Teenage hygiene: ಹದಿಹರೆಯದ ಮಕ್ಕಳಿಗೆ ಉತ್ತಮ ನೈರ್ಮಲ್ಯ ಅಭ್ಯಾಸ ಬೆಳೆಸಲು ಪ್ರಾಯೋಗಿಕ ತಂತ್ರ ಇಲ್ಲಿದೆ
ನಿಮ್ಮ ಹದಿಹರೆಯದ ಪ್ರಾಯದ ಮಕ್ಕಳಲ್ಲಿ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಬೆಳೆಸಲು ಸಹಾಯ ಮಾಡುವ ಕೆಲವೊಂದು ನೈರ್ಮಲ್ಯ ಅಭ್ಯಾಸಗಳನ್ನು ಪರಿಶೀಲಿಸಿ.
ಹದಿಹರೆಯದವರಲ್ಲಿ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಖಾತ್ರಿಪಡಿಸುವುದು ಅವರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಬಹಳ ಮುಖ್ಯವಾಗಿದೆ. ಹದಿಹರೆಯದವರು ಹೆಚ್ಚು ಸ್ವತಂತ್ರರಾಗುತ್ತಿದ್ದಂತೆ, ಅವರ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅವರ ಜವಬ್ದಾರಿಯಾಗಿರುತ್ತದೆ. ಪೋಷಕರು ನೈರ್ಮಲ್ಯದ ಅಭ್ಯಾಸಗಳ ಬಗ್ಗೆ ತಮ್ಮ ಹದಿಹರೆಯದ ಮಕ್ಕಳಿಗೆ ತಿಳಿಸಿಕೊಡಬೇಕಾಗುತ್ತದೆ. ಹದಿಹರೆಯದವರಲ್ಲಿ ಉತ್ತಮ ನೈರ್ಮಲ್ಯವನ್ನು ಬೆಳೆಸಿಕೊಳ್ಳಲು ಹಾಗೂ ಆತ್ಮವಿಶ್ವಾಸದಿಂದಿರಲು ಇಲ್ಲಿವೆ ಕೆಲವೊಂದು ಸಲಹಾ ಮಾರ್ಗಗಳು.
ಹದಿಹರೆಯದವರಲ್ಲಿ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಬೇಳೆಸಿಕೊಳ್ಳಲು ಇರುವ ಸಲಹೆಗಳು:
ಟೆಕಿಟೊರೊದ ಸಂಸ್ಥಾಪಕ ಹಾಗೂ ಪೇರೆಂಟಿಂಗ್ ಎಕ್ಸ್ಪರ್ಟ್ ಪ್ರಸನ್ನ ವಸನಾಡು ಅವರು ತಮ್ಮ ಹದಿಹರೆಯದ ಮಕ್ಕಳಲ್ಲಿ ಉತ್ತಮ ನೈರ್ಮಲ್ಯದ ಅಭ್ಯಾಸಗಳನ್ನು ಬೆಳೆಸಲು ಪೋಷಕರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಸಾಂದರ್ಭಿಕ ಮತ್ತು ಪ್ರಾಮಾಣಿಕ ಸಂಭಾಷಣೆಯನ್ನು ನಡೆಸಿ: ನಿಮ್ಮ ಹದಿಹರೆಯದ ಮಕ್ಕಳಿಗೆ ನೈರ್ಮಲ್ಯದ ಪ್ರಾಮುಖ್ಯತೆಯ ಬಗ್ಗೆ ಉಪನ್ಯಾಸ ನೀಡುವ ಬದಲು, ಅದರ ಬಗ್ಗೆ ಮುಕ್ತ ಮತ್ತು ಪ್ರಾಮಾಣಿಕ ಸಂಭಾಷಣೆಯನ್ನು ನಡೆಸಲು ಪ್ರಯತ್ನಿಸಿ. ನೈರ್ಮಲ್ಯ ಏಕೆ ಅಗತ್ಯ ಎಂಬುದನ್ನು ವಿವರಿಸಿ ಹಾಗೂ ಪ್ರಸ್ತುತ ಅವರ ಅಭ್ಯಾಸಗಳ ಬಗ್ಗೆ ಅವರು ಹೇಗೆ ಭಾವಿಸುತ್ತಾರೆ ಎಂಬುದನ್ನು ಕೇಳಿ. ಅವರ ಆಲೋಚನೆಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಅವರನ್ನು ಪ್ರೋತ್ಸಾಹಿಸಿ. ಇದರಿಂದ ಅವರಿಗೆ ನೈರ್ಮಲ್ಯದ ದಿನಚರಿಯನ್ನು ರಚಿಸಲು ನೀವು ಸಹಾಯ ಮಾಡಿದಂತಾಗುತ್ತದೆ.
ಉತ್ತಮ ಉದಾಹರಣೆಗಳನ್ನು ಕೊಡಿ: ಹದಿಹರೆಯದವರು ಸಾಮಾನ್ಯವಾಗಿ ತಮ್ಮ ಪೋಷಕರಿಂದ ಎಲ್ಲವನ್ನು ಕಲಿಯುತ್ತಾರೆ. ಆದ್ದರಿಂದ ನೈರ್ಮಲ್ಯದ ವಿಷಯದಲ್ಲಿ ಉತ್ತಮ ಉದಾಹರಣೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು ಮುಖ್ಯವಾಗಿದೆ. ದಿನದಲ್ಲಿ ಎರಡು ಬಾರಿ ಹಲ್ಲುಜ್ಜುವುದು, ನಿಯಮಿತವಾಗಿ ಕೈಗಳನ್ನು ತೊಳೆಯುವುದು, ದಿನದಲ್ಲಿ ಎರಡು ಬಾರಿ ಸ್ನಾನ ಮಾಡುವುದು ಮುಂತಾದವುಗಳನ್ನು ನೀವೇ ಅಭ್ಯಾಸ ಮಾಡುವ ಮೂಲಕ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಅವರಿಗೆ ತೋರಿಸಿ.
ಮೋಜಿನಿಂದ ನೈರ್ಮಲ್ಯವನ್ನು ಕಲಿಸಿ: ಹದಿಹರೆಯದವರಿಗೆ ನೈರ್ಮಲ್ಯವನ್ನು ಕೆಲಸಕ್ಕಿಂತ ಹೆಚ್ಚಾಗಿ ಮೋಜು ಮತ್ತು ಆನಂದದಾಯಕ ಚಟುವಟಿಕೆಗಳನ್ನಾಗಿ ಮಾಡಲು ಪ್ರೋತ್ಸಾಹಿಸಿ. ಉದಾಹರಣೆಗೆ ನೀವು ಅವರಿಗೆ ತಂಪಾದ ಬಾಡಿವಾಶ್, ಮೋಜಿನ ಟೂತ್‌ಬ್ರೆಷ್‌ಗಳನ್ನು ಒದಗಿಸಿಕೊಡಬಹುದು.
ಮೊಡವೆ ಮತ್ತು ಚರ್ಮದ ಆರೈಕೆಯ ಬಗ್ಗೆ ಅವರಿಗೆ ಶಿಕ್ಷಣ ನೀಡಿ: ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳು ಅನೇಕ ಹದಿಹರೆಯದವರಿಗೆ ಮುಜುಗರದ ಮೂಲವಾಗಿದೆ. ನಿಮ್ಮ ಹದಿಹರೆಯದ ಮಕ್ಕಳಿಗೆ ತ್ವಚೆಯ ಪ್ರಾಮುಖ್ಯತೆಯ ಬಗ್ಗೆ ಶಿಕ್ಷಣ ನೀಡಿ. ಉದಾಹರಣೆಗೆ ಸ್ವಚ್ಛವಾಗಿ ಮುಖವನ್ನು ತೊಳೆಯುವುದು, ಮುಖವನ್ನು ಆಗಾಗ್ಗೆ ಮುಟ್ಟುವುದನ್ನು ತಪ್ಪಿಸುವುದು, ಅವರ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಉತ್ಪನ್ನಗಳನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದನ್ನೆಲ್ಲ ಕಲಿಸಬೇಕು.
ಇದನ್ನೂ ಓದಿ:Kaigal Waterfalls: ಬೇಸಿಗೆಯ ವೀಕೆಂಡ್ಗೆ ಬೆಂಗಳೂರು ಸಮೀಪವಿರುವ ಕೈಗಲ್ ಫಾಲ್ಸ್ ಬೆಸ್ಟ್ ಪ್ಲಾನ್
ನಿಯಮಿತವಾಗಿ ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸಿ: ನಿಯಮಿತವಾದ ವ್ಯಾಯಾಮವು ದೈಹಿಕ ಆರೋಗ್ಯಕ್ಕೆ ಮಾತ್ರ ಪ್ರಯೋಜನಕಾರಿಯಲ್ಲದೆ, ಇದು ಬೆವರುವಿಕೆಯನ್ನು ಉತ್ತೇಜಿಸುವ ಮತ್ತು ಟಾಕ್ಸಿನ್‌ಗಳನ್ನು ಹೊರಹಾಕುವ ಮೂಲಕ ನೈರ್ಮಲ್ಯಕ್ಕೆ ಸಹಾಯ ಮಾಡುತ್ತದೆ.
ನಿದ್ರೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡಿ: ಸಾಕಷ್ಟು ನಿದ್ರೆ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾನೇ ಮುಖ್ಯವಾಗಿದೆ. ಮತ್ತು ಇದು ನೈರ್ಮಲ್ಯಕ್ಕೆ ಸಹಾಯ ಮಾಡುತ್ತದೆ. ನಾವು ಮಲಗಿದಾಗ ನಮ್ಮ ದೇಹವು ಕಡಿಮೆ ಬೆವರು ಮತ್ತು ಎಣ್ಣೆಯನ್ನು ಉತ್ಪಾದಿಸುತ್ತದೆ. ಇದು ದೇಹದ ವಾಸನೆ ಮತ್ತು ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹದಿಹರೆಯದವರಿಗೆ ಪ್ರತಿದಿನ 8 ರಿಂದ 10 ಗಂಟೆಗಳ ನಿದ್ರೆಯನ್ನು ಮಾಡುವಂತೆ ನೋಡಿಕೊಳ್ಳಿ.
ವೈಯಕ್ತಕ ಉತ್ಪನ್ನಗಳ ಬಗ್ಗೆ ಪರಿಶೀಲಿಸಿ: ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಅಗತ್ಯವಾಗಿರುತ್ತದೆ. ವಿಶೇಷವಾಗಿ ಡಿಯೋಡರೆಂಟ್, ಮುಟ್ಟಿನ ನೈರ್ಮಲ್ಯದ ಉತ್ಪನ್ನಗಳನ್ನು ಹೇಗೆ ಸರಿಯಾಗಿ ಬಳಸಬೇಕು, ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಬಳಸಬೇಕು ಎಂಬುದರ ಬಗ್ಗೆ ತಿಳಿಸಿಕೊಡಿ.
Published On - 3:43 pm, Tue, 21 March 23