AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಇಬ್ಬರು ಸೇರಿ ನಾಲ್ವರಿಗೆ ಸಾಕ್ಷಿ ಸಂಸ್ಥೆಯಿಂದ ಕಪಾಲಿಶಾಸ್ತ್ರಿ ಪ್ರಶಸ್ತಿ ಪ್ರದಾನ

ಕಳೆದ 25 ವರ್ಷಗಳಿಂದ ಟಿ.ವಿ ಕಪಾಲಿಶಾಸ್ತ್ರಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅದೇ ರೀತಿಯಾಗಿ ಈ ವರ್ಷವೂ ಆ ಕಾರ್ಯ ಮುಂದುವರೆದಿದ್ದು, ಭಾರತೀಯ ಸಂಸ್ಕೃತಿ ಪ್ರಸಾರ ಹಾಗೂ ಸಂಶೋಧನೆಯಲ್ಲಿ ನಿರತರಾದ ನಾಲ್ವರು ವಿದ್ವಾಂಸರಿಗೆ ಈ ಬಾರಿ ಪ್ರಶಸ್ತಿ ಒಲಿದಿದೆ. ಟಿ.ವಿ. ಕಪಾಲಿಶಾಸ್ತ್ರಿಯವರ 140ನೇ ಜನ್ಮ ವಾರ್ಷಿಕೋತ್ಸವದ ಸಮಾರಂಭದಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

ಕರ್ನಾಟಕದ ಇಬ್ಬರು ಸೇರಿ ನಾಲ್ವರಿಗೆ ಸಾಕ್ಷಿ ಸಂಸ್ಥೆಯಿಂದ ಕಪಾಲಿಶಾಸ್ತ್ರಿ ಪ್ರಶಸ್ತಿ ಪ್ರದಾನ
ಡಾ. ರಾಮಚಂದ್ರ ಭಟ್, ಹರಿಹರಪುರ ಶ್ರೀಧರ್
ಗಂಗಾಧರ​ ಬ. ಸಾಬೋಜಿ
|

Updated on: Sep 04, 2025 | 1:00 PM

Share

ಬೆಂಗಳೂರು, ಸೆಪ್ಟೆಂಬರ್​ 04: ಭಾರತೀಯ ಸಂಸ್ಕೃತಿ ಪ್ರಸಾರ ಹಾಗೂ ಸಂಶೋಧನೆಯಲ್ಲಿ ನಿರತರಾದ ವಿದ್ವಾಂಸರಿಗೆ ಕಳೆದ 25 ವರ್ಷಗಳಿಂದ ಕಪಾಲಿಶಾಸ್ತ್ರಿ (T.V. Kapali Sastry) ಪ್ರಶಸ್ತಿ  ಪ್ರದಾನ ಮಾಡಲಾಗುತ್ತಿದೆ. ಅದರಂತೆ ಈ ವರ್ಷ ಕೂಡ ಡಾ. ರಾಮಚಂದ್ರ ಜಿ. ಭಟ್ ಕೋಟೆಮನೆ, ಡಾ. ಯೋಗೇಶ ನಾಯ್ಕರ್, ಹರಿಹರಪುರ ಶ್ರೀಧ‌ರ್ ಹಾಗೂ ಪ್ರೊ. ವಿರೂಪಾಕ್ಷವಿ ಜಡ್ಡಿಪಾಲ್​ ಅವರು ಆಯ್ಕೆ ಆಗಿದ್ದಾರೆ. ಹತ್ತು ಸಾವಿರ ರೂ ನಗದು ಸೇರಿದಂತೆ ಪ್ರಶಸ್ತಿ ಫಲಕದೊಡನೆ ವಿದ್ವಾಂಸರನ್ನು ಸನ್ಮಾನಿಸಲಾಗುತ್ತಿದೆ.

ಕಪಾಲಿಶಾಸ್ತ್ರಿಯವರ 140ನೇ ಜನ್ಮವರ್ಷಾಚರಣೆ

ಈ ಕುರಿತಾಗಿ ಸಾಕ್ಷಿ ಸಂಸ್ಥೆಯಿಂದ ಪ್ರತಿಕಾ ಪ್ರಕಟಣೆ ಹೊರಡಿಸಲಾಗಿದೆ. ಅಪ್ರತಿಮ ದಾರ್ಶನಿಕ, ಶಾಸ್ತ್ರಗಳ ಸಮನ್ವಯಕಾರ, ಭಾರತೀಯ ಸಂಸ್ಕೃತಿಯ ಸಂರಕ್ಷಕ, ವಿದ್ವತ್ ಪ್ರಪಂಚದ ಬಹುಮುಖ ಸಾಧಕ ಟಿ.ವಿ. ಕಪಾಲಿಶಾಸ್ತ್ರಿಯವರ 140ನೇ ಜನ್ಮವರ್ಷಾಚರಣೆ ದಿನದಂದು ಅಂದರೆ ಸೆಪ್ಟೆಂಬರ್​ 07ರಂದು ಬೆಳಿಗ್ಗೆ 11 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜ್‌ನ ಮಲ್ಟಿಮೀಡಿಯ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವೇದಜ್ಞಾನ ಸಂರಕ್ಷಣೆ, ಪ್ರಸಾರ ಹಾಗೂ ಸಂಶೋಧನೆಗಳಲ್ಲಿ ಕಳೆದ 28 ವರ್ಷಗಳಿಂದ ನಿರತವಾದ ಸಾಕ್ಷಿ ಸಂಸ್ಥೆಯು ಈ ಸಮಾರಂಭ ಹಮ್ಮಿಕೊಂಡಿದೆ.

ಪ್ರಶಸ್ತಿಗೆ ಭಾಜನರಾದ ವಿದ್ವಾಂಸರ ಪರಿಚಯ

  • ಡಾ. ರಾಮಚಂದ್ರ ಭಟ್ ಅವರು ಕಳೆದ 50 ವರ್ಷಗಳಿಂದ ವಿದ್ವತ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಚನ್ನೇನಹಳ್ಳಿಯಲ್ಲಿರುವ ವೇದ ಗುರುಕುಲದ ಸ್ಥಾಪಕ ಪ್ರಾಂಶುಪಾಲರು, ಪ್ರಸ್ತುತ ಮಾರ್ಗದರ್ಶಕರು ಆಗಿದ್ದಾರೆ. ಕೆಲವು ವರ್ಷ ಎಸ್. ವ್ಯಾಸ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಕೃತ ಭಾಷೆ ಪ್ರಸಾರ, ವೇದ ಅಧ್ಯಯನ ವೇದಾಂತ ಬೋಧನೆ ಈ ವಿಷಯಗಳಲ್ಲಿ ಇವರು ಖ್ಯಾತರಾಗಿದ್ದಾರೆ.
  • ಡಾ. ಯೋಗೇಶ್ ನಾಯ್ಕರ್ ನಾಗಪುರ (ಮಹಾರಾಷ್ಟ್ರ) ದವರು. ವೃತ್ತಿಯಲ್ಲಿ ಶಿಶು ವೈದ್ಯರಾಗಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ಕುರಿತು ವ್ಯಾಪಕ ಹಾಗೂ ಆಳವಾದ ಅಧ್ಯಯನ ನಡೆಸಿದ್ದಾರೆ. ಸಂಶೋಧನಾ ಪ್ರಬಂಧಗಳನ್ನು ವಿದ್ವತ್ ಸಭೆಗಳಲ್ಲಿ ಮಂಡಿಸಿದ್ದಾರೆ. ಇವರು ಇತ್ತೀಚೆಗೆ ಬರೆದ ‘ಯೋಗ ಮುದ್ರಾ’ ಪುಸ್ತಕ ಭಾರತೀಯ ಶಾಸ್ತ್ರ ಗ್ರಂಥಗಳ ಅಧ್ಯಯನ ದಿಶೆಯಲ್ಲಿ ಹೊಸ ಬೆಳಕು ಚೆಲ್ಲಿದೆ.
  • ಶ್ರೀ ಹರಿಹರಪುರ ಶ್ರೀಧರ್ ಅವರು ಹಾಸನದವರು. ಕಳೆದ 15 ವರ್ಷಗಳಿಂದ ಅಗ್ನಿಹೋತ್ರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಆರೋಗ್ಯ, ನೆಮ್ಮದಿ ಜೀವನ, ಪ್ರಗತಿಗೆ ನೆರವಾಗಬಲ್ಲ ಆಗ್ನಿಹೋತ್ರ ದೀಕ್ಷೆಯನ್ನು ನಾಡಿನಾದ್ಯಂತ ಸಾವಿರಕ್ಕೂ ಹೆಚ್ಚು ಜನರಿಗೆ ನೀಡಿದ್ದಾರೆ.
  • ಪ್ರೊ. ವಿರೂಪಾಕ್ಷ ದಿ. ಜಡ್ಡಿಪಾಲ್ ಅವರು ಉಜ್ಜಯಿನಿ (ಮಧ್ಯಪ್ರದೇಶ) ಮಹರ್ಷಿ ನಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿಗಳು. ಇವರು ವೇದ ವೇದಾಂತ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತದ ಎಲ್ಲೆಡೆ ವೇದಾಧ್ಯಯನ ಹಾಗೂ ಸಂಶೋಧನೆ ನಡೆಸುವ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.

ಅಪ್ರತಿಮ ದಾರ್ಶನಿಕ, ಶಾಸ್ತ್ರಗಳ ಸಮನ್ವಯಕಾರ ಟಿ.ವಿ. ಕಪಾಕಶಾಸ್ತ್ರಿ

ಇನ್ನು ಟಿ.ವಿ. ಕಪಾಕಶಾಸ್ತ್ರಿ ಅವರ ಜೀವನ ಬೆಳಕಿನ ಪಥ ಅವರು ವೇದ, ಸಂಸ್ಕೃತ ಲೋಕದಲ್ಲಿ ವಿಹರಿಸಿದ್ದಾರೆ. ಉಪನಿಷತ್ ಪ್ರಪಂಚದ ಬಾಗಿಲು ತೆರೆದಿದ್ದಾರೆ. ತಂತ್ರಶಾಸ್ತ್ರದ ಮರ್ಮವನ್ನು ಬಂಗಾರದ ತಟ್ಟೆಯಲ್ಲಿಟ್ಟು ಕೊಟ್ಟಿದ್ದಾರೆ. ಕಾವ್ಯದ ಮೂಲಕ ಭಾವಾನಂದ ನೀಡಿದ್ದಾರೆ. ಗದ್ಯ ಬರವಣಿಗೆಗಳ ಮೂಲಕ ಜ್ಞಾನದ ಆತ್ಮದರ್ಶನ ಮಾಡಿಸಿದ್ದಾರೆ. ಸಂಸ್ಕೃತ, ಇಂಗ್ಲಿಷ್, ತೆಲುಗು, ತಮಿಳು ಭಾಷೆಗಳಲ್ಲಿ ಸಮಾನ ಪ್ರಭುತ್ವ ಸಾಧಿಸಿದ್ದವರು ಶ್ರೀ ರಮಣ ಮಹರ್ಷಿಗಳ ಬೋಧನೆಯನ್ನು ಲೋಕಕ್ಕೆ ಪರಿಚಯಿಸಿದವರು ಶ್ರೀ ಕಪಾಲಿಶಾಸ್ತ್ರಿಗಳು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ