ನೈಸ್ ರಸ್ತೆಯಲ್ಲಿ ವಾಹನಗಳ ಅಡ್ಡಗಟ್ಟಿ ಸುಲಿಗೆ: ಕೋಣನಕುಂಟೆ ಪೊಲೀಸರಿಂದ ಮೂವರು ಯುವಕರ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Oct 12, 2021 | 5:17 PM

ನೈಸ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ದ ಮೂವರು ಯುವಕರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸುನಿಲ್, ಹರೀಶ್ ಮತ್ತು ನವೀನ್‌ ಬಂಧಿತರು. ಬೆಂಗಳೂರಿನ ಕೋಣನಕುಂಟೆ ಪೊಲೀಸರು ಮೂವರನ್ನೂ ಅರೆಸ್ಟ್ ಮಾಡಿದ್ದಾರೆ.

ನೈಸ್ ರಸ್ತೆಯಲ್ಲಿ ವಾಹನಗಳ ಅಡ್ಡಗಟ್ಟಿ ಸುಲಿಗೆ: ಕೋಣನಕುಂಟೆ ಪೊಲೀಸರಿಂದ ಮೂವರು ಯುವಕರ ಅರೆಸ್ಟ್
ನೈಸ್ ರಸ್ತೆಯಲ್ಲಿ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ: ಕೋಣನಕುಂಟೆ ಪೊಲೀಸರು 3 ಯುವಕರನ್ನು ಅರೆಸ್ಟ್ ಮಾಡಿದ್ದಾರೆ. (ಚಿತ್ರದಲ್ಲಿ ಗಾಯಗೊಂಡಿರುವ ವಾಹನ ಸವಾರ)
Follow us on

ಬೆಂಗಳೂರು: ನೈಸ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ದ ಮೂವರು ಯುವಕರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸುನಿಲ್, ಹರೀಶ್ ಮತ್ತು ನವೀನ್‌ ಬಂಧಿತರು. ಬೆಂಗಳೂರಿನ ಕೋಣನಕುಂಟೆ ಪೊಲೀಸರು ಮೂವರನ್ನೂ ಅರೆಸ್ಟ್ ಮಾಡಿದ್ದಾರೆ.

ಮೂವರೂ ಅರೋಪಿಗಳು ಪ್ಲಾನ್ ಮಾಡಿದ ನಂತರ ರಸ್ತೆ ಮಧ್ಯೆ ವಾಹನ ತಡೆದು ಚಾಕುವಿನಿಂದ ಹಲ್ಲೆ ಮಾಡ್ತಿದ್ದರು. ಚಾಕುವಿನಿಂದ ಹಲ್ಲೆ ಮಾಡಿದ ಬಳಿಕ ಅರೋಪಿಗಳನ್ನು ನಗ, ನಾಣ್ಯ ದೋಚುತಿದ್ದರು. ಕಳೆದ ಶುಕ್ರವಾರ ಇಂತಹುದೇ ಹಲ್ಲೆ ಮತ್ತು ಸುಲಿಗೆ ನಡೆದಿತ್ತು. ನಾಯಂಡಹಳ್ಳಿಯಲ್ಲಿ ಒರ್ವ ಅರೋಪಿ ಕ್ಯಾಂಟರ್ ಹತ್ತಿದ್ದ. ಬಳಿಕ ದಾರಿ ಮಧ್ಯೆ ಮತ್ತೆ ಮೂವರು ಅರೋಪಿಗಳು ಕ್ಯಾಟರ್ ಹತ್ತಿದ್ದರು. ಅದಾದ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೊಬೈಲ್ ಹಾಗು ಹಣ ದೋಚಿದ್ದರು.

ಇದನ್ನೂ ಓದಿ:
ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ: ಬೆಂಗಳೂರಿನ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು ಹೇಗೆ?

ಇದನ್ನೂ ಓದಿ:
ದೇವರಾಯನದುರ್ಗ ಬೆಟ್ಟದಲ್ಲಿ ರಸ್ತೆಗುರುಳಿದ ಬಂಡೆಗಳು; ‌ಭೋಗ ನರಸಿಂಹಸ್ವಾಮಿ ದೇಗುಲಕ್ಕೆ ತೆರಳುವ ರಸ್ತೆ ಬಂದ್

 

ಮಳೆ ಹೊಡೆತಕ್ಕೆ ನದಿ ಯಾವುದು, ಜಮೀನು ಯಾವುದು ಅನ್ನೋದೇ ತಿಳೀತಿಲ್ಲ|Mandya Rain effect|TV9 Kannada

Published On - 10:19 am, Tue, 12 October 21