100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್ ನಲ್ಲಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸಿದ ಧಾರ್ಮಿಕ ದತ್ತಿ ಇಲಾಖೆ

| Updated By: ಆಯೇಷಾ ಬಾನು

Updated on: Feb 03, 2024 | 12:46 PM

ಧಾರ್ಮಿಕ ದತ್ತಿ ಇಲಾಖೆಯು, ರಾಜ್ಯದ 100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ರಾಜ್ಯ ಬಜೆಟ್​ನಲ್ಲಿ ಹಣಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದಲ್ಲಿನ 100 ಹಳೆಯ, ಪ್ರಸಿದ್ಧ ರಾಮ ಮಂದಿರಗಳ ಜೀರ್ಣೋದ್ಧಾರದ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಬಜೆಟ್​ನಲ್ಲಿ ಹಣ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್ ನಲ್ಲಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸಿದ ಧಾರ್ಮಿಕ ದತ್ತಿ ಇಲಾಖೆ
ಸಚಿವ ರಾಮಲಿಂಗ ರೆಡ್ಡಿ
Follow us on

ಬೆಂಗಳೂರು, ಫೆ.03: ಅಯೋಧ್ಯೆ ರಾಮ ಮಂದಿರದ ನಂತರ ಬಿಜೆಪಿ ರಾಮ ಜಪ ಮಾಡುತ್ತ ಲೋಕ ಸಭಾ ಚುನಾವಣೆ ಎದುರಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಅನೇಕ ಬಾರಿ ಟೀಕೆ ಮಾಡಿದೆ. ಸದ್ಯ ಈಗ ಅದೇ ಶ್ರೀರಾಮನ ಹೆಸರಿನಲ್ಲಿ ಬಿಜೆಪಿಗೆ (BJP) ಟಕ್ಕರ್ ಕೊಡಲು ಕಾಂಗ್ರೆಸ್ (Congress) ಹೊಸ ಯೋಜನೆ ರೂಪಿಸಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಶ್ರೀರಾಮ ಮಂದಿರಗಳ (Ram Temple) ಅಭಿವೃದ್ಧಿಗೆ ತಯಾರಿ ಶುರುವಾಗಿದೆ. ರಾಜ್ಯದ 100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಡಲು ಸರ್ಕಾರ ಮುಂದಾಗಿದೆ.

ಧಾರ್ಮಿಕ ದತ್ತಿ ಇಲಾಖೆಯು, ರಾಜ್ಯದ 100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ರಾಜ್ಯ ಬಜೆಟ್​ನಲ್ಲಿ ಹಣಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. 100 ರಾಮಮಂದಿರಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಬಿಜೆಪಿಗೆ ಟಕ್ಕರ್ ಕೊಡಲು ಮುಂದಾಗಿದೆ. ರಾಮನ ವಿರೋಧಿಗಳು, ಹಿಂದೂ ಧರ್ಮ ವಿರೋಧಿಗಳು ಎಂಬ ಹಣೆಪಟ್ಟಿ ಕಿತ್ತೆಸೆಯಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ರಾಜ್ಯದಲ್ಲಿನ 100 ಹಳೆಯ, ಪ್ರಸಿದ್ಧ ರಾಮ ಮಂದಿರಗಳ ಜೀರ್ಣೋದ್ಧಾರದ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಬಜೆಟ್​ನಲ್ಲಿ ಹಣ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ರಾಮಮಂದಿರ ಜೀರ್ಣೋದ್ಧಾರಕ್ಕಾಗಿ ಬಜೆಟ್​ನಲ್ಲಿ ಹಣ ಬಿಡುಗಡೆ ಮಾಡಲು ಡಿಮ್ಯಾಂಡ್ ಮಾಡಿದ್ದಾರೆ. ರಾಮ ಎಲ್ಲರಿಗೂ ಸಲ್ಲುವ ದೇವರು, ಒಂದು ಪಕ್ಷದ ದೇವರಲ್ಲ. ರಾಮನ ದೇವಸ್ಥಾನವನ್ನೂ ನಿರ್ಮಾಣ ಮಾಡ್ತಿವಿ, ಈಶ್ವರನ ದೇವಸ್ಥಾನವನ್ನೂ ನಿರ್ಮಾಣ ಮಾಡ್ತೀವಿ. ಶ್ರೀರಾಮನನ್ನು ದೇಶದಲ್ಲಿ ಎಲ್ರೂ ಪೂಜಿಸುತ್ತಾರೆ. ರಾಮ ಬಿಜೆಪಿ ಅವ್ರಿಗೆ ಮಾತ್ರ ದೇವರಲ್ಲ ಎಲ್ಲರಿಗೂ ದೇವರು ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ. ಈ ಮೂಲಕ ಶ್ರೀರಾಮನ ಭಕ್ತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ.

ಇದನ್ನೂ ಓದಿ: ಜಾತಿ ಕಾರಣಕ್ಕೆ ನಮ್ಮನ್ನ ಚನ್ನಕೇಶವ ದೇಗುಲದ ಗರ್ಭಗುಡಿಗೆ ಬಿಟ್ಟಿರಲಿಲ್ಲ – ಕನಕ ಪೀಠದ ಈಶ್ವರಾನಂದಪುರಿ ಶ್ರೀ

ಇನ್ನು ಮತ್ತೊಂದೆಡೆ ಬಜೆಟ್​ನಲ್ಲಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸಿದ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾವು 100 ರಾಮ ಮಂದಿರ ಜೀರ್ಣೋದ್ಧಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ರಾಮ ಹುಟ್ಟಿ 7500 ಸಾವಿರ ವರ್ಷ ಆಯಿತು ರಾಮ ಮಂದಿರ ಎಷ್ಟು ಕಟ್ಟಿದ್ದಾರೆ. ಬಿಜೆಪಿಯವರು ಈಗ ರಾಮ ರಾಮ ಅಂತ ಓಡಾಡುತಿದ್ದಾರೆ. ಅಯೋಧ್ಯೆ ರಾಮ ಮಂದಿರ ಬಾಗಿಲು ತೆಗೆದು ಪೂಜೆಗೆ ಅವಕಾಶ ನೀಡಿದ್ದು ನಮ್ಮ ರಾಜೀವ್ ಗಾಂಧಿ. ನಮ್ಮ ಅಧಿಕಾರಾವಧಿಯಲ್ಲಿ ಎಷ್ಟು ದೇವಸ್ಥಾನಗಳಿಗೆ ಅನುಧಾನ ಕೊಟ್ಟಿದ್ದೇವೆ ಅನ್ನೋ ಬಗ್ಗೆ ಪಟ್ಟಿ ಬಿಡುಗಡೆಗೊಳಿಸುತ್ತೇನೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:45 pm, Sat, 3 February 24