ಬೆಂಗಳೂರು: ಸಂದೀಪ್ ಲಾಲ್ ಮನೆಯಲ್ಲಿ 2 ಕೋಟಿ ಕಳ್ಳತನ (Theft) ಆಗಿರುವ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದೆ. ಸಂದೀಪ್ ಲಾಲ್ ಆರ್ಕಿಟೆಕ್ಚರ್ (Architect) ಆಗಿ ಕೆಲಸ ಮಾಡಿಕೊಂಡಿದ್ದಾರೆ. ಸಂದೀಪ್ ಲಾಲ್ ತಂದೆ ಮನಹೋಹನ್ ಲಾಲ್ ಆರ್ಪಿಎಫ್ ನಿವೃತ್ತ ಅಧಿಕಾರಿ. ಹಾಗಾದರೆ ಸಂದೀಪ್ ಮನೆಯಲ್ಲಿ 2 ಕೋಟಿ ನಗದು ಹಣ ಹೇಗೆ ಬಂತು? ಯಾಕಾಗಿ ಅಷ್ಟು ಹಣವನ್ನು ಸಂದೀಪ್ ಮನೆಯಲ್ಲಿ ಇಟ್ಟುಕೊಂಡಿದ್ದರು? ಎರಡು ಕೋಟಿಯ ಮೂಲ ಏನು? ಎಂಬ ಪ್ರಶ್ನೆಗಳು ಮೂಡಿವೆ.
ಹಣದ ಮೂಲದ ಸಂದೀಪ್ ಲಾಲ್ ಹೇಳಿದ್ದೇನು?
ಪೊಲೀಸರ ಬಳಿ ಸಂದೀಪ್ ಲಾಲ್ ಕೆಲ ಮಾಹಿತಿಯನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಜಮೀನು ಮಾರಾಟ ಮಾಡಿದ್ದೆವು. ಬೆಂಗಳೂರಲ್ಲಿದ್ದ ಒಂದು ಮನೆಯನ್ನು 10 ಲಕ್ಷಕ್ಕೆ ಲೀಸ್ಗೆ ನೀಡಿದ್ದೆವು. ಅದೇ 2 ಕೋಟಿ ಹಣ ಮನೆಯಲ್ಲಿತ್ತು ಅಂತ ಹೇಳಿದ್ದಾರೆ. ಈ ವೇಳೆ ಪೊಲೀಸರು ಹಣಕ್ಕೆ ದಾಖಲೆ ಒದಗಿಸುವಂತೆ ಕೇಳಿದ್ದಾರೆ. ಆದರೆ ಸಂದೀಪ್ ಲಾಲ್ ಇನ್ನೂ ದಾಖಲೆ ಒದಗಿಸಿಲ್ಲ.
ಹಣವನ್ನು ಕೋರ್ಟ್ಗೆ ಒಪ್ಪಿಸಿದ ಪೊಲೀಸರು
ಸದ್ಯ ವಶಕ್ಕೆ ಪಡೆದ ಅಷ್ಟು ಹಣವನ್ನು ಕೆಎಸ್ ಲೇಔಟ್ ಪೊಲೀಸರು ಕೋರ್ಟ್ಗೆ ಸಲ್ಲಿಸಿದ್ದಾರೆ. ಕೋರ್ಟ್ಗೆ ಹಣದ ಅಷ್ಟು ದಾಖಲೆಗಳನ್ನು ಸಂದೀಪ್ ಲಾಲ್ ನೀಡಲೇಬೇಕು. ಅಲ್ಲದೇ ಐಟಿ ಇಲಾಖೆಯಿಂದಲೂ ಕೂಡ ಎನ್ಓಸಿ ಪಡೆಯಬೇಕು. ದಾಖಲೆ ಒದಗಿಸದಿದ್ದರೆ ಅಷ್ಟು ಹಣ ಸರ್ಕಾರದ ಬೊಕ್ಕಸ ಸೇರಲಿದೆ.
ದೂರುದಾರ ಮನಮೋಹನ್ ಲಾಲ್ ಎಫ್ಐಆರ್ನಲ್ಲಿ ಹಣದ ಲೆಕ್ಕವನ್ನೇ ತೋರಿಸಿಲ್ಲ. ಹಾಗಾದರೆ ಎಫ್ಐಆರ್ ನಲ್ಲಿ ಹಣದ ಬಗ್ಗೆ ಮಾರೆಮಾಚಿದ್ದು ಯಾಕೆ? ಎಂಬ ವಿಚಾರ ಈಗ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಸಂದೀಪ್ ಲಾಲ್ ಮಾರ್ಚ್ 27ಕ್ಕೆ ಚೆನ್ನೈಗೆ ತೆರಳಿದ್ದರು. ಸಂದೀಪ್ ಲಾಲ್ ತಂದೆ ಪ್ರತ್ಯೇಕ ಮನೆಯಲ್ಲಿ ವಾಸವಿದ್ದಾರೆ. 28 ರಾತ್ರಿ 8 ಗಂಟೆಗೆ ಸಂದೀಪ್ ಲಾಲ್ ಮನೆಯಿಂದ ಮನಮೋಹನ್ ಲಾಲ್ ತೆರಳಿದ್ದರು. 29 ಕ್ಕೆ ವಾಕ್ ಮಾಡುತ್ತಾ ಬಂದಾಗ ಬೀಗ ಒಡೆದಿದ್ದು ಕಂಡಿದೆ. ಒಳಗೆ ಹೋಗಿ ನೋಡಿದಾಗ ಬಟ್ಟೆ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಕಬೋರ್ಡ್ ಓಪನ್ ಆಗಿತ್ತು.
ಕಳ್ಳತನ ನಡೆದಿರುವ ಬಗ್ಗೆ ಮನಮೋಹನ್ ಲಾಲ್ ಮಗನಿಗೆ ಫೋನ್ ಮಾಡಿ ತಿಳಿಸಿದ್ದರು. ಮೊದಲು ದೂರು ಕೊಡಿ ಹಣ ಕೂಡ ಇತ್ತು. ನಾನು ಬಂದಮೇಲೆ ವಿವರವಾಗಿ ಹೇಳುತ್ತೇನೆ ಅಂತ ಸಂದೀಪ್ ಲಾಲ್ ಹೇಳಿದ್ದರು. ಇನ್ನು ತಂದೆ ತರಾತುರಿಯಲ್ಲಿ ದೂರು ದಾಖಲಿಸಿದ್ದರು. ನಂತರ ಬಂದ ಮಗ ಮನೆಯಲ್ಲಿ ಏನೇನೂ ಕಳ್ಳತನವಾಗಿದೆ ಅನ್ನೋದನ್ನ ಪೊಲೀಸರ ಎದುರು ಹೇಳಿದ್ದಾರೆ.
2 ಕೋಟಿ ಹಣ ಹೋಗಿದೆ ಎಂದು ಪೊಲೀಸರಿಗೆ ಸಂದೀಪ್ ಲಾಲ್ ಹೇಳಿದ್ದರು. ಸ್ವತಃ ಈ ಮಾತನ್ನ ಮೊದಲಿಗೆ ಪೊಲೀಸರೇ ನಂಬಿರಲಿಲ್ಲ. ಆರೋಪಿಗಳು ಸಿಕ್ಕ ಬಳಿಕ ಎರಡು ಕೋಟಿ ಇತ್ತು ಅನ್ನೋದು ಗೊತ್ತಾಗಿದೆ. ಹಾಗಾಗಿ ಎಫ್ಐಆರ್ನಲ್ಲಿ ಹಣ ಎಷ್ಟು ಕಳ್ಳತನವಾಗಿದೆ ಅನ್ನೋದು ನಮೂದಾಗಿರಲಿಲ್ಲ. ಈ ಎಲ್ಲದರ ನಡುವೆ ಮನಮೋನ್ ಲಾಲ್ಗೆ ಮಗನ ಮನೆಯಲ್ಲಿ ಹಣ ಇದ್ದಿದ್ದು ಗೊತ್ತಿರಲಿಲ್ವಾ? ಮನೆಯಲ್ಲಿದ್ದ ಹಣ ಕಪ್ಪು ಹಣನಾ? ಎಂಬ ಪ್ರಶ್ನೆಗಳು ಹುಟ್ಟಿವೆ.
ಇದನ್ನೂ ಓದಿ
ಕರಗ ದರ್ಗಾಗೆ ಹೋಗುವ ಸಂಪ್ರದಾಯಕ್ಕೆ ತೀವ್ರ ವಿರೋಧ; 300 ವರ್ಷಗಳ ನಂಟನ್ನು ಮುರಿಯಲು ಮುಂದಾದ ಹಿಂದೂ ಪರ ಸಂಘಟನೆಗಳು
PBKS vs GT: ಐಪಿಎಲ್ನಲ್ಲಿಂದು ಮಯಾಂಕ್ vs ಹಾರ್ದಿಕ್: ಗೆಲುವಿನ ಓಟ ಮುಂದುವರೆಸುತ್ತಾ ಗುಜರಾತ್?