Ramadan Timetable 2023: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹಾರ್, ಇಫ್ತಿಯಾರ್ ವೇಳಾಪಟ್ಟಿ
ಈ ವರ್ಷ, ರಂಜಾನ್ ಮಾರ್ಚ್ 22 ರ ಬುಧವಾರ ಆರಂಭವಾಗುತ್ತೆ. ಚಂದ್ರನನ್ನು ನೋಡಿ ಉಪವಾಸದ ದಿನವನ್ನು ಪರಿಗಣಿಸಲಾಗುತ್ತೆ. ಇನ್ನು ಮಾರ್ಚ್ 22ರಂದು ರಂಜಾನ್ ಉಪವಾಸ ಆರಂಭವಾಗಿ ಏಪ್ರಿಲ್ 22ಕ್ಕೆ ಕೊನೆಯಾಗುತ್ತೆ.
Ramzan Time Table 2023 ಇಸ್ಲಾಮಿಕ್ ಕ್ಯಾಲೆಂಡರ್ನ 9ನೇ ತಿಂಗಳೇ ರಂಜಾನ್. ಈ ತಿಂಗಳನ್ನು ಮುಸ್ಲಿಮರು ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ತಿಂಗಳಾಗಿ ಪರಿಗಣಿಸಿ ತಿಂಗಳು ಪೂರ್ತಿ ಉಪವಾಸ ಮಾಡಿ, ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ರಂಜಾನ್ ಸಂದರ್ಭದಲ್ಲಿ ದೇವರು ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ನ ಮೊದಲ ಆವೃತ್ತಿಯನ್ನು ಪ್ರವಾದಿ ಮಹಮ್ಮದರಿಗೆ ಬೋಧಿಸಿದ್ದರು ಎಂಬ ನಂಬಿಕೆಯಿದೆ. ರಂಜಾನ್ ತಿಂಗಳ ಕೊನೇ ದಿನ ಅಂದ್ರೆ ಉಪವಾಸದ ಕೊನೇ ದಿನವನ್ನು ರಂಜಾನ್(Ramadan) ಹಬ್ಬವಾಗಿ ಈದ್ ಎಂದು ಆಚರಿಸಲಾಗುತ್ತದೆ. ಇನ್ನು ರಂಜಾನ್ನಲ್ಲಿ ಆಚರಿಸುವ ಉಪವಾಸದಲ್ಲಿ ಮುಂಜಾನೆ ಸೂರ್ಯ ಹುಟ್ಟುವ ಮೊದಲು ಮಾಡುವ ತಿಂಡಿಯನ್ನು ಸಹಾರ್ ಎಂದು ಹಾಗೂ ಸಂಜೆ ಸೂರ್ಯ ಮುಳುಗಿದ ಮೇಲೆ ಉಪವಾಸ ಪೂರ್ಣಗೊಳಿಸುವುದನ್ನು ಇಫ್ತಿಯಾರ್ ಎನ್ನುತ್ತಾರೆ. ಇಫ್ತಿಯಾರ್ ವೇಳೆ ರುಚಿಕರವಾದ ಹಾಗೂ ಪೌಷ್ಟಿಕಾಂಶಗಳಿರುವ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತೆ.
ರಂಜಾನ್ 2023 ಯಾವಾಗ?
ಚಂದ್ರನ ಚಲನೆಯ ಆಧಾರದ ಮೇಲೆ ಇಸ್ಲಾಮಿಕ್ ಕ್ಯಾಲೆಂಡರನ್ನು ಪರಿಗಣಿಸಲಾಗುತ್ತೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಪ್ರತಿ ವರ್ಷ ಸುಮಾರು 10 ದಿನಗಳ ಮುಂಚಿತವಾಗಿ ಪವಿತ್ರ ರಂಜಾನ್ ತಿಂಗಳು ಬರುತ್ತದೆ. ಪ್ರತಿ ವರ್ಷ ರಂಜಾನ್ ಹಬ್ಬದ ದಿನಾಂಕ, ತಿಂಗಳು ಬದಲಾಗುತ್ತಿರುತ್ತದೆ. ಈ ವರ್ಷ, ರಂಜಾನ್ ಮಾರ್ಚ್ 24ರ ಶುಕ್ರವಾರ ಆರಂಭವಾಗುತ್ತೆ. ಚಂದ್ರನನ್ನು ನೋಡಿ ಉಪವಾಸದ ದಿನವನ್ನು ಪರಿಗಣಿಸಲಾಗುತ್ತೆ. ಇನ್ನು ಮಾರ್ಚ್ 24ರಂದು ರಂಜಾನ್ ಉಪವಾಸ ಆರಂಭವಾಗಿ ಏಪ್ರಿಲ್ 24ಕ್ಕೆ ಕೊನೆಯಾಗುತ್ತೆ. ಇದಾದ ನಂತರ ಹಬ್ಬವನ್ನು ಆಚರಿಸಲಾಗುತ್ತೆ. ಚಂದ್ರನ ಚಲನೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕೊಂಚ ವಿಭಿನ್ನವಾಗಿರುತ್ತದೆ. ಹಾಗಾಗಿ ಸಹಾರ್ ಮತ್ತು ಇಫ್ತಿಯಾರ್ ಸಮಯ ಒಂದು ಕಡೆ ಒಂದು ರೀತಿ ಇರುತ್ತದೆ.
ಇದನ್ನೂ ಓದಿ: Ramadan Fasting: ರಂಜಾನ್ ಸಮಯದಲ್ಲಿ ಮಾಡುವ ಉಪವಾಸದ ಹಿಂದಿದೆ ಅನೇಕ ಆರೋಗ್ಯ ಪ್ರಯೋಜನಗಳು
ವಿವಿಧ ನಗರಗಳ ಉಪವಾಸ ವೇಳಾಪಟ್ಟಿ
- ಮುಂಬೈ – ಬೆಳಗ್ಗೆ 05:33 ರಿಂದ ಸಂಜೆ 06:49 ರವರೆಗೆ
- ದೆಹಲಿ – ಬೆಳಗ್ಗೆ05:11 ರಿಂದ ಸಂಜೆ 06:32 ರವರೆಗೆ
- ಚೆನ್ನೈ- ಬೆಳಗ್ಗೆ 05:05 ರಿಂದ ಸಂಜೆ 06:20 ರವರೆಗೆ
- ಹೈದರಾಬಾದ್- ಬೆಳಿಗ್ಗೆ 05:11 ರಿಂದ ಸಂಜೆ 06:29 ರವರೆಗೆ
- ಬೆಂಗಳೂರು- ಬೆಳಗ್ಗೆ 05:16 ರಿಂದ ಸಂಜೆ 06:34 ರವರೆಗೆ
- ಅಹಮದಾಬಾದ್ – ಬೆಳಗ್ಗೆ 05:33 ರಿಂದ ಸಂಜೆ 06:50 ರವರೆಗೆ
- ಕೋಲ್ಕತ್ತಾ -ಬೆಳಗ್ಗೆ 04:30 ರಿಂದ ಸಂಜೆ 05:47 ರವರೆಗೆ
- ಪುಣೆ- ಬೆಳಗ್ಗೆ 05:29 ರಿಂದ ಸಂಜೆ 06:48 ರವರೆಗೆ
- ಜೈಪುರ -ಬೆಳಗ್ಗೆ 05:18 ರಿಂದ ಸಂಜೆ 06:39 ರವರೆಗೆ
- ಲಕ್ನೋ- ಬೆಳಗ್ಗೆ 04:57 ರಿಂದ ಸಂಜೆ 06:17 ರವರೆಗೆ
- ಕಾನ್ಪುರ -ಬೆಳಗ್ಗೆ 05:00 ರಿಂದ ಸಂಜೆ 06:20 ರವರೆಗೆ
- ಇಂದೋರ್ – ಬೆಳಗ್ಗೆ 05:20 ರಿಂದ ಸಂಜೆ 06:40 ರವರೆಗೆ
- ಪಾಟ್ನಾ- ಬೆಳಗ್ಗೆ 04:41 ರಿಂದ ಸಂಜೆ 06:00 ರವರೆಗೆ
- ಚಂಡೀಗಢ- ಬೆಳಗ್ಗೆ 05:11 ರಿಂದ ಸಂಜೆ 06:35 ರವರೆಗೆ
ಬೆಂಗಳೂರಿನ ಉಪವಾಸದ ವೇಳಾಪಟ್ಟಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:30 am, Tue, 21 March 23