Rapido Auto: ಇನ್ನೂ ಮುಂದೆ ಆಟೋಗಳಲ್ಲಿಯು ಸೀಟ್ ಬೆಲ್ಟ್, ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ಎಂದ ರ‍್ಯಾಪಿಡೋ
ಬೆಂಗಳೂರಿನಂತಹ ಅಧಿಕ ಜನದಟ್ಟನೆ, ವಾಹನದಟ್ಟನೆ ಇರುವಂತಹ ಪ್ರದೇಶಗಳಲ್ಲಿ ಹಠಾತ್ ನಿಲುಗಡೆಗಳು ಅಥವಾ ಘರ್ಷಣೆಯ ಸಮಯದಲ್ಲಿ ಅಪಘಾತಗಳು, ಸಾವುಗಳು ಮತ್ತು ಗಾಯಗಳ ಅಪಾಯದಿಂದ ಪ್ರಯಾಣಿಕರನ್ನು ಸೀಟ್‌ಬೆಲ್ಟ್ ರಕ್ಷಿಸುತ್ತದೆ ಎಂದು ರಾಪಿಡೋ ತಿಳಿಸಿದೆ.
ಅಪಘಾತಗಳನ್ನು ಆದಷ್ಟು ಕಡಿಮೆ ಮಾಡಿ, ಅತ್ಯಮೂಲ್ಯವಾದ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಟೋ-ಟೆಕ್ ಅಗ್ರಿಗೇಟರ್ ಆಗಿರುವ ರ‍್ಯಾಪಿಡೋ #RapidoSafetyFirst ಎಂಬ ರಾಷ್ಟ್ರವ್ಯಾಪಿ ಸುರಕ್ಷತಾ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಭಾಗವಾಗಿ ಬೆಂಗಳೂರಿನ ಆಟೋ ರಿಕ್ಷಾಗಳಿಗೆ ಸೀಟ್ ಬೆಲ್ಟ್ಗಳನ್ನು ಅಳವಡಿಸುವುದಾಗಿ ಹೇಳಿಕೊಂಡಿದೆ.
ಬೆಂಗಳೂರಿನಂತಹ ಅಧಿಕ ಜನದಟ್ಟನೆ, ವಾಹನದಟ್ಟನೆ ಇರುವಂತಹ ಪ್ರದೇಶಗಳಲ್ಲಿ ಹಠಾತ್ ನಿಲುಗಡೆಗಳು ಅಥವಾ ಘರ್ಷಣೆಯ ಸಮಯದಲ್ಲಿ ಅಪಘಾತಗಳು, ಸಾವುಗಳು ಮತ್ತು ಗಾಯಗಳ ಅಪಾಯದಿಂದ ಪ್ರಯಾಣಿಕರನ್ನು ಸೀಟ್‌ಬೆಲ್ಟ್ ರಕ್ಷಿಸುತ್ತದೆ ಎಂದು ರ‍್ಯಾಪಿಡೋ ತಿಳಿಸಿದೆ. ಇದಲ್ಲದೇ ಇಂತಹ ಸುರಕ್ಷತಾ ಅಭಿಯಾನಕ್ಕೆ ಸಾರ್ವಜನಿಕರ ಬೆಂಬಲ ಅಗತ್ಯ. ಅಂದರೆ ಆಟೋಗಳಲ್ಲಿ ನೀಡಿರುವ ಸೀಟ್ ಬೆಲ್ಟ್ಗಳನ್ನು ಧರಿಸಿ ನಮ್ಮ ಅಭಿಯಾನಕ್ಕೆ ಬೆಂಬಲ ನೀಡಿ ಎಂದು ರ‍್ಯಾಪಿಡೋ ಸಂಸ್ಥೆ ಮನವಿ ಮಾಡಿದೆ.
ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಸಂಭ್ರಮದ ರಂಜಾನ್, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್, ಬಿಗಿ ಪೊಲೀಸ್ ಬಂದೋಬಸ್ತ್
ಸುರಕ್ಷತಾ ಮುಂದುವರಿದ ಭಾಗವಾಗಿ ರಾಪಿಡೋ ತನ್ನ ಚಾಲಕರನ್ನು ಆಯ್ಕೆ ಮಾಡುವಾಗಲೂ ಪ್ರಯಾಣಿಕರಿಗೆ ಸುರಕ್ಷತೆಯನ್ನು ಮುಂದಿಟ್ಟುಕೊಂಡು 4 ಹಂತಗಳಲ್ಲಿ ಚಾಲಕರ ಹಿನ್ನೆಲೆ , ನಿಯಮಿತ ವಾಹನ ತಪಾಸಣೆ ಮುಂತಾದವುಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುವುದು. ಜೊತೆಗೆ ಮಹಿಳಾ ಪ್ರಯಾಣಿಕರ ವಿಳಾಸಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:46 am, Sat, 22 April 23