AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kaigal Waterfalls: ಬೇಸಿಗೆಯ ವೀಕೆಂಡ್​ಗೆ ಬೆಂಗಳೂರು ಸಮೀಪವಿರುವ ಕೈಗಲ್ ಫಾಲ್ಸ್ ಬೆಸ್ಟ್ ಪ್ಲಾನ್

ಸ್ಪಟಿಕದಂತಹ ಕಪ್ಪು ಕಲ್ಲುಗಳ ಮೇಲಿಂದ ಶಿವ ಲಿಂಗದ ಮೇಲೆ ಸುಮಾರು 40 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸುಂದರ ದೃಶ್ಯಾವಳಿಗಳನ್ನು ನೋಡಲು ಜನ ನಾನಾ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ.

Kaigal Waterfalls: ಬೇಸಿಗೆಯ ವೀಕೆಂಡ್​ಗೆ ಬೆಂಗಳೂರು ಸಮೀಪವಿರುವ ಕೈಗಲ್ ಫಾಲ್ಸ್ ಬೆಸ್ಟ್ ಪ್ಲಾನ್
ಕೈಗಲ್ ಫಾಲ್ಸ್
Follow us
ಆಯೇಷಾ ಬಾನು
|

Updated on: Mar 10, 2023 | 9:30 AM

ಚುರು ಚುರು ಬೇಸಿಗೆಯಲ್ಲಿ(Summer) ಪ್ರವಾಸಕ್ಕೆ ಹೋಗೋದು ಕೆಲವರಿಗೆ ಕಿರಿ ಕಿರಿ ಅನಿಸಿದರೆ, ಮತ್ತೆ ಕೆಲವರಿಗೆ ಸಮುದ್ರದ ಕಿನಾರೆ, ವಾಟರ್ ಫಾಲ್ಸ್​ಗೆ ಹೋಗಿ ಮೋಚು ಮಸ್ತಿ ಮಾಡುವುದು ಖುಷಿ ಕೊಡುತ್ತೆ. ಅದರಲ್ಲೂ ಜುಳು ಜುಳು ಹರಿಯುವ ನೀರಲ್ಲಿ ಆಟ ಆಡಿ, ಸ್ನೇಹಿತರೊಂದಿಗೆ ಎಂಜಾಯ್ ಮಾಡುವ ಕ್ಷಣಗಳು ಯಾರಿಗೆ ತಾನೆ ಬೇಡ. ಬನ್ನಿ ನಾವಿಂದು ನಿಮಗೆ ಬೇಸಿಗೆಯ ಬೆಸ್ಟ್ ವೀಕೆಂಡ್ ಪ್ಲಾನ್ ಹೇಳ್ತೀವಿ. ಕೈಗಲ್‌ ಫಾಲ್ಸ್‌(Kaigal Falls).. ಸ್ನೇಹಿತರೊಂದಿಗೆ ಒಂದೇ ಒಂದು ದಿನದ ಪ್ರವಾಸಕ್ಕೆ ಹೋಗ ಬೇಕು ಎಂದು ಬಯಸುವವರು ಕೈಗಲ್ ಫಾಲ್ಸ್​ಗೆ ಹೋಗಿಬರಬಹುದು. ಆದ್ರೆ ಇಲ್ಲಿಗೆ ಹೋಗುವವರು ತಮ್ಮ ಸ್ವಂತ ವಾಹನವನ್ನೇ ಬಳಸುವುದು ಉಪಯುಕ್ತ.

ಕೈಗಲ್ ಫಾಲ್ಸ್ ಒಂದು ಸುಂದರ ತಾಣ. ಸ್ಪಟಿಕದಂತಹ ಕಪ್ಪು ಕಲ್ಲುಗಳ ಮೇಲಿಂದ ಶಿವ ಲಿಂಗದ ಮೇಲೆ ಸುಮಾರು 40 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸುಂದರ ದೃಶ್ಯಾವಳಿಗಳನ್ನು ನೋಡಲು ಜನ ನಾನಾ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಜಾರುವ ಬಂಡೆಗಳನ್ನು ಹತ್ತಿ, ಇಳಿದು ಈ ಸ್ಥಳಕ್ಕೆ ಬರಬೇಕು. ಮಳೆಗಾಲದಲ್ಲಂತೂ ಇಲ್ಲಿ ಬಹಳ ಜಾಗೃತೆ ವಹಿಸಬೇಕು. ಸದಾ ನೀರು ಹರಿಯುವ ಕಾರಣ ಜಾರುವುದು, ಬೀಳುವುದು ಸಾಮಾನ್ಯವಾಗಿರುತ್ತೆ. ಇಲ್ಲಿ ವಿಶೇಷವೆಂದರೆ ಶಿವಮೊಗ್ಗದ ಜೋಗ ಜಲಪಾತವನ್ನು ಯಾವ ರೀತಿ ಜಲಧಾರೆಯ ಮೇಲಿಂದ ನೋಡಬಹುದೋ ಅದೇ ರೀತಿ ಕೈಗಲ್ಸ್ ಫಾಲ್ಸನ್ನು ಕೂಡ ಮೇಲಿಂದ ನೋಡಬಹುದು. ಕಪ್ಪು ಬಂಡೆ ಕಲ್ಲುಗಳನ್ನು ಹತ್ತುತ್ತ ಹೋಗುತ್ತಿದ್ದಂತೆ ಅಲ್ಲಲ್ಲಿ ಚಿಕ್ಕ ಚಿಕ್ಕ ಜಲಪಾತಗಳು ಕಂಡು ಬರುತ್ತವೆ. ಸುಮಾರು ಐದಾರು ಜಲಪಾತಗಳನ್ನು ಇಲ್ಲಿ ನೀವು ನೋಡಬಹುದು. ಇನ್ನು ಮಳೆಗಾಲದಲ್ಲಿ ಈ ಜಲಪಾತ ಮೈದುಂಬಿ ಹರಿಯುತ್ತೆ ಈ ವೇಳೆ ಈ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳುವುದೇ ಸ್ವರ್ಗ. ಇನ್ನು ನೀರಲ್ಲಿ ಆಟ ಆಡಲು ಇಷ್ಟಪಡುವವರು ನೀರಿನಲ್ಲಿ ಇಳಿಯಬಹುದು. ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಒಂದು ದಿನ ಪ್ರವಾಸ ಮಾಡಲು ಇದು ಬೆಸ್ಟ್ ಪ್ಲೇಸ್.

Kaigal Falls

ಇದನ್ನೂ ಓದಿ: ನಿಮ್ಮ ವೀಕೆಂಡ್​​ ಟೂರ್​​​ ವಿಶೇಷವಾಗಿಸಲು ಈ ಟಿಪ್ಸ್​​ ಫಾಲೋ ಮಾಡಿ

ಶಿವ ಲಿಂಗದ ಮೇಲಿಂದ ಹರಿಯುತ್ತೆ ನೀರು

ತೆಲುಗು ಸಿನಿಮಾ ಬಾಹುಬಲಿಯಲ್ಲಿ ನಟ ಪ್ರಭಾಸ್ ತನ್ನ ತಾಯಿಗೆ ಸಹಾಯ ಮಾಡಲೆಂದು ಶಿವಲಿಂಗವನ್ನು ತನ್ನ ಬಾಹುಗಳ ಶಕ್ತಿಯಿಂದ ಎತ್ತಿ ಜಲಪಾದ ಬಳಿ ಇಡುತ್ತಾನೆ. ಈ ಮೂಲಕ ಪ್ರತಿ ನಿತ್ಯ, ಪ್ರತಿ ಕ್ಷಣ ಶಿವಲಿಂಗಕ್ಕೆ ಜಲಾಭಿಷೇಕವಾಗುತ್ತೆ. ಇದೇ ರೀತಿಯ ದೃಶ್ಯವನ್ನು ಕೈಗಲ್ ಫಾಲ್ಸ್​ನಲ್ಲೂ ನೋಡಬಹುದು. ಎರಡು ಬದಿಯ ಜಲಪಾತದ ಮಧ್ಯದಲ್ಲಿ ಶಿವಲಿಂಗವಿದೆ. ಇದು ಜಲಪಾತದ ಸೌಂದರ್ಯವನ್ನು ಹೆಚ್ಚಿಸಿದೆ. ಮಳೆಗಾಲದಲ್ಲಿ ರಭಸದಿಂದ ಧುಮ್ಮಿಕ್ಕುವ ನೀರು ಶಿವಲಿಂಗದ ಮೇಲೆ ಅಭಿಷೇಕದಂತೆ ಬೀಳುತ್ತಿರುತ್ತದೆ. ಆದ್ರೆ ಬೇಸಿಗೆ ಸಮಯದಲ್ಲಿ ನೀರು ಕಮ್ಮಿ ಇರುತ್ತೆ. ಈ ಸ್ಥಳ ಅಧ್ಯಾತ್ಮಿಕ ಭಾವನೆಯನ್ನೂ ಜಾಗೃತಗೊಳಿಸುತ್ತದೆ. ಇನ್ನು ಈ ಜಲಪಾತಕ್ಕೆ ಹೋಗುವಾಗ ಕೊಂಚ ದೂರ ನಡಿಯಬೇಕು. ಅಲ್ಲಿಲ್ಲಿ ನೀರು, ಸಮೋಸ, ಬಿಸಿ ಬಿಸಿ ಬಜ್ಜಿ, ಚಿರುಮುರಿಗಳಂತಹ ರುಚಿಕರ ತಿನಿಸು ದೊರೆಯುತ್ತವೆ. ಆದ್ರೆ ಕೋತಿ ಕಾಟ ಹೆಚ್ಚಿದೆ.

Kaigal Falls

ಜಲಪಾತ ತಲುಪುವುದು ಹೇಗೆ?

ಕೈಗಲ್‌ ಫಾಲ್ಸ್ ಇರುವುದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ. ಕೌಂಡಿನ್ಯ ಎಂಬ ವನ್ಯಜೀವಿ ಅಭಯಾರಣ್ಯದ ನಡುವೆ ಅಡಗಿರುವ ಹಿಡನ್ ಜೆಮ್ ಇದು. ಈ ಜಲಪಾತದ ಸುತ್ತ ಕೈಗಲ್ ಎಂಬ ಗ್ರಾಮ ಇರುವುದರಿಂದ ಅದೇ ಹೆಸರು ಇದಕ್ಕೆ ಬಂದಿದೆ. ಕೈಗಲ್ ಫಾಲ್ಸ್ ಬೆಂಗಳೂರಿನಿಂದ ಸುಮಾರು 130 ಕಿಮೀ ದೂರದಲ್ಲಿದೆ. ಕೋಲಾರದ ಮುಳಬಾಗಿಲಿಂದ 25 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಹೋಗುವವರು ಕೋಲಾರ ಹೆದ್ದಾರಿಯ ಕಡೆಗೆ ಪ್ರಯಾಣಿಸಿ. ಕುಪ್ಪಂ ಗ್ರಾಮದಿಂದ ಸ್ವಲ್ಪ ಮುಂದೆ ಕೈಗಲ್‌ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ 2.5 ಕಿ.ಮೀ ದೂರದಲ್ಲಿ ಕೈಗಲ್‌ ಜಲಪಾತವಿದೆ. ಇಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದೆ.

Kaigal Falls

Kaigal Falls

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು