Bengaluru: ಬೆಂಗಳೂರಿನಲ್ಲಿ 4 ಬಿಎಚ್ಕೆ ಫ್ಲಾಟ್ಗೆ 25 ಲಕ್ಷ ಡೆಪಾಸಿಟ್, ಸಾಲದ ಆಯ್ಕೆಯೂ ಇದೆ!
ಲಕ್ಷಾಂತರ ರೂಪಾಯಿ ಭದ್ರತಾ ಠೇವಣಿ ಇಟ್ಟು ಬೆಂಗಳೂರಿನಲ್ಲಿ ನಾಲ್ಕು ಬಿಎಚ್ಕೆ ಫ್ಲಾಟ್ ಪಡೆಯಲು ಇಚ್ಚಿಸುವವರಾಗಿದ್ದರೆ, ಎಚ್‌ಎಸ್‌ಆರ್ ಲೇಔಟ್ ಪ್ರದೇಶದಲ್ಲಿ ಫ್ಲ್ಯಾಟ್ ಲಭ್ಯವಿದೆ.
ಬೆಂಗಳೂರು, ಜುಲೈ 29: ಲಕ್ಷಾಂತರ ರೂಪಾಯಿ ಭದ್ರತಾ ಠೇವಣಿ ಇಟ್ಟು ಬೆಂಗಳೂರಿನಲ್ಲಿ (Bengaluru) ನಾಲ್ಕು ಬಿಎಚ್ಕೆ ಫ್ಲಾಟ್ ಪಡೆಯಲು ಇಚ್ಚಿಸುವವರಾಗಿದ್ದರೆ, ನಿಮಗೆ ಈ ಸುದ್ದಿ ಉಪಯುಕ್ತವಾಗಬಹುದು. ಎಚ್‌ಎಸ್‌ಆರ್ ಲೇಔಟ್ ಪ್ರದೇಶದಲ್ಲಿ 25 ಲಕ್ಷ ರೂಪಾಯಿ ಡೆಪಾಸಿಟ್ಗೆ ನಾಲ್ಕು ಬಿಎಚ್ಕೆ ಫ್ಲ್ಯಾಟ್ ಇದ್ದು, ಇದರ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
‘ಅಸೆಟ್ಜ್ 27 ಪಾರ್ಕ್ ಅವೆನ್ಯೂ’ನಲ್ಲಿರುವ 5,915 ಚದರ ಅಡಿ ಫ್ಲ್ಯಾಟ್ ಬಾಡಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಆಗಿದೆ. ದುಬಾರಿ ಜೀವನಶೈಲಿಗೆ ಹೆಸರುವಾಸಿಯಾಗಿರುವ ಬೆಂಗಳೂರುನಲ್ಲಿ ವಿಸ್ತಾರವಾದ 4 BHK ನಿಗದಿ ಪಡಿಸಿದ ಮಾಸಿಕ ಬಾಡಿಗೆ, ಡೆಪಾಸಿಟ್ ಮತ್ತು ಸಾಲದ ಆಯ್ಕೆಯುಳ್ಳ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತೇಜಸ್ವಿ ಶ್ರೀವಾಸ್ತವ್ ಎಂಬವರು ಟ್ವಿಟರ್ನಲ್ಲಿ ಈ ಸ್ಕ್ರೀನ್ಶಾಟ್ ಹಂಚಿಕೊಂಡು, ಕಿಡ್ನಿ ದಾನಕ್ಕೆ ಏಕೆ ಆಯ್ಕೆಯಿಲ್ಲ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಪಡೆದಿದೆ. 4 BHK ಆಸ್ತಿಗೆ ನಿಗದಿ ಮಾಡಿರುವ ಬೆಲೆ ಸರಿಯಾಗಿದೆ ಎಂದು ಹಲವರು ಹೇಳಿಕೊಂಡಿದ್ದಾರೆ. “ಇದು ಬಹುತೇಕ ಬಂಗಲೆಯಾಗಿದ್ದು, ಭದ್ರತಾ ಠೇವಣಿಯ ಅರ್ಧದಷ್ಟು ಮೊತ್ತ ಪಾವತಿಸಿ ಫ್ಲಾಟ್ ಅನ್ನು ಹೊಂದಬಹುದು. ಉಳಿದ ಡೆಪಾಸಿಟ್ ಹಣವನ್ನು ನಂತರ EMI ಮೂಲಕ ಪಾವತಿಸಬಹುದು” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
They should add an option: Apply for Kidney Donation.#Bangalore #HouseRent#Bengaluru #HSRLayout@peakbengaluru pic.twitter.com/KPyeKmkfyF
— Tejaswi Shrivastava (@trulytazz) July 27, 2023
ಯಾವುದೇ ನಷ್ಟ ಅಥವಾ ಹಾನಿಯ ಸಂಭವನೀಯ ಶುಲ್ಕಗಳನ್ನು ಸರಿದೂಗಿಸಲು ರೂಮ್ ಅಥವಾ ಫ್ಲ್ಯಾಟ್ ಪಡೆಯುವ ಮೊದಲು ಬಾಡಿಗೆದಾರನು ಕಟ್ಟಡದ ಮಾಲೀಕರಿಗೆ ಪಾವತಿಸುವ ಮೊತ್ತವೇ ಭದ್ರತಾ ಠೇವಣಿ. ಒಪ್ಪಂದದ ಅವಧಿಯ ಆರಂಭದಲ್ಲಿ ಅದನ್ನು ತಿಂಗಳ ಮುಂಗಡ ಬಾಡಿಗೆಯೊಂದಿಗೆ ಪಾವತಿಸಬೇಕು. ಆದ್ದರಿಂದ, ಈ 4 BHK ಪಡೆಯುವ ಸಂದರ್ಭದಲ್ಲಿ, ವ್ಯಕ್ತಿಯು ಮೊದಲ ತಿಂಗಳಲ್ಲಿ ಸುಮಾರು 27.5 ಲಕ್ಷವನ್ನು ಪಾವತಿಸಬೇಕಾಗುತ್ತದೆ. ಶುಲ್ಕ ಕಡಿತದ ವಿಚಾರ ಮಾತುಕತೆಯ ಮೇಲೆ ಅವಲಂಬಿತವಾಗಿರುತ್ತದೆ. ಒಪ್ಪಂದದ ಅಂತ್ಯದ ನಂತರ ಭದ್ರತಾ ಠೇವಣಿ ಮೊತ್ತವನ್ನು ಮರುಪಾವತಿಸಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ