ರಂಗ ಕಲಾವಿದರಿಗೆ ಸಂತಸದ ಸುದ್ದಿ; 24 ಕೋಟಿ ವೆಚ್ಚದಲ್ಲಿ ಹೊಸ ರೂಪದಲ್ಲಿ ಬದಲಾಗಲಿದೆ ರವೀಂದ್ರ ಕಲಾಕ್ಷೇತ್ರ
ರಂಗ ಕಲಾವಿದರ ಕಲೆಯ ಪ್ರದರ್ಶನಕ್ಕೆ ವೇದಿಕೆಯಾಗಿರುವ ರವೀಂದ್ರ ಕಲಾಕ್ಷೇತ್ರ ಇದೀಗ ನವೀಕರಣವಾಗುತ್ತಿದೆ. 24 ಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರವನ್ನ ಅಭಿವೃದ್ಧಿ ಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ವಿಸ್ತಾರವಾದ ಸಭಾಂಗಣ, ಲೈಟಿಂಗ್ಸ್, ಸ್ಕ್ರೀನಿಂಗ್, ನಾಟಕ ಅಭ್ಯಾಸ ಮಾಡಲು ವಿಸ್ತಾರವಾದ ಜಾಗ, ಶೌಚಾಲಯದ ವ್ಯವಸ್ಥೆ, ನಾಟಕದ ಒಂದಷ್ಟು ಪರಿಕರಗಳು ಸೇರಿದಂತೆ ಒಂದಷ್ಟು ವ್ಯವಸ್ಥೆಯನ್ನು ಮಾಡಲು ಇಲಾಖೆ ಮುಂದಾಗಿದೆ.
ಬೆಂಗಳೂರು, ಜ.31: ಫಾಸ್ಟ್ ಲೈಫ್ ಗೆ ಹೊಂದಿಕೊಂಡು ಮಾಯಾವಾಗುತ್ತಿರುವ ರಂಗಕಲೆಗಳು ಇಂದಿಗೂ ಜೀವಂತವಾಗಿವೆ ಎಂದ್ರೆ ಅದಕ್ಕೆ ಪ್ರಮುಖ ಕಾರಣ ಇಂದಿನ ಕೆಲ ಯುವಕರಲ್ಲಿ ಇರುವ ರಂಗ ಕಲಾಪ್ರೇಮ. ಈ ಕಲೆಗಳು, ಪೌರಾಣಿಕ ನಾಟಕಗಳನ್ನ ಇಂದಿಗೂ ನಗರದಲ್ಲಿ ಪ್ರದರ್ಶನವಾಗುವಾಗುವ ಒಂದೇ ಜಾಗ ಎಂದ್ರೆ ಅದು ರವೀಂದ್ರ ಕಲಾಕ್ಷೇತ್ರ (Ravindra Kalakshetra). ಈ ರವೀಂದ್ರ ಕಲಾಕ್ಷೇತ್ರ ವಜ್ರ ಮಹೋತ್ಸವನ್ನ ಕೂಡ ಆಚಾರಿಸಿಕೊಳ್ಳುತ್ತಿದೆ. ಈ ಘಳಿಗೆಯಲ್ಲಿ ರಂಗ ಕಲಾವಿದರಿಗೆ (Theater Artists) ಅನುಕೂಲವಾಗುವ ನಿಟ್ಟಿನಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಹೊಸ ರೂಪ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.
ರವೀಂದ್ರ ಕಲಾಕ್ಷೇತ್ರ ರಂಗಕಲಾವಿದರಿಗೆ ಮೀಸಲು ಇರುವ ಸಭಾಂಗಣ. ಇಲ್ಲಿ ಸಾವಿರಾರು ನಾಟಕಗಳು, ಪೌರಾಣಿಕ ನಾಟಕಗಳು, ಯಕ್ಷಗಾನ, ಭರತನಾಟ್ಯ, ಸರ್ಕಾರಿ ಕಾರ್ಯಕ್ರಮಗಳು ನಡೆದಿವೆ. ಆದರೆ ಈ ಸಭಾಂಗಣದಲ್ಲಿ ರಂಗಕಲಾವಿದರಿಗೆ ಬೇಕಾದ ಯಾವುದೇ ಸೌಕರ್ಯಗಳು ಸರಿಯಾಗಿಲ್ಲ. ಸಧ್ಯ ರಂಗಕಲಾವಿದರಿಗೆ ಮುಖ್ಯವಾಗಿ ಬೇಕಾಗಿರುವುದು ವಿಸ್ತಾರವಾದ ಸಭಾಂಗಣ, ಲೈಟಿಂಗ್ಸ್, ಸ್ಕ್ರೀನಿಂಗ್, ನಾಟಕ ಅಭ್ಯಾಸ ಮಾಡಲು ವಿಸ್ತಾರವಾದ ಜಾಗ, ಶೌಚಾಲಯದ ವ್ಯವಸ್ಥೆ, ನಾಟಕದ ಒಂದಷ್ಟು ಪರಿಕರಗಳು. ಇವುಗಳ ಕೊರತೆಯನ್ನ ಬಹಳ ದಿನದಿಂದ ರಂಗಕಲಾವಿದರು ಅನುಭವಿಸುತ್ತಿದ್ದಾರೆ. ಈ ಕಾರಣದಿಂದಾಗಿಯೇ ರಂಗಕಲಾವಿದರು ಹಲವು ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ದೂರು ನೀಡಿದ್ರು. ಈ ಕುರಿತಾಗಿ ಪರಿಶೀಲಿಸಿ 24 ಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರವನ್ನ ಅಭಿವೃದ್ಧಿ ಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.
ಇನ್ನು, ರವೀಂದ್ರ ಕಲಾಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ನಾಟಕಗಳನ್ನ ಪ್ರದರ್ಶನ ಮಾಡುತ್ತಾ ಬಂದಿದ್ದೀವಿ. ಆದರೆ ಈ ಕಲಾಕ್ಷೇತ್ರದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ. ಇವುಗಳ ಮೇಲೆ ಬೆಳಕು ಚೆಲ್ಲುವ ಕೆಲಸಗಳು ಆಗಬೇಕಾಗಿದೆ. ಶೌಚಾಲಯ, ವಿದ್ಯುತ್, ಸ್ಕ್ರೀನಿಂಗ್ ಸಮಸ್ಯೆಗಳು ತುಂಬ ಇದೆ. ಇವುಗಳನ್ನ ಮನದಲ್ಲಿಟ್ಟು ಕೊಂಡು ಅಧಿಕಾರಿಗಳು ಅಭಿವೃದ್ಧಿ ಪಡಿಸಬೇಕು ಅಂತ ರಂಗಭೂಮಿ ಕಲಾವಿದ ಪ್ರಮೋದ್ ಬೋರೆಲಿಂಗೇಗೌಡ ಅಭಿಪ್ರಾಯ ಹಂಚಿಕೊಂಡರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ