
ಬೆಂಗಳೂರು: ನಗರದಲ್ಲಿ ಮೂವರು ಮಕ್ಕಳು (children) ನಾಪತ್ತೆಯಾಗಿದ್ದು ಎಷ್ಟೇ ಹುಡುಕಿದರು ಪತ್ತೆಯಾಗುತ್ತಿಲ್ಲ. ನಗೀನಾ(15) ರುಕ್ಸಾನಾ( 05) ಹಾಗೂ ಹಸನ್ (1) ವರ್ಷದ ನಾಪತ್ತೆಯಾದ ಮಕ್ಕಳು. ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮಿಸ್ಸಿಂಗ್ (missing) ಸ್ಟೋರಿ ನಡೆದಿದೆ. ಐದು ದಿನ, ಎಂಟು ಪೊಲೀಸ್ ತಂಡ, 500 ಕ್ಕೂ ಹೆಚ್ಚು ಸಿಸಿ ಕ್ಯಾಮೆರದಲ್ಲಿ ಹುಡುಕಾಟ ನಡೆಸಲಾಗಿದೆ. ಆದರೂ ಆ ಮೂವರು ಮಕ್ಕಳ ಸುಳಿವು ಮಾತ್ರ ಸಿಗುತ್ತಿಲ್ಲ. ಹೀಗಾಗಿ ಬೆಂಗಳೂರು ಒಂದು ವಿಚಿತ್ರ ಮಿಸ್ಸಿಂಗ್ ಸ್ಟೋರಿಗೆ ಸಾಕ್ಷಿಯಾದಂತ್ತಾಗಿದೆ. ಇದೇ ತಿಂಗಳು ಮೂರನೇ ತಾರೀಖು ಮಕ್ಕಳು ನಾಪತ್ತೆಯಾಗಿದ್ದಾರೆ. ಮಹಮ್ಮದ್ ನಿಜಾಮ್ ಮತ್ತು ಬೇಗಮ್ನ ಇಬ್ಬರು ಮಕ್ಕಳು. ನಿಜಾಮ್ನ ತಂಗಿ ನಗೀನಾ, ನಗೀನಾ ಜೊತೆಗೆ ಮಗಳು ರುಕ್ಸಾನಾ ಹಾಗೂ ಮಗ ಹಸನ್ ಹೋಗಿದ್ದಾರೆ. ಮೂಲತಃ ಬಿಹಾರ ಮೂಲದ ದಂಪತಿಗಳಾಗಿದ್ದಾರೆ. ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು.
ನಗರದ ಮಿನರ್ವ ಸರ್ಕಲ್ ಬಳಿಯಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಗಂಡ ಹೆಂಡತಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಪ್ರತಿ ಬಾರಿಯೂ ಕೆಲಸದ ಭಾಗದಲ್ಲಿಯೇ ಮಕ್ಕಳು ಆಟವಾಡಿಕೊಂಡು ಇರುತ್ತಿದ್ದರು. ಆದರೆ ಮೊನ್ನೆ ಸೋಮವಾರ ನಾಪತ್ತೆಯಾಗಿದ್ದಾರೆ. ಮಕ್ಕಳು ಹೊರಗೆ ಹೋಗುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು, ಪೋಷಕರು ಮತ್ತು ಪೊಲೀಸರು ಮಕ್ಕಳಿಗಾಗಿ ತೀವ್ರ ಹುಡುಕಾಟ ಮಾಡುತ್ತಿದ್ದಾರೆ. ಸಿಸಿಟಿವಿಯಲ್ಲಿ ಮಕ್ಕಳು ಒಂದಷ್ಟು ಬೀದಿಗಳಲ್ಲಿ ಅಲೆದಾಡುವುದು ಪತ್ತೆಯಾಗಿದೆ. ಆದರೆ ಇದುವರೆಗೂ ಯಾರ ಕೈಗೂ ಸಿಕ್ಕಿಲ್ಲ. ಇದ್ರಲ್ಲಿ 15 ವರ್ಷದ ನಗೀನಾಗೆ ಸ್ವಲ್ಪ ಬುದ್ದಿ ಮಾಂದ್ಯವಿದೆ. ಸದ್ಯ ಎಂಟು ತಂಡಗಳನ್ನ ಮಾಡಿಕೊಂಡು ಕಲಾಸಿಪಾಳ್ಯದ ಪೋಲಿಸ್ ಇನ್ಸ್ಪೆಕ್ಟರ್ ಮಂಜೇಗೌಡರ ನೇತೃತ್ವದಲ್ಲಿ ಮಕ್ಕಳ ಹುಡುಕಾಟ ನಡೆಸಿದ್ದಾರೆ. ಕಲಾಸಿಪಾಳ್ಯದ ಠಾಣೆಯ ಪೋಲಿಸರಿಂದ ಮಕ್ಕಳಿಗಾಗಿ ವಾಟ್ಸಪ್ ಗ್ರೂಪ್ ಕೂಡ ಮಾಡಲಾಗಿದೆ.
ಕಾಡುಜೀರಿಗೆ ಎಂಬ ವಿಷ ಜಂತು ಕಡಿದು ಓರ್ವ ಯುವಕ ಬಲಿ
ದಾವಣಗೆರೆ: ಅರೇ ಮಲೆನಾಡಿನಲ್ಲಿ ಕಾಡುಜೀರಿಗೆ ಎಂಬ ವಿಷ ಜಂತು ಕಡಿದು ಓರ್ವ ಯುವಕ ಬಲಿಯಾಗಿರುವಂತಹ ಘಟನೆ ನಡೆದಿದೆ. ಮಲ್ಲೇಶ ಪಿ (24) ಸಾವನ್ನಪ್ಪಿದ ಕಂಸಾಗರದ ಗ್ರಾಮದ ಯುವಕ. ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾ ಪಟ್ಟಣ ಹೊಬಳಿಯ ಕಂಸಾಗರ ಗ್ರಾಮದಲ್ಲಿ ನಡೆದಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಕಾಡು ಜೀರಿಗೆ ಎಂಬ ವಿಷ ಜಂತು ಕಡಿದು ಯುವಕ ಮೃತಪಟ್ಟಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ಹತ್ತಕ್ಕೂ ಹೆಚ್ಚು ಜನರಿಗೆ ಕಾಡುಜೀರಿಗೆ ವಿಷ ಜಂತು ಕಚ್ಚಿದ್ದು, ರೈತಾಪಿ ಜನ ಆತಂಕದಲ್ಲಿದ್ದಾರೆ. ಈ ಹಿಂದೆ ಜಾನುವಾರಿಗಳಿಗೆ ಕಚ್ಚುತ್ತಿದ್ದ ಈ ವಿಷ ಜಂತು ಈಗ ರೈತರಿಗೆ ಕಾಟ ನೀಡುತ್ತಿವೆ. ಬಸವಾ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಬೋಟಿನಿಂದ ಕಾಲು ಜಾರಿಗೆ ನೀರಿಗೆ ಬಿದ್ದು ಸಾವು
ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನ 2ನೇ ಟಿ.ಜೆಟ್ಟಿ ಬಳಿ ಬೋಟ್ನಿಂದ ಬಿದ್ದು ಹೆಜಮಾಡಿ ಗ್ರಾಮದ ಮೀನುಗಾರ ರಮೇಶ್ ಕೋಟ್ಯಾನ್(75) ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಗುರು ರಾಘವೇಂದ್ರ ಬೋಟ್ನಲ್ಲಿ ಕಾರ್ಮಿಕನಾಗಿ ರಮೇಶ್ ಕೆಲಸ ಮಾಡ್ತಿದ್ದ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:49 am, Sat, 8 October 22