಹಾಗೂ ದೇಶಾದ್ಯಂತ ಇಂದಿನಿಂದ ರಂಜಾನ್​ ಉಪವಾಸ ಆರಂಭವಾಗಿದೆ ಎಂದು ಬೆಂಗಳೂರು ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನಾ ಮಕ್ಸೂದ್ ಇಮ್ರಾನ್​ ಮಾಹಿತಿ ನೀಡಿದ್ದಾರೆ. ಮಾರ್ಚ್ 24ರಿಂದ ಮುಸ್ಲಿಮರಿಗೆ ಮೊದಲ ರಂಜಾನ್ ಉಪವಾಸ ಶುರುವಾಗಿದೆ. ಮಾರ್ಚ್ 23ರ ಗುರುವಾರ ಸಂಜೆ ರಾಜ್ಯದಲ್ಲಿ ಚಂದ್ರನ ದರ್ಶನವಾಗಿದೆ. ಹೀಗಾಗಿ ಶಬಾನ್ ತಿಂಗಳು ಮುಗಿದು ರಂಜಾನ್ ತಿಂಗಳು ಆರಂಭವಾಗಿದೆ. ಮಾರ್ಚ್ 24 ರಿಂದ ಬೆಂಗಳೂರು, ಮಂಗಳೂರು, ಮೈಸೂರು, ಧಾರವಾಡ ಮತ್ತು ಕರ್ನಾಟಕದ ಇತರ ನಗರಗಳಲ್ಲಿ ಮೊದಲ ರೋಜಾ (ಉಪವಾಸ) ಆಚರಿಸಲಾಗುತ್ತಿದೆ. ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ರಂಜಾನ್ ಮಾರ್ಚ್ 23 ರಂದು ಪ್ರಾರಂಭವಾಗಿದೆ.

ರಂಜಾನ್ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಸಂಜೆವರೆಗೂ ಆಹಾರ ನೀರನ್ನು ತ್ಯಜಿಸಿ ಉಪವಾಸ ಆಚರಿಸುತ್ತಾರೆ. ರಂಜಾನ್‌ ಉಪವಾಸವು ಮುಸ್ಲಿಮರಿಗೆ ಸ್ವಯಂ-ಶಿಸ್ತು ಮತ್ತು ಸ್ವಯಂ ಸಂಯಮವನ್ನು ಕಲಿಯಲು ಸಹಾಯ ಮಾಡುತ್ತದೆ. ಉಪವಾಸ (ರೋಜಾ) ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಇದು ಎಲ್ಲಾ ಆರೋಗ್ಯವಂತ ಮುಸ್ಲಿಮರಿಗೆ ಕಡ್ಡಾಯ. ಚಿಕ್ಕ ಮಕ್ಕಳು, ರೋಗಿಗಳು, ಪ್ರಯಾಣಿಕರು ಮತ್ತು ಗರ್ಭಿಣಿ, ಹಾಲುಣಿಸುವ ಅಥವಾ ಮುಟ್ಟಾಗುವ ಸಮಯದಲ್ಲಿ ಮಹಿಳೆಯರು ಉಪವಾಸ ಆಚರಿಸುವಂತಿಲ್ಲ.

ಇದನ್ನೂ ಓದಿ: Ramadan Timetable 2023: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹಾರ್, ಇಫ್ತಿಯಾರ್ ವೇಳಾಪಟ್ಟಿ

ನಗರ ಸಹಾರ್ ಇಫ್ತಿಯಾರ್
ಬೆಂಗಳೂರು ಬೆಳಿಗ್ಗೆ 5:10 ಸಂಜೆ 6:32
ಮಂಗಳೂರು ಬೆಳಗ್ಗೆ 5:21 ಸಂಜೆ 6:43
ಮೈಸೂರು ಬೆಳಗ್ಗೆ 5:14 ಸಂಜೆ 6:34
ಧಾರವಾಡ ಬೆಳಗ್ಗೆ 5:19 ಸಂಜೆ 6:42

ಪ್ರತಿ ಇಸ್ಲಾಮಿಕ್ ತಿಂಗಳಂತೆ, ರಂಜಾನ್ ಕೂಡ 29 ಅಥವಾ 30 ದಿನಗಳ ಮಾಸವಾಗಿದೆ. ಈ ಪವಿತ್ರ ತಿಂಗಳ 29 ನೇ ದಿನದಂದು ಚಂದ್ರನ ದರ್ಶನವಾದಾಗ ಅದನ್ನು ಚಂದ್ ರಾತ್ ಎಂದೂ ಕರೆಯಲಾಗುತ್ತದೆ. ಚಂದ್ರ ದರ್ಶನದ ನಂತರ ರಂಜಾನ್ ಹಬ್ಬ ಆಚರಿಸಲಾಗುತ್ತದೆ.

ಬೆಂಗಳೂರು ಉಪವಾಸ ವೇಳಾಪಟ್ಟಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:51 am, Fri, 24 March 23