ನಿಮ್ಮ ವೀಕೆಂಡ್ ಟೂರ್ ವಿಶೇಷವಾಗಿಸಲು ಈ ಟಿಪ್ಸ್ ಫಾಲೋ ಮಾಡಿ
ನೀವು ವಾರಾಂತ್ಯದ ಪ್ರವಾಸವನ್ನು ಕೈಗೊಳ್ಳುವಾಗ ಆಯ್ಕೆ ಮಾಡುವ ತಾಣಗಳ ಹೊರತಾಗಿಯೂ ನೀವು ತಿಳಿದುಕೊಳ್ಳಬೇಕಾದದ್ದು ತುಂಬಾ ಇದೆ.
ನೀವು ವಾರಾಂತ್ಯದ ಪ್ರವಾಸವನ್ನು ಕೈಗೊಳ್ಳುವಾಗ ಆಯ್ಕೆ ಮಾಡುವ ತಾಣಗಳ ಹೊರತಾಗಿಯೂ ನೀವು ತಿಳಿದುಕೊಳ್ಳಬೇಕಾದದ್ದು ತುಂಬಾ ಇದೆ. ನಿಮ್ಮವರೊಂದಿಗೆ ವೀಕೆಂಡ್ ಟೂರ್ ಮಾಡುವಂತಹ ಸಮಯದಲ್ಲಿ ಅಲ್ಲಿ ನೀವು ಆರಾಮದಾಯಕವಾಗಿ ಸಮಯವನ್ನು ಕಳೆಯುವುದು ಮುಖ್ಯ. ನೀವು ಕೆಲವೊಮ್ಮೆ ಧರಿಸುವ ಬಟ್ಟೆ ಹಾಗೂ ಆಭರಣಗಳು ನಿಮ್ಮನ್ನು ಕಿರಿ ಕಿರಿಯುಂಟು ಮಾಡಬಹುದು. ಆದ್ದರಿಂದ ನೀವು ಪ್ರವಾಸವನ್ನು ಕೈಗೊಳ್ಳುವಾಗ ಅನುಸರಿಸಬೇಕಾದ ಕೆಲವೊಂದು ಟಿಪ್ಸ್ ಇಲ್ಲಿವೆ.
ಸ್ನೀಕರ್ ಶೂಗಳನ್ನು ಧರಿಸಿ:
ನೀವು ಹೊಸ ಸ್ಥಳಗಳನ್ನು ಅನ್ವೇಷಿಸುವಾಗ, ವಾರಾಂತ್ಯದಲ್ಲಿ ಟ್ರೆಕ್ಕಿಂಗ್ ಹೋಗುವ ಪ್ಲಾನ್ ನೀವು ಮಾಡಿದ್ದರೆ, ಸ್ನೀಕರ್ ಶೂಗಳನ್ನು ಧರಿಸಿ. ಇದು ನಿಮ್ಮ ಕಾಲುಗಳಿಗೆ ಸಾಕಷ್ಟು ಆರಾಮದಾಯಕವಾಗಿರುತ್ತದೆ.
ಕ್ಯಾಶುಯಲ್ ಲುಕ್‌ಗಾಗಿ ಬಿಳಿ ಟೀ ಶರ್ಟ್ ಆಯ್ಕೆ ಮಾಡಿ:
ಬಿಳಿ ಟೀ ಶರ್ಟ್ ನಿಮಗೆ ಕ್ಯಾಶುಯಲ್ ಲುಕ್ ನೀಡುವುದರ ಜೊತೆಗೆ ಆರಾಮದಾಯಕವೂ ಆಗಿದೆ. ಕ್ಲಾಸಿಕ್ ವೈಟ್ ಟಿ-ಶರ್ಟ್, ಡೆನಿಮ್ ಶಾರ್ಟ್ಸ್ ಮತ್ತು ಸ್ನೀಕರ್ ಆಯ್ಕೆ ಮಾಡಿ. ಜೊತೆಗೆ ವೀಕೆಂಡ್ ವೈಬ್ ನೀಡಲು ಕ್ರಾಸ್‌ಬಾಡಿ ಬ್ಯಾಗ್, ಸನ್‌ಗ್ಲಾಸ್ ಮತ್ತು ಟೋಪಿಯನ್ನು ಧರಿಸಿ. ಸನ್‌ಗ್ಲಾಸ್ ಮತ್ತು ಹೆಡ್ ಕ್ಯಾಪ್ ನಿಮ್ಮ ಲುಕ್ ಬದಲಾಯಿಸುವುದರ ಜೊತೆಗೆ ಬಿಸಿಲಿನಿಂದಲೂ ರಕ್ಷಣೆ ನೀಡುತ್ತದೆ.
ಇದನ್ನೂ ಓದಿ: ಬಂಗಾಳದ ಮೊದಲ ಗವರ್ನರ್ ಕಾಲದ ಕಬಾಬ್ ರೆಸಿಪಿ ವೈರಲ್
ಜಂಪ್‌ಸೂಟ್ ಮತ್ತು ಮ್ಯಾಕ್ಸಿ ಉಡುಗೆ:
ಮ್ಯಾಕ್ಸಿ ಡ್ರೆಸ್‌ಗಳು ಮತ್ತು ಜಂಪ್‌ಸೂಟ್‌ಗಳು ವಿವಿಧ ಸಂದರ್ಭಗಳಲ್ಲಿ ಫ್ಯಾಶನ್ ಮತ್ತು ಆರಾಮದಾಯಕ ಆಯ್ಕೆಗಳಾಗಿವೆ. ವಿಶೇಷವಾಗಿ ನೀವು ವೀಕೆಂಡ್ನಲ್ಲಿ ಸಂಜೆ ಹೊರಗಡೆ ಹೋಗಲು ಯೋಚಿಸಿದ್ದರೆ, ಜಂಪ್‌ಸೂಟ್ ಅಥವಾ ಮ್ಯಾಕ್ಸಿ ಡ್ರೆಸ್ ಆರಿಸಿಕೊಳ್ಳುವುದು ಆರಾಮದಾಯಕ ಮತ್ತು ಫ್ಯಾಶನ್ ಆಗಿದೆ.
ಸ್ಪೋರ್ಟ್ಸ್ ಡ್ರೆಸ್ ಉತ್ತಮ:
ನೀವು ವೀಕೆಂಡ್ನಲ್ಲಿ ಹೊಸ ಜಾಗಗಳನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದರೆ, ಆರಾಮದಾಯಕವಾದ ಅಂದರೆ ನಡೆಯಲು ಓಡಲು ಆರಾಮವಾಗುವಂತಹ ಬಟ್ಟೆಗಳನ್ನು ಧರಿಸುವುದು ಉತ್ತಮ. ಸ್ಪೋರ್ಟ್ಸ್ ಬ್ರಾ, ವಿಕಿಂಗ್ ಟಾಪ್ ಜೊತೆಗೆ ಸನ್‌ಗ್ಲಾಸ್ ಮತ್ತು ಹೆಡ್ ಕ್ಯಾಪ್ ನಿಮ್ಮ ಲುಕ್ ಬದಲಾಯಿಸುವುದರ ಜೊತೆಗೆ ಬಿಸಿಲಿನಿಂದಲೂ ರಕ್ಷಣೆ ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:13 pm, Sat, 25 February 23