ಬೆಂಗಳೂರು: ಕಳೆದ ಒಂದು ವರ್ಷದಿಂದ ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ರೌಡಿಶೀಟರ್ ಶ್ಯಾಂಪುರ ನಿವಾಸಿ ಅವೇಜ್ ಅಲಿಯಾಸ್ ಬಚ್ಚನ್ನನ್ನು ಗಡಿಪಾರು ಮಾಡಲಾಗಿದೆ. ರೌಡಿ ಶೀಟರ್ ಬಚ್ಚನ್ನನ್ನು ಬೆಂಗಳೂರು ನಗರದಿಂದ 1 ವರ್ಷ ಗಡಿಪಾರು ಮಾಡುವಂತೆ ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಆದೇಶಿಸಿದ್ದಾರೆ. ಸದ್ಯ ರೌಡಿಶೀಟರ್ ಅವೇಜ್ ಬಚ್ಚನ್ ವಿರುದ್ಧ 27 ಪ್ರಕರಣ ದಾಖಲಾಗಿತ್ತು.
ಶಿವಮೊಗ್ಗದಲ್ಲಿ ಸಿನಿಮೀಯ ಶೈಲಿಯಲ್ಲಿ ದರೋಡೆಕೋರನನ್ನು ಹಿಡಿದ ಯುವಕರು
ಸಿನಿಮಾ ಸ್ಟೈಲ್‌ನಲ್ಲಿ ದರೋಡೆಕೋರನನ್ನು ಹಿಡಿದ ಶಿವಮೊಗ್ಗದ ಯುವಕರು ಈಗ ಸಖತ್ ಸುದ್ದಿ ಮಾಡುತ್ತಿದ್ದಾರೆ. ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದವರ ಬಳಿ ದರೋಡೆಗೆ ಇಳಿದಿದ್ದ ದರೋಡೆಕೋರ ಶಿವ ಎಂಬಾತನನ್ನು ರಾಜೇಶ್ , ಮನೋಜ್ ಮತ್ತು ಪ್ರದೀಪ್ ಎಂಬ ಮೂವರು ಯುವಕರು ಸೇರಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಬ್ಬರು ಆರೋಪಿಗಳು ಚಾಕು ತೋರಿಸಿ ಮೊಬೈಲ್ ಮತ್ತು ಎಟಿಎಂ ಕಾರ್ಡ್, ಚೈನ್ ದರೋಡೆ ಮಾಡಿ ಪರಾರಿಯಾಗುತ್ತಿದ್ದರು. ಅವರಲ್ಲಿ ಒಬ್ಬಾತನನ್ನು ಚೇಸ್ ಮಾಡಿದ ಯುವಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೊಬ್ಬ ದರೋಡೆಕೋರ ಪರಾರಿಯಾಗಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ; ಸಖತ್ ವೈರಲ್ ಆಗ್ತಿದೆ ಹಾರ್ದಿಕ್ ಪಾಂಡ್ಯನ 10 ವರ್ಷದ ಹಳೆಯ ವಿಡಿಯೋ
(Rowdisheeter Avez alias Bachchan has been exiled from Bangaluru city for 1 year)
Published On - 5:12 pm, Fri, 2 July 21