AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮನ್ವಯ ಹೆಲ್ತ್‌ಕೇರ್‌ನ ಎಂಡಿ ರಾಘವೇಂದ್ರ ಶಾಸ್ತ್ರಿಗೆ ಸಿಂಗಾಪುರ ಸರ್ಕಾರದ ಪ್ರೆಸಿಡೆನ್ಶಿಯಲ್ ರೆಸಿಲಿಯನ್ಸ್ ಪದಕ

ಕೋವಿಡ್ ಸಮಯದಲ್ಲಿ 2 ತಿಂಗಳ ಕಾಲ ಪ್ರತಿದಿನ ಹಣ್ಣುಗಳು, ಬಿಸಿ ತಿಂಡಿಗಳು, ಪಾನೀಯಗಳ ಪೂರೈಕೆಯೊಂದಿಗೆ ಎಲ್ಲಾ ಆಸ್ಪತ್ರೆಗಳ ವೈದ್ಯಕೀಯ ವಿಭಾಗ ಮತ್ತು ಆರೋಗ್ಯ ರಕ್ಷಣೆಗೆ  ಸಹಕಾರ ನೀಡಿದ್ದರು.ರಾಘವೇಂದ್ರ ಶಾಸ್ತ್ರಿ ಅವರು ವಿವಿಧ ನೈಸರ್ಗಿಕ ಪದಾರ್ಥಗಳ ಬಳಕೆಯಿಂದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದರು.

ಸಮನ್ವಯ ಹೆಲ್ತ್‌ಕೇರ್‌ನ ಎಂಡಿ ರಾಘವೇಂದ್ರ ಶಾಸ್ತ್ರಿಗೆ ಸಿಂಗಾಪುರ ಸರ್ಕಾರದ ಪ್ರೆಸಿಡೆನ್ಶಿಯಲ್ ರೆಸಿಲಿಯನ್ಸ್ ಪದಕ
ರಾಘವೇಂದ್ರ ಶಾಸ್ತ್ರಿ
ರಶ್ಮಿ ಕಲ್ಲಕಟ್ಟ
|

Updated on:Dec 12, 2023 | 8:25 PM

Share

ಬೆಂಗಳೂರು ಡಿಸೆಂಬರ್ 12: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾಡಿದ ಅತ್ಯುತ್ತಮ ಕೆಲಸವನ್ನು ಗುರುತಿಸಿ ಸಮನ್ವಯ ಹೆಲ್ತ್‌ಕೇರ್‌ನ (Samanvay Healthcare) ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಶಾಸ್ತ್ರಿ (Raghavendra Shastry) ಅವರಿಗೆ ಸಿಂಗಾಪುರ ಸರ್ಕಾರವು (Singapore) ಪ್ರೆಸಿಡೆನ್ಶಿಯಲ್ ರೆಸಿಲಿಯನ್ಸ್ ಪದಕ (Presidential Resilience Medal) ನೀಡಿ ಗೌರವಿಸಿದೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬೆಂಗಳೂರಿನವರಾದ ರಾಘವೇಂದ್ರ ಶಾಸ್ತ್ರಿ ಅವರು ವಿವಿಧ ನೈಸರ್ಗಿಕ ಪದಾರ್ಥಗಳ ಬಳಕೆಯಿಂದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದರು. ಕೋವಿಡ್ ಸಮಯದಲ್ಲಿ ಅವರು 2 ತಿಂಗಳ ಕಾಲ ಪ್ರತಿದಿನ ಹಣ್ಣುಗಳು, ಬಿಸಿ ತಿಂಡಿಗಳು, ಪಾನೀಯಗಳ ಪೂರೈಕೆಯೊಂದಿಗೆ ಎಲ್ಲಾ ಆಸ್ಪತ್ರೆಗಳ ವೈದ್ಯಕೀಯ ವಿಭಾಗ ಮತ್ತು ಆರೋಗ್ಯ ರಕ್ಷಣೆಗೆ  ಸಹಕಾರ ನೀಡಿದ್ದರು. ಶುಂಠಿ, ವಿವಿಧ ತೈಲ ಸಾರದ ಬಳಕೆ ಮಾಡುವ ಮೂಲಕ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದ್ದರು.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರ ಕಠಿಣ ಪರಿಶ್ರಮಕ್ಕಾಗಿ ವೈದ್ಯಕೀಯ ವಿಭಾಗ ಮತ್ತು ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸಲು” ಇದು ಉತ್ತಮ ಸಮಯ ಎಂದು ಶಾಸ್ತ್ರಿ ಹೇಳಿದರು. ಈಗ ಇಲ್ಲದಿದ್ದರೆ, ಯಾವಾಗ ಎಂದು ನಾನು ಕೇಳಿದ್ದೆ ಅಂತಾರೆ ಶಾಸ್ತ್ರಿ.

ಇದನ್ನೂ ಓದಿ:Economy: ಕೋವಿಡ್ ಬಾರದೇ ಹೋಗಿದ್ದರೆ ಭಾರತದ ಆರ್ಥಿಕತೆ ಹೇಗಿರುತ್ತಿತ್ತು? ಎಷ್ಟು ಹಿಂದೆಬಿದ್ದಿದೆ? ಆರ್ಥಿಕ ತಜ್ಞ ನೀಲಕಾಂತ್ ಮಿಶ್ರ ಅಭಿಪ್ರಾಯ ಇದು 

ಶಾಸ್ತ್ರಿ ಅವರ ಕೆಲಸ “ನಿಜವಾಗಿಯೂ ಶ್ಲಾಘನೀಯ” ಎಂದು ಸಂಸ್ಕೃತಿ, ಸಮುದಾಯ ಮತ್ತು ಯುವಕರ ಸಂಸದೀಯ ಕಾರ್ಯದರ್ಶಿ ಎರಿಕ್ ಚುವಾ ಹೇಳಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Tue, 12 December 23