ತಡರಾತ್ರಿವರೆಗೂ ತೆರೆದಿದ್ದ ಬೆಂಗಳೂರಿನ ಪಬ್​ಗಳ ಮೇಲೆ ಪೊಲೀಸರ ದಾಳಿ

|

Updated on: Jul 21, 2024 | 10:34 AM

ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಶನಿವಾರ ರಾತ್ರಿ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್​ನ ಪಬ್​​ಗಳ ಮೇಲೆ ಪೊಲೀಸರು ದಾಳಿ ಮಾಡಿ, ಎಚ್ಚರಿಕೆ ನೀಡಿ ಬಂದ್​ ಮಾಡಿಸಿದರು. ಕೇಂದ್ರ ವಿಭಾಗದ ಡಿಸಿಪಿ ಶೇಖರ್.ಟಿ.ಹೆಚ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ತಡರಾತ್ರಿವರೆಗೂ ತೆರೆದಿದ್ದ ಬೆಂಗಳೂರಿನ ಪಬ್​ಗಳ ಮೇಲೆ ಪೊಲೀಸರ ದಾಳಿ
ಬೆಂಗಳೂರು ಪೊಲೀಸ್​ ಆಯುಕ್ತರ ಕಚೇರಿ
Follow us on

ಬೆಂಗಳೂರು, ಜುಲೈ 21: ವಿಕೆಂಡ್ ಬ್ಯೂಸಿಯಲ್ಲಿದ್ದ ಪಬ್​ಗಳಿಗೆ (Pub) ನಗರ ಪೊಲೀಸರು (Benagluru Police) ಬಿಸಿ ಮುಟ್ಟಿಸಿದ್ದಾರೆ. ತಡರಾತ್ರಿವರೆಗು ಎಣ್ಣೆ ಪಾರ್ಟಿಗೆ ಅವಕಾಶ ಮಾಡಿಕೊಟ್ಟಿದ್ದ ಪಬ್​ಗಳ ಮೇಲೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್.ಟಿ.ಹೆಚ್ ನೇತೃತ್ವದ ತಂಡ ದಾಳಿ ಮಾಡಿತು. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿ (Virat Kohli) ಒಡೆತನದ ಪಬ್​ ಸೇರಿದಂತೆ 15 ಪಬ್​ಗಳ ಮೇಲೆ ಈ ಹಿಂದೆ ಎಫ್​ಐಆರ್​​ ದಾಖಲಾಗಿತ್ತು. ಈ ಎಲ್ಲ ಪಬ್​ಗಳು ಸೇರಿದಂತೆ ಇದೀಗ ಹೊಸದಾಗಿ ಅವಧಿಗೂ ಮೀರಿ ತೆರದಿದ್ದ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್​ನ ಪಬ್​​ಗಳ ಮೇಲೆ ಪೊಲೀಸರು ದಾಳಿ ಮಾಡಿ, ಎಚ್ಚರಿಕೆ ನೀಡಿ ಬಂದ್​ ಮಾಡಿಸಿದರು.

ಕೋಹ್ಲಿ ಮಾಲಿಕತ್ವದ ಪಬ್​ ಮೇಲೆ ಎಫ್​​ಐಆರ್​

ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಎಫ್​ಐಆರ್ ದಾಖಲಾಗಿತ್ತು. ರಾತ್ರಿ ಅವಧಿಗೂ ಮೀರಿ ಪಬ್ ತೆರೆದಿದ್ದ ಹಿನ್ನೆಲೆ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್​​ (One8 Commune Pub) ಮೇಲೆ ಕಬ್ಬನ್​ಪಾರ್ಕ್​ ಠಾಣೆಯಲ್ಲಿ FIR ದಾಖಲಾಗಿತ್ತು.
ಪಬ್ ಓಪನ್ ಆಗಿದ್ದ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಪಬ್​​ನಲ್ಲಿ ಗ್ರಾಹಕರು ಇದ್ದರು. ನಿಯಮ ಉಲ್ಲಂಘಿಸಿ ರಾತ್ರಿ ಅವಧಿಗೂ ಮೀರಿ ಪಬ್ ಓಪನ್​​​ ಮಾಡಿದ ಹಿನ್ನೆಲೆ ಎಫ್​ಐಆರ್ ದಾಖಲಿಸಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನ ಪಬ್​​ಗಳಲ್ಲಿ ಎಣ್ಣೆ, ಡಿಜೆ ಜೊತೆ ಮತ್ತೊಂದು ಮನರಂಜನೆ ಕಾರ್ಯಕ್ರಮ: ಏನದು?

ಸರ್ಕಾರ ನಿಗದಿಪಡಿಸಿರುವ ನಿಯಮವನ್ನು ಗಾಳಿಗೆ ತೂರಿ ತಡರಾತ್ರಿವರೆಗೂ ಪಬ್ ತೆರೆದು ಪಾರ್ಟಿಗೆ ಅನುವು ಮಾಡಿಕೊಟ್ಟ ರೆಸ್ಟೋರೆಂಟ್, ಬಾರ್, ಪಬ್ ವಿರುದ್ಧ ಜು.6ರ ರಾತ್ರಿ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.

ಈ ವೇಳೆ, ರಾತ್ರಿ 1.20ರವರೆಗೂ ಪಬ್ ಓಪನ್ ಮಾಡಿದ್ದ ಆರೋಪದಡಿ ನಗರದ ಕಸ್ತೂರಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್, ಚರ್ಚ್ ಸ್ಟ್ರೀಟ್‌ನಲ್ಲಿರುವ ಎಂಪೈರ್ ರೆಸ್ಟೋರೆಂಟ್, ಬ್ರಿಗೇಡ್ ರಸ್ತೆಯಲ್ಲಿರುವ ಪಾಂಜಿಯೋ ಬಾರ್ ಆ್ಯಂಡ್ ರೆಸ್ಟೋರೆಂಟ್ ವ್ಯವಸ್ಥಾಪಕರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ