Bengaluru Rain: ಬೆಂಗಳೂರು ನಗರದಲ್ಲಿ ದಾಖಲೆ ಬರೆದ ಮಳೆ; 24 ಗಂಟೆಗಳಲ್ಲಿ ಧೋ ಎಂದು ಸುರಿದ ಮಳೆ ಪ್ರಮಾಣ 83 ಮಿಮೀ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 05, 2022 | 6:58 AM

ಇದು 2014ರ ನಂತರ ನಗರದಲ್ಲಿ ಸುರಿದಿರುವ ಅತಿಹೆಚ್ಚಿನ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆಯು ಹೇಳಿದೆ.

Bengaluru Rain: ಬೆಂಗಳೂರು ನಗರದಲ್ಲಿ ದಾಖಲೆ ಬರೆದ ಮಳೆ; 24 ಗಂಟೆಗಳಲ್ಲಿ ಧೋ ಎಂದು ಸುರಿದ ಮಳೆ ಪ್ರಮಾಣ 83 ಮಿಮೀ
ಸಂಗ್ರಹ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಭಾನುವಾರ ವರುಣದೇವ ದಾಖಲೆ ಬರೆದಿದ್ದಾನೆ (Bengaluru Rain). ಆಕಾಶಕ್ಕೇ ತೂತು ಬಿದ್ದಂತೆ ಮಳೆ ಸುರಿದಿದೆ. ಕೇವಲ 24 ಗಂಟೆಗಳಲ್ಲಿ ಸುಮಾರು 83 ಮಿಮೀ ಮಳೆಯಾಗಿದ್ದು, ಇದು 2014ರ ನಂತರ ನಗರದಲ್ಲಿ ಸುರಿದಿರುವ ಅತಿಹೆಚ್ಚಿನ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆಯು (Indian Meteorological Department) ಹೇಳಿದೆ. ಭಾನುವಾರ ಮುಂಜಾನೆ ತುಸು ಬಿಡುವುಕೊಟ್ಟಿದ್ದ ಮಳೆ ಸೂರ್ಯ ಪಶ್ಚಿಮದತ್ತ ಸಾಗಿದಂತೆ ಮತ್ತೆ ಚುರುಕಾಯಿತು.

ಇತ್ತೀಚಿಗೆ ಮಳೆಯಿಂದಾಗಿ ಹಲವು ಸಂಕಷ್ಟ ಎದುರಿಸಿದ್ದ ರೈನ್​​ಬೋ​ ಲೇಔಟ್​ನಲ್ಲಿ ಮತ್ತೆ​ ಅವಾಂತರ ಸೃಷ್ಟಿಯಾಯಿತು. ರೈನ್​​ಬೋ​ ಲೇಔಟ್​ನ ಸರ್ಜಾಪುರ ರಸ್ತೆಯು ಜಲಾವೃತಗೊಂಡಿದ್ದು, 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಹಲವು ಅಪಾರ್ಟ್​ಮೆಂಟ್​ಗಳ ಬೇಸ್​​ಮೆಂಟ್​​ಗೂ ಮಳೆ ನೀರು ನುಗ್ಗಿದ್ದರಿಂದ ಮನೆಗಳ ಮುಂದೆ ನಿಂತಿದ್ದ ವಾಹನಗಳು ಜಲಾವೃತಗೊಂಡವು. ನಿರಂತರ ಮಳೆಯಿಂದಾಗಿ ರೈನ್​​ಬೋ​ ಲೇಔಟ್​ ಜನ ತತ್ತರಿಸಿದ್ದಾರೆ.

ಲೇಔಟ್ ಮುಂಭಾಗದ ಎರಡು ರಸ್ತೆಗಳು ಅಕ್ಷರಶಃ ಹೊಳೆಯಂತಾಗಿದ್ದು, ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಸೇರಿ ಇಡೀ ಪ್ರದೇಶ ಜಲಾವೃತಗೊಂಡಿದೆ. ರೈನ್​ಬೋ ಲೇಔಟ್ ಮತ್ತು ಸುತ್ತಮುತ್ತಲ ಲೇಔಟ್​ಗಳು ಸೇರಿ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ರೈನ್​ಬೋ ಲೇಔಟ್ ಬಳಿಗೆ ಎರಡು ಅಗ್ನಿಶಾಮಕ ವಾಹನಗಳು ಧಾವಿಸಿ, ಸಿಬ್ಬಂದಿ ಅಗತ್ಯ ಕ್ರಮ ತೆಗೆದುಕೊಂಡರು.

ಇದನ್ನೂ ಓದಿ: ಕರ್ನಾಟಕದ ವಿವಿಧ ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ಎಲ್ಲಿ ಎಷ್ಟು ಮಳೆ? (ಮಿಮೀಗಳಲ್ಲಿ)

ಬೆಂಗಳೂರಿನ ಮಹದೇವಪುರ ವಿಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿತ್ತು. ಮಾರತ್‌ಹಳ್ಳಿ (87.5), ದೊಡ್ಡನಕ್ಕುಂದಿ (70), ವರ್ತೂರು (83.5), ಬೆಳ್ಳಂದೂರು (69.5), ಹಾಲನಾಯಕನಹಳ್ಳಿ (74), ಬೆಳ್ಳಂದೂರು (69.5), ಎಚ್‌ಎಎಲ್ ಏರ್‌ಪೋರ್ಟ್​ (66.5) ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ.

ಬೆಂಗಳೂರು ನಗರದ ತಾವರೆಕೆರೆ, ಚೋಳನಾಯಕನಹಳ್ಳಿ ವ್ಯಾಪ್ತಿಯಲ್ಲಿಯೂ ದಾಖಲೆ ಮಳೆಯಾಗಿದೆ. ಮಳೆ ವಿವರ ಹೀಗಿದೆ. ತಾವರೆಕೆರೆ (135.5), ಚೋಳನಾಯಕನಹಳ್ಳಿ (135), ಸೊಂಡೆಕೊಪ್ಪ (79.5), ಹುಸ್ಕೂರು (70), ದಾಸನಾಪುರ (67.5), ಹಂಪಿನಗರ (66), ಗಂಟಿಗಾನಹಳ್ಳಿ (65.5), ಸಾತನೂರು (65.5), ಸಿಂಗನಾಯಕನಹಳ್ಳಿ (68), ಕಾಚೋಹಳ್ಳಿ (65.5), ಶಿವಕೋಟೆ (65.5), ಬಂಡಿಕೋಡಿಗೆಹಳ್ಳಿ KIA (72.5) ಭಾಗದಲ್ಲಿ ಉತ್ತಮ ಮಳೆಯಾಗಿದೆ.

Published On - 6:57 am, Mon, 5 September 22