ಪ್ರಧಾನಿ ಮೋದಿ ವಿಸಿಟ್​: ಮೆಜೆಸ್ಟಿಕ್​ ಏರಿಯಾದಲ್ಲಿ ರಸ್ತೆಗೆ ಡಾಂಬರು ಹಾಕಲು ಟ್ರಾಫಿಕ್​ ನಿಯಂತ್ರಿಸುವಂತೆ ಪೊಲೀಸರಿಗೆ ಕೇಳಿದ್ದೇವೆ: ತುಷಾರ್ ಗಿರಿನಾಥ್

ಟ್ರಾಫಿಕ್ ಡೈವರ್ಟ್ ಮಾಡುವುದು ಕಷ್ಟ ಎಂದು ತಿಳಿಸಿದ್ದರು. ಆದರೆ ಈಗ ವಿಐಪಿ ಭೇಟಿ ಇರುವುದರಿಂದ ರಸ್ತೆ ಕಾಮಗಾರಿ ಮಾಡುವಂತೆ ತಿಳಿಸಿದ್ದಾರೆ.

ಪ್ರಧಾನಿ ಮೋದಿ ವಿಸಿಟ್​: ಮೆಜೆಸ್ಟಿಕ್​ ಏರಿಯಾದಲ್ಲಿ ರಸ್ತೆಗೆ ಡಾಂಬರು ಹಾಕಲು ಟ್ರಾಫಿಕ್​ ನಿಯಂತ್ರಿಸುವಂತೆ ಪೊಲೀಸರಿಗೆ ಕೇಳಿದ್ದೇವೆ: ತುಷಾರ್ ಗಿರಿನಾಥ್
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 07, 2022 | 5:25 PM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಇದೇ ನ. 11ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​​​ನಲ್ಲಿ ಕೆಂಪೇಗೌಡರ ಪ್ರತಿಮೆ (Kempegowda statue) ಯನ್ನು ಉದ್ಘಾಟನೆ ಮಾಡಲಿದ್ದಾರೆ. ಹಾಗಾಗಿ ಮೆಜೆಸ್ಟಿಕ್​ ಏರಿಯಾದ ರಸ್ತೆಗೆ ಡಾಂಬರ್​ ಮತ್ತು ರಸ್ತೆ ವೈಟ್ ಟಾಪಿಂಗ್ ಮಾಡುವುದಕ್ಕೆ ನಗರ ಸಂಚಾರಿ ಪೊಲೀಸರಿಗೆ 20 ದಿನ ಕಾಲಾವಕಾಶ ಕೇಳಿದ್ದೆವು. ಅಥವಾ 7 ದಿನ ಹಗಲು, 8 ದಿನ ರಾತ್ರಿಯಾದರೂ ಪರ್ಮಿಷನ್ ನೀಡುವಂತೆ ಕೇಳಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಹೇಳಿಕೆ ನೀಡಿದರು. ಟ್ರಾಫಿಕ್ ಡೈವರ್ಟ್ ಮಾಡುವುದು ಕಷ್ಟ ಎಂದು ತಿಳಿಸಿದ್ದರು. ಆದರೆ ಈಗ ವಿಐಪಿ ಭೇಟಿ ಇರುವುದರಿಂದ ರಸ್ತೆ ಕಾಮಗಾರಿ ಮಾಡುವಂತೆ ತಿಳಿಸಿದ್ದಾರೆಂದು. ಕಾಮಗಾರಿ ಅಪೂರ್ಣ ಆಗಿರುವುದರಿಂದ ರಸ್ತೆಗೆ ಡಾಂಬರ್ ಹಾಕಿರಲಿಲ್ಲ. ಹಾಗಾಗಿ ನಾವು ಡಾಂಬರ್ ಹಾಕಿ ಕಾಮಗಾರಿ ನಡೆಸುತ್ತಿದ್ದೇವೆ. ವೈಟ್ ಟಾಪಿಂಗ್ ರೋಡ್ ಕಾಮಗಾರಿ ನಡೆಯುತ್ತಿದೆ. ಒಂದು ಕಡೆ ವೈಟ್ ಟಾಪಿಂಗ್​ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಪೊಲೀಸರ ಅನುಮತಿ ಸಿಕ್ಕಿರಲಿಲ್ಲ ಎಂದು ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ರಸ್ತೆಗುಂಡಿಗಳು ಉಳಿದರೆ ಅಧಿಕಾರಗಳ ವಿರುದ್ಧ ಕ್ರಮ

ರಸ್ತೆಗುಂಡಿ ವಿಚಾರ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದು, ನಾವು ನವೆಂಬರ್ 6ಕ್ಕೆ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಟಾರ್ಗೆಟ್ ಫಿಕ್ಸ್ ಮಾಡಿದ್ದೇವೆ. ಪ್ರತಿ ದಿನ 1 ಸಾವಿರದಿಂದ ಒಂದೂವರೆ ಸಾವಿರ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯುತ್ತಿತ್ತು. ಆದರೆ ಬೆಂಗಳೂರಿನಲ್ಲಿ ಕಳೆದ ವಾರ ಮಳೆ ಇದ್ದ ಹಿನ್ನೆಲೆ ಟೈಮ್​ಗೆ ಸರಿಯಾಗಿ ಟಾರ್ಗೆ ರೀಚ್ ಆಗಿಲ್ಲ. ಇದೀಗ ದಿನವೊಂದಕ್ಕೆ 500 ರಿಂದ 600 ಗುಂಡಿ ಮುಚ್ಚಲಾಗುತ್ತಿದೆ. ಇವತ್ತು ಎಲ್ಲ ಚೀಫ್ ಇಂಜಿನಿಯರ್​ಗೂ ಸೆಕೆಂಡ್ ನೋಟಿಸ್ ನೀಡಲಾಗುತ್ತಿದೆ. 15 ನೇ ತಾರೀಕಿನ‌ ನಂತರ ರಸ್ತೆಗುಂಡಿಗಳು ಉಳಿದಿದ್ದರೆ ಅಧಿಕಾರಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

108 ಅಡಿಯ ಬೃಹತ್ ಕೆಂಪೇಗೌಡ ಪ್ರತಿಮೆ:

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲೆ ಎತ್ತಿರೂ 64 ಕೋಟಿ ರೂ ವೆಚ್ಚದ 108 ಅಡಿಯ ಬೃಹತ್ ಕಂಚಿನ ಪ್ರತಿಮೆ ಅನಾವರಣವಾಗಲಿದೆ. ಇನ್ನು ಪ್ರತಿಮೆಯ ಮುಂಭಾಗದಲ್ಲಿ 3 ಎಕರೆ ಜಾಗದಲ್ಲಿ 20 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ಸಹ ತಲೆ ಎತ್ತಲಿದ್ದು, ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ ಆಡಳಿತದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:15 pm, Mon, 7 November 22