ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಕ್ಕಾ ಪ್ಲ್ಯಾನ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿ ಮುರಳಿ ಅಲಿಯಾಸ್ ಪ್ರಾಜೆಕ್ಟ್ ಮುರಳಿಯನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ. ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಮುರಳಿ ಕಣ್ಣಳತೆಯಲ್ಲೇ ಕಳ್ಳತನ ಮಾಡುವ ಮನೆ ಕೀ ತಯಾರಿಸುತ್ತಿದ್ದ. ಸದ್ಯ ಫಿಂಗರ್ ಪ್ರಿಂಟ್ ಸಹಾಯದಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಖದೀಮ 2009ರಿಂದ ಈವರೆಗೆ 14 ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತನಿಂದ 51 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮುರಳಿ ಕದ್ದ ಚಿನ್ನ ಖರೀದಿಸುತ್ತಿದ್ದ ಆರೋಪಿ ಶಿವರಾಮ್ ಸಹ ಅರೆಸ್ಟ್ ಆಗಿದ್ದಾನೆ.
ಒಂದೇ ಒಂದು ಸುಳಿವಿನಿಂದ ಸಿಕ್ಕಿಬಿದ್ದ ಖದೀಮ
ಬೆಂಗಳೂರಿನಲ್ಲಿ ತುಂಬಾ ಜನ ಕಳ್ಳರಿದ್ದಾರೆ. ಆದ್ರೆ ಈಗ ಅರೆಸ್ಟ್ ಆಗಿರುವ ಮುರಳಿ ಮಾತ್ರ ಕೊಂಚ ಡಿಫರೆಂಟ್. ಓದಿದ್ದು 7 ನೇ ತರಗತಿ. ಆದ್ರೆ ಮನೆ ದೋಚೋದ್ರಲ್ಲಿ ಫುಲ್ ಎಕ್ಸ್ ಫರ್ಟ್. ತಿಂಗಳಲ್ಲಿ ಮಾಡೋದು ಒಂದು ಅಥವಾ ಎರಡು ಕಳ್ಳತನ ಅಷ್ಟೇ. ಉಳಿದ ಟೈಂನಲ್ಲಿ ಗ್ಯಾರೇಜ್ನಲ್ಲಿ ಮೇಕಾನಿಕ್ ಆಗಿ ಕೆಲಸ ಮಾಡುತ್ತಾನೆ. 13 ವರ್ಷಗಳಿಂದ ಕಳ್ಳತನ ಮಾಡ್ತಿದ್ದ ಆರೋಪಿ ಇದುವರೆಗೂ 14 ಕಳ್ಳತನಗಳನ್ನು ಮಾಡಿರುವುದಾಗಿ ತಿಳಿದು ಬಂದಿದೆ. ಆದ್ರೆ ಈ ವರೆಗೂ ಯಾರ ಕೈಗೂ ಸಿಕ್ಕಿಬಿದ್ದಿರದ ಖದೀಮನನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ.
2009 ರಲ್ಲಿ ಕಳ್ಳತನ ಶುರು ಮಾಡಿದ್ದ ಮುರಳಿ ಕೊನೆಗೆ ಸಿಕ್ಕಿದ್ದು 2022 ರಲ್ಲಿ. ತುಂಬಾ ಅಚ್ಚುಕಟ್ಟಾಗಿ ಫ್ಲಾನ್ ಮಾಡ್ಕೊಂಡು ಈತ ಕೃತ್ಯವೆಸಗುತ್ತಿದ್ದ. ಪ್ರತಿನಿತ್ಯ ಯಾರು ಶಾಲೆಗೆ ಮಕ್ಕಳನ್ನು ಬಿಡಲು ಹೋಗ್ತಾರೋ ಅವರ ಮನೆಗಳನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ. ಶಾಲೆಗೆ ಹೋಗುವಾಗ ಮೊದಲು ಅವರನ್ನು ಫಾಲೋ ಮಾಡ್ಕೊಂಡು ಹೋಗ್ತಾನೆ. ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಬಿಟ್ಟು ಬರೋಕೆ ಎಷ್ಟು ಟೈಂ ಹಿಡಿಯುತ್ತೆ ಎಂದು ಲೆಕ್ಕ ಹಾಕಿಕೊಂಡು ಆ ಸಮಯದಲ್ಲೇ ಕಳ್ಳತನ ಮಾಡಲು ಫ್ಲಾನ್ ಮಾಡ್ತಾನೆ. ಒಂದು ಮನೆ ಕಳ್ಳತನ ಮಾಡಲು ಸುಮಾರು ಒಂದು ತಿಂಗಳು ಫ್ಲಾನ್ ಮಾಡ್ತಾನೆ. ಮೊದಲಿಗೆ ಮನೆಯ ಮಂದಿ ಬೀಗದ ಕೈ ಬಳಸುವುದನ್ನು ಸೂಕ್ಷ್ಮವಾಗಿ ಗಮನಿಸಿ ಅವರು ಕೈಯಲ್ಲಿ ಬೀಗ ಹಿಡಿಯುವ ದೃಶ್ಯಗಳನ್ನು ಸೆರೆ ಹಿಡಿದು. ನಂತ್ರ ಆ ಮನೆಯ ಡೋರ್ ಕೀ ಮಾದರಿಯ ನಾಲ್ಕೈದು ನಕಲಿ ಕೀ ತಯಾರು ಮಾಡ್ತಿದ್ದ. ಈ ಕೃತ್ಯಕ್ಕಾಗಿಯೇ ಆರೋಪಿ ಮುರುಳಿ ತನ್ನ ಮನೆಯಲ್ಲಿ ಕೀ ಮೇಕರ್ ಮಿಷನ್ ಇಟ್ಕೊಂಡಿದ್ದ. ನಂತ್ರ ತನ್ನ ಕೈಯಿಂದಲೇ ಕೀ ತಯಾರು ಮಾಡಿ ಮನೆಯವರು ಮಗುವನ್ನು ಶಾಲೆಗೆ ಬಿಟ್ಟು ಬರೋದ್ರ ಒಳಗೆ ಮನೆ ದೋಚುತ್ತಿದ್ದ.
ಹೀಗೆ ಒಂದು ಬಾರಿ ಕಳ್ಳತನ ಮಾಡಿದ ಮೇಲೆ ಕೆಲ ತಿಂಗಳುಗಳ ಕಾಲ ಮತ್ತೆ ಕಳ್ಳತನ ಮಾಡುವ ಬಗ್ಗೆ ಯೋಚಿಸುತ್ತಿರಲಿಲ್ಲ. ಒಂದೊಂದು ಕಳ್ಳತನವನ್ನೂ ಪ್ರಾಜೆಕ್ಟ್ ರೀತಿ ಪರಿಗಣಿಸಿ ಕಳ್ಳತನ ಮಾಡ್ತಿದ್ದ. ಸದ್ಯ ಪೊಲೀಸರು ಈತನ ಫಿಂಗರ್ ಪ್ರಿಂಟ್ ಮೂಲಕ ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 2009 ರಲ್ಲಿ ಮನೆ ಕಳ್ಳತನ ಕೇಸ್ ದಾಖಲಾಗಿತ್ತು. ಆಗ ಪೊಲೀಸರು ಮನೆಯಲ್ಲಿ ಸಿಕ್ಕ ಪಿಂಗರ್ ಪ್ರಿಂಟ್ ಶೇಖರಿಸಿದ್ದರು. ವಾರದ ಹಿಂದೆ ಆರ್.ಟಿ. ನಗರ ಪೊಲೀಸರಿಗೆ ಸಿಕ್ಕಿ ಬಿದ್ದಾಗ ಈತನ ಪಿಂಗರ್ ಪ್ರಿಂಟ್ ಕಳ್ಳತನ ಕೇಸ್ ನಲ್ಲಿ ಮ್ಯಾಚ್ ಆಗಿದೆ. ಹೆಬ್ಬಾಳ ಕೇಸ್ ಬಗ್ಗೆ ವಿಚಾರಣೆ ಮಾಡುವಾಗ ಒಟ್ಟು 14 ಕಡೆ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ.
ಆರ್.ಟಿ. ನಗರ, ಡಿಜೆಹಳ್ಳಿ, ಅಮೃತಹಳ್ಳಿ, ಹೆಬ್ಬಾಳ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾನೆ. ಸದ್ಯ ಎಲ್ಲಾ ಪ್ರಕರಣಗಳಿಂದ ಒಟ್ಟು ಒಂದೂವರೆ ಕೆಜಿ ಗ್ರಾಂ ಚಿನ್ನ, ಒಂದು ಕೆಜಿ ಇನ್ನೂರ ಹತ್ತು ಗ್ರಾಂ ಬೆಳ್ಳಿ. ಮತ್ತು ನಾಲ್ಕು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಬಳಿಯಿಂದ ಒಟ್ಟು 51 ಲಕ್ಷ ಮೌಲ್ಯದ ಮಾಲು ನೂರಕ್ಕು ಹೆಚ್ಚು ನಕಲಿ ಬೀಗದ ಕೀ ವಶಕ್ಕೆ ಪಡೆಯಲಾಗಿದೆ. ಕದ್ದ ಚಿನ್ನವನ್ನು ಮಾರಾಟ ಮಾಡಲು ಸಹಾಯ ಮಾಡ್ತಿದ್ದ ಮತ್ತೋರ್ವ ಆರೋಪಿ ಶಿವರಾಮ್ ಸಹ ಅರೆಸ್ಟ್ ಆಗಿದ್ದಾನೆ.
ಇದನ್ನೂ ಓದಿ: ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಕಳ್ಳತನ; ಬೆಂಗಳೂರಿನಲ್ಲಿ ಎಫ್ಐಆರ್ ದಾಖಲು, ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ಬಹುಮಾನ
Published On - 11:26 am, Tue, 1 February 22