ಬೆಂಗಳೂರು: ಹದಿಹರೆಯದವರ ಮೇಲೆ ಪೋಕ್ಸೋ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ 9ನೇ ತರಗತಿಯಿಂದಲೇ ಪೋಕ್ಸೋ ಕಾಯ್ದೆಯ (POCSO Act) ಬಗ್ಗೆ ಶಿಕ್ಷಣ (School curriculum) ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಧಾರವಾಡ ಹೈಕೋರ್ಟ್ ಪೀಠವು (Dharwad High Court Bench), ಶಿಕ್ಷಣ ಇಲಾಖೆಗೆ ಈ ಸಂಬಂಧ ನಿರ್ದೇಶನ ನೀಡಿದೆ.
ಸಮಿತಿ ರಚಿಸಿ, ಪಠ್ಯ ರೂಪಿಸಲು ಸೂಚಿಸಿದ ಹೈಕೋರ್ಟ್ ಪೀಠ
16 ವರ್ಷ ತುಂಬಿದವರು ಪ್ರೀತಿಸಿ, ಸಂಬಂಧ ಹೊಂದುವುದು ಹೆಚ್ಚುತ್ತಿದೆ. ಆದರೆ 16-18 ವರ್ಷದೊಳಗಿನವರ ಸಮ್ಮತಿಯನ್ನು ಕಾನೂನು ಪರಿಗಣಿಸಲ್ಲ. ಪ್ರೀತಿಸಿ ಮದುವೆಯಾದರೂ ಪ್ರಕರಣ ದಾಖಲಾಗುವ ನಿದರ್ಶನಗಳಿವೆ. ಹಾಗಾಗಿ ಪೋಕ್ಸೋ ಕಾಯ್ದೆಯ ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು. ಕಾನೂನು ಆಯೋಗ ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ನ್ಯಾ. ಸೂರಜ್ ಗೋವಿಂದರಾಜ್ ಮತ್ತು ನ್ಯಾ. ಜಿ. ಬಸವರಾಜ ಅವರಿದ್ದ ನ್ಯಾಯ ಪೀಠ ಆದೇಶ ನೀಡಿದೆ.