ಉದಯಪುರದಲ್ಲಿ ಪಾಟೀಲ್ – ಡಿಕೆಶಿ ಹೆಗಲ ಮೇಲೆ ಕೈ ಹಾಕಿ ಭಾಯ್ ಭಾಯ್! ಇತ್ತ ನಟಿ ರಮ್ಯಾ ಕೂಲ್ ಕೂಲ್ ಟ್ವೀಟ್! ಏನದು?

| Updated By: ಆಯೇಷಾ ಬಾನು

Updated on: May 13, 2022 | 5:33 PM

ಡಿಕೆ ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿ ಎಂ.ಬಿ.ಪಾಟೀಲ್ ನಗುತ್ತಾ ಮಾತನಾಡುತ್ತಿರುವ ಫೋಟೋ ವಿಚಾರಕ್ಕೆ ಸಂಬಂಧಿಸಿ ನಟಿ, ಮಾಜಿ ಸಂಸದೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಒಳ್ಳೆಯ ಕೆಲಸ ಎಂದು ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಘಟಕದ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೆ ರಮ್ಯಾ ಟ್ವೀಟ್ ಕಾಮೆಂಟ್ ಟ್ಯಾಗ್ ಮಾಡಿದ್ದಾರೆ.

ಉದಯಪುರದಲ್ಲಿ ಪಾಟೀಲ್ - ಡಿಕೆಶಿ ಹೆಗಲ ಮೇಲೆ ಕೈ ಹಾಕಿ ಭಾಯ್ ಭಾಯ್! ಇತ್ತ ನಟಿ ರಮ್ಯಾ ಕೂಲ್ ಕೂಲ್ ಟ್ವೀಟ್! ಏನದು?
ನಟಿ ರಮ್ಯಾ
Follow us on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಮತ್ತು ಮಾಜಿ ಸಂಸದೆ ರಮ್ಯಾ(Ramya) ನಡುವಿನ ಟ್ವೀಟ್‌ ವಾರ್ ಸದ್ಯ ಶಮನವಾಗುವಂತೆ ಕಾಣುತ್ತಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಡಿಕೆ ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿ ಎಂ.ಬಿ.ಪಾಟೀಲ್ ನಗುತ್ತಾ ಮಾತನಾಡುತ್ತಿರುವ ಫೋಟೋ ವಿಚಾರಕ್ಕೆ ಸಂಬಂಧಿಸಿ ನಟಿ, ಮಾಜಿ ಸಂಸದೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಒಳ್ಳೆಯ ಕೆಲಸ ಎಂದು ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಘಟಕದ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೆ ರಮ್ಯಾ ಟ್ವೀಟ್ ಕಾಮೆಂಟ್ ಟ್ಯಾಗ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಾರು ಏನೇ ಮಾಡಲಿ ನಾವು ತಲೆ ಕೆಡಿಸಿಕೊಳ್ಳುವುದು ಬೇಡ
ಡಿಕೆಶಿ-ಎಂ.ಬಿ.ಪಾಟೀಲ್ ನಡುವೆ ಶೀತಲಸಮರ ವಿಚಾರಕ್ಕೆ ಸಂಬಂಧಿಸಿ ಉದಯಪುರದಲ್ಲಿ ಭೋಜನದ ವೇಳೆ ರಾಜ್ಯ ಕಾಂಗ್ರೆಸ್ ನಾಯಕರ ಅನೌಪಚಾರಿಕ ಮಾತುಕತೆ ನಡೆದಿದೆ. ಘಟನೆ ಬಗ್ಗೆ ಸಿದ್ದರಾಮಯ್ಯಗೆ ಎಂ.ಬಿ.ಪಾಟೀಲ್ ವಿವರಿಸಿದ್ದಾರೆ. ಇದನ್ನ ಮುಂದುವರಿಸುವುದು ಬೇಡ ಎಂದು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಎಂ.ಬಿ.ಪಾಟೀಲ್​ಗೆ ಸಲಹೆ ನೀಡಿದ್ದಾರೆ. ಹಿರಿಯ ನಾಯಕರ ಸಲಹೆ ಬೆನ್ನಲ್ಲೇ ನಿನ್ನೆ ರಾತ್ರಿ ಎಂಬಿಪಿ ಟ್ವೀಟ್ ಮಾಡಿದ್ದಾರೆ. ರಾಜ್ಯ ರಾಜಕಾರಣದ ಬಗ್ಗೆಯೂ ಭೋಜನದ ವೇಳೆ ಚರ್ಚೆ ನಡೆದಿದೆ.

ಸಿದ್ದರಾಮಯ್ಯ ಜೊತೆ ಇದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್, ಚುನಾವಣೆ ವೇಳೆಗೆ ತಮ್ಮ ಬೆಂಬಲಿಗರ ಗೆಲ್ಲುವ ಅಭ್ಯರ್ಥಿಗಳ ಬೆಂಬಲಕ್ಕೆ ನಿಲ್ಲುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಪಕ್ಷ ಗಟ್ಟಿಯಾಗಿರುವ ಕ್ಷೇತ್ರಗಳಲ್ಲಿ ಗೊಂದಲ ಸೃಷ್ಠಿಸಲಾಗಿದೆ. ಇದನ್ನ ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಅಂತಿಮಗೊಳಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೆಲ ನಾಯಕರಿಂದ ಸಲಹೆ ಸಿಕ್ಕಿದೆ. ಅನಗತ್ಯ ಗೊಂದಲ ಸೃಷ್ಠಿಸುತ್ತಿರುವವರ ಬಗ್ಗೆ ಚರ್ಚೆ ನಡೆಸಲು ಸಲಹೆ ನೀಡಿದ್ದಾರೆ. ಮುಂದೆ ನೋಡೋಣ ಸದ್ಯಕ್ಕೆ ಬೇಡ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಯಾರು ಏನೇ ಮಾಡಲಿ ನಾವು ತಲೆ ಕೆಡಿಸಿಕೊಳ್ಳುವುದು ಬೇಡ. ನಮ್ಮ ಶಕ್ತಿ ನಮಗೆ ಅವರ ಶಕ್ತಿ ಅವರಿಗೆ ಏನು ಆಗುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

Published On - 5:21 pm, Fri, 13 May 22