ದೇವರಾಯನದುರ್ಗ ಬೆಟ್ಟದಲ್ಲಿ ರಸ್ತೆಗುರುಳಿದ ಬಂಡೆಗಳು; ಭೋಗ ನರಸಿಂಹಸ್ವಾಮಿ ದೇಗುಲಕ್ಕೆ ತೆರಳುವ ರಸ್ತೆ ಬಂದ್
ತುಮಕೂರು ತಾಲೂಕಿನ ದೇವರಾಯನದುರ್ಗ ಬೆಟ್ಟದಲ್ಲಿ ದೊಡ್ಡ ಬಂಡೆಗಳು ರಸ್ತೆಗುರುಳಿಬಿದ್ದಿವೆ. ಇದರಿಂದ ಭೋಗ ನರಸಿಂಹಸ್ವಾಮಿ ದೇಗುಲಕ್ಕೆ ತೆರಳುವ ರಸ್ತೆ ಬಂದ್ ಆಗಿದೆ.
ತುಮಕೂರು: ತುಮಕೂರು ಜಿಲ್ಲೆಯಾದ್ಯಂತ ನಾಲ್ಕಾರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ನಿನ್ನೆ ಮಧ್ಯ ರಾತ್ರಿಯಂತೂ ಪೂರ್ತಿ ಮಳೆಯಾಗಿದೆ. ಇದರಿಂದ ತುಮಕೂರು ತಾಲೂಕಿನ ದೇವರಾಯನದುರ್ಗ ಬೆಟ್ಟದಲ್ಲಿ ದೊಡ್ಡ ಬಂಡೆಗಳು ರಸ್ತೆಗುರುಳಿಬಿದ್ದಿವೆ. ಇದರಿಂದ ಭೋಗ ನರಸಿಂಹಸ್ವಾಮಿ ದೇಗುಲಕ್ಕೆ ತೆರಳುವ ರಸ್ತೆ ಬಂದ್ ಆಗಿದೆ.
2 ದಿನ ಬೆಟ್ಟದ ಮೇಲೆ ವಾಹನಗಳು ತೆರಳಲು ಅವಕಾಶವಿಲ್ಲ ಭಾರಿ ಮಳೆಯಿಂದ ರಸ್ತೆ ಮೇಲೆ ಬಂಡೆಗಳು ಉರುಳಿಬಿದ್ದಿವೆ. ಹಾಗಾಗಿ ಭೋಗ ನರಸಿಂಹಸ್ವಾಮಿ ದೇಗುಲಕ್ಕೆ ತೆರಳುವ ರಸ್ತೆ ಬಂದ್ ಆಗಿದೆ. ಇನ್ನು 2 ದಿನ ಬೆಟ್ಟದ ಮೇಲೆ ವಾಹನಗಳು ತೆರಳಲು ಅವಕಾಶವಿಲ್ಲ. ಮೆಟ್ಟಿಲು ಮೂಲಕ ದೇವರಾಯನದುರ್ಗ ಬೆಟ್ಟಕ್ಕೆ ಹತ್ತಲು ಅವಕಾಶವಿದೆ ಎಂದು ದೇವರಾಯನದುರ್ಗ ಇಒ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಹೇಳಿದ್ದಾರೆ.
ನೆರೆಯ ಚಿತ್ರದುರ್ಗದಲ್ಲಿ ಧಾರಾಕಾರ ಮಳೆ, ಬಹುತೇಕ ಕೆರೆ ಕಟ್ಟೆ ಭರ್ತಿ ಪಕ್ಕದ ಜಿಲ್ಲೆಯಾದ ಚಿತ್ರದುರ್ಗದಲ್ಲಿಯೂ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಬಹುತೇಕ ಕೆರೆ ಕಟ್ಟೆ ಭರ್ತಿಯಾಗಿವೆ. ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಯಾಗುತ್ತಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತೊಡರನಾಳ್ ಗ್ರಾಮದ ಕೊಳವೆ ಬಾವಿಯಲ್ಲಿ ನೀರು ಚಿಮ್ಮಿದೆ. ಅಂತರ್ಜಲ ಹೆಚ್ಚಳದಿಂದ ನೀರು ಚಿಮ್ಮುತ್ತಿದೆ. ಬರಡು ಬೆಂಡಾಗಿ ವಿಫಲಗೊಂಡಿದ್ದ ಬೋರ್ ವೆಲ್ ನಲ್ಲಿ ಸಮೃದ್ಧವಾಗಿ ನೀರು ಚಿಮ್ಮುತ್ತಿರುವುದನ್ನು ಕಂಡು ಜನ ಅಚ್ಚರಿ, ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೇಮಾವತಿ ನಾಲೆ -ಮುಂಗಾರು ಮಳೆಯ ಪ್ರಭಾವ ತನ್ನಷ್ಟಕ್ಕೆ ತಾನೇ ಉಕ್ಕುತ್ತಿದೆ ಬೋರ್ವೆಲ್ ನೀರು
ಇದನ್ನೂ ಓದಿ: ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ: ಬೆಂಗಳೂರಿನ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು ಹೇಗೆ?/strong>
Tumkurಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ಅಪಾರ ಪ್ರಮಾಣದ ಮಳೆ ನೀರು| HeavyRain| Tv9kannada
Published On - 9:30 am, Tue, 12 October 21