ರಾಜಕೀಯ ಒತ್ತಡಗಳಿಗೆ ಮಣಿದು ಮೀಸಲಾತಿ ನೀಡಬಾರದು: ಎಂ.ಸಿ ವೇಣುಗೋಪಾಲ್

2 ಎ ನಲ್ಲಿ102 ಜಾತಿಗಳು ಬರುತ್ತದೆ. ಪ್ರವರ್ಗ 1ರಲ್ಲಿ 95 ಜಾತಿಗಳು ಬರುತ್ತದೆ. ಈ ಜಾತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ಜಾಗೃತಿ ವೇದಿಕೆ ಅಧ್ಯಕ್ಷರು ಹೇಳಿದರು.

ರಾಜಕೀಯ ಒತ್ತಡಗಳಿಗೆ ಮಣಿದು ಮೀಸಲಾತಿ ನೀಡಬಾರದು: ಎಂ.ಸಿ ವೇಣುಗೋಪಾಲ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Dec 24, 2022 | 2:59 PM

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ (Panchamasali Community) 2ಎ ಮೀಸಲಾತಿ (2A Reservation) ನೀಡುವ ವಿಚಾರ ರಾಜ್ಯದಲ್ಲಿರುವ ಸದ್ಯದ ಬಿಸಿಬಿಸಿ ಸುದ್ದಿಯಾಗಿದೆ. 2ಎ ಮೀಸಲಾತಿ ಪಡೆದೇ ಪಡೆಯುತ್ತೇವೆ ಎಂದು ಸಮುದಾಯದ ಮುಖಂಡರು ನಿರಂತರವಾಗಿ ಹೋರಾಟ ನಡೆಸುತ್ತಿದೆ. ಇನ್ನೊಂದೆಡೆ ಇದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ರಾಜಕೀಯ ಒತ್ತಡಕ್ಕೆ ಮಣಿದು ಮೀಸಲಾತಿ ನೀಡಬಾರದು ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ಜಾಗೃತಿ ವೇದಿಕೆ (Karnataka state backward classes awareness forum), ಸವಿತಾ ಸಮಾಜ, ಹೆಳವ ಸಮಾಜ, ತಿಗಳ ಸಮಾಜದ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಗರದ ಪ್ರೆಸ್​ ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ಅತಿ ಹಿಂದುಳಿದ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್, 2ಎ ವಿಭಾಗದಲ್ಲಿ 102 ಜಾತಿಗಳು ಬರುತ್ತದೆ. ಪ್ರವರ್ಗ 1ರಲ್ಲಿ 95 ಜಾತಿಗಳು ಬರುತ್ತದೆ. ಈ ಜಾತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಅವೈಜ್ಞಾನಿಕವಾಗಿ ಮೀಸಲಾತಿ ನೀಡಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಕೇವಲ ರಾಜಕೀಯ ಒತ್ತಡಗಳಿಗೆ ಮಣಿದು ಮೀಸಲಾತಿ ನೀಡಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ: Bengaluru New Year: ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಡೆಯಲಿದೆ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್

ಒಕ್ಕಲಿಗ ಸಮುದಾಯವು ಶೇ 14ರಷ್ಟು ಮೀಸಲಾತಿ ಕೇಳುತ್ತಿದೆ. ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ಕೇಳುತ್ತಿದೆ. ಕುರುಬ ಸಮುದಾಯ ಎಸ್​​ಟಿ ಮೀಸಲಾತಿ ಕೇಳುತ್ತಿದೆ. ಆದರೆ ಮೀಸಲಾತಿ ಕೊಡಿ ಅಂತಾ ಸರ್ಕಾರಕ್ಕೆ ಧಮ್ಕಿ ಹಾಕುವ ಸಮುದಾಯ ನಮ್ಮದಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Sat, 24 December 22