ಸಿಲಿಕಾನ್ ಸಿಟಿಯ ಖತರ್ನಾಕ್ ರಾಬರಿ ಗ್ಯಾಂಗ್! ವಿಲಿಂಗ್ ವೇಳೆ ಪರಿಚಯ, 23 ಬೈಕ್ ಕಳ್ಳತನ, ಹಣಕ್ಕಾಗಿ ಲೇಟ್ ನೈಟ್ ರಾಬರಿಗಳು
ರಾಬರಿ ಗ್ಯಾಂಗ್ ಹಿಂದೆ ಬಿದ್ದ ಪೊಲೀಸರಿಗೆ ಆರು ಮಂದಿ ಆರೋಪಿಗಳು ಸಿಕ್ಕಿ ಬಿದ್ರು. 3 ಮಂದಿ ಯುವಕರು. ಮತ್ತು 3 ಮಂದಿ ಕಾನೂನು ಸಂಘರ್ಷಕ್ಕೊಳಗಾದವರನ್ನು ಪೊಲೀಸರು ಬಂಧಿಸಿದ್ರು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು ಖತರ್ನಾಕ್ ರಾಬರಿ ಗ್ಯಾಂಗ್ ಪತ್ತೆಯಾಗಿದೆ. ಈ ಗ್ಯಾಂಗ್ ಲೇಟ್ ನೈಟ್ ಡೆಲವರಿ ಬಾಯ್ಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತೆ. ಸದ್ಯ ಪೊಲೀಸರು ಈ ಗ್ಯಾಂಗ್ನ 6 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಅವರೆಲ್ಲ ಮೀಸೆ ಚಿಗುರುವ ವಯಸ್ಸಿಗೆ ಅಡ್ಡದಾರಿ ಹಿಡಿದು ಅಂದರ್ ಆದ ಯುವಕರು. ಇವರ ತನಿಖೆ ವೇಳೆ ಬಯಲಾಯ್ತು ರೋಚಕ ಕಹಾನಿ.
ರಾಬರಿ ಗ್ಯಾಂಗ್ ಹಿಂದೆ ಬಿದ್ದ ಪೊಲೀಸರಿಗೆ ಆರು ಮಂದಿ ಆರೋಪಿಗಳು ಸಿಕ್ಕಿ ಬಿದ್ರು. 3 ಮಂದಿ ಯುವಕರು. ಮತ್ತು 3 ಮಂದಿ ಕಾನೂನು ಸಂಘರ್ಷಕ್ಕೊಳಗಾದವರನ್ನು ಪೊಲೀಸರು ಬಂಧಿಸಿದ್ರು. ರಾಘವೇಂದ್ರ (19), ಬಾನುಪ್ರಕಾಶ್ (20), ಯಾಸೀನ್ (19) ಬಂಧಿತರು. ಇನ್ನು ಹಣಕ್ಕಾಗಿ ಅಡ್ಡದಾರಿ ಹಿಡಿದವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಈ ಕೇಸ್ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅದು ಏನು ಅಂದ್ರೆ ಈ ಗ್ಯಾಂಗ್ ರಾಬರಿ ಜೊತೆಗೆ ಬೈಕ್ ಕಳ್ಳತನ ಮಾಡುತ್ತಿದ್ದರು. ಕಳೆದ ಕೆಲ ತಿಂಗಳಲ್ಲಿ ಬರೊಬ್ಬರಿ 20ಕ್ಕೂ ಅಧಿಕ ಬೈಕ್ ಕಳ್ಳತನ ಮಾಡಿದ್ದಾರೆ. ಬೈಕ್ ಕಳ್ಳತನದ ಅಸಲಿ ಕಹಾನಿ ಕಂಡು ಪೊಲೀಸರು ದಂಗಾಗಿ ಹೋಗಿದ್ದಾರೆ.
ಬೈಕ್ ವೀಲಿಂಗ್ ವೇಳೆ ಪರಿಚಯವಾಗಿ ಸ್ನೇಹಿತರಾಗಿದ್ರು ಡೇ ಟೈಂನಲ್ಲಿ ಕದ್ದ ಬೈಕ್ಗಳಲ್ಲಿ ವೀಲಿಂಗ್ ಮಾಡುತ್ತಾ. ನೈಟ್ ಟೈಂನಲ್ಲಿ ಕಂಡ ಕಂಡ ಕಡೆ ರಾಬರಿ ಮಾಡುತ್ತಾ ಈ ಗ್ಯಾಂಗ್ ಶೋಕಿ ಮಾಡುತ್ತಿತ್ತು. ಕೆಆರ್ ಪುರಂನ ಹೊರವಲಯದಲ್ಲಿ ಆರೋಪಿಗಳು ವೀಲಿಂಗ್ ಮಾಡ್ತಾರೆ. ಈ ವೀಲಿಂಗ್ ವೇಳೆ ಒಬ್ಬರಿಗೊಬ್ಬರ ಪರಿಚಯವಾಗಿದ್ದು ಬಳಿಕ ಸಿಲಿಕಾನ್ ಸಿಟಿಯ ಕಂಡ ಕಂಡ ಬೈಕ್ ಗಳ ಕಳ್ಳತನ ಮಾಡೋಕೆ ಮುಂದಾಗಿದ್ದು ಆರೋಪಿಗಳು ರೇಸ್ ಬೈಕ್ಗಳ ಕದ್ದು ವೀಲಿಂಗ್ ಮಾಡುತಿದ್ದರು. ಕೊರಮಂಗಲ ಸೇರಿದಂತೆ ಹಲವು ಕಡೆ ಬೈಕ್ ಕಳ್ಳತನ ಮಾಡಿದ್ದಾರೆ. ಈವರೆಗೂ 23 ಬೈಕ್ಗಳ ಕಳ್ಳತನ ಮಾಡಿದ್ದಾರೆ. ಜೊತೆಗೆ ಹಣಕ್ಕಾಗಿ ರಾತ್ರಿ ವೇಳೆ ರಾಬರಿ ಸಹ ಮಾಡ್ತಾರೆ. ಸದ್ಯ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅಪ್ಪಟ ಮೇಕ್ ಇನ್ ಇಂಡಿಯ ಮೈಕ್ರೊಮ್ಯಾಕ್ಸ್ ಇನ್ ನೋಟ್ 2! ಏನಿದರ ವಿಶೇಷ?
Published On - 7:30 am, Thu, 27 January 22