ಬೆಂಗಳೂರು: 2014ರಲ್ಲಿ ನಡೆದಿದ್ದ ಬನಶಂಕರಿಯ ರಾಘವೇಂದ್ರ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ರಾಮಾಂಜನೇಯನಿಗೆ ಜೀವಾವಧಿ ಶಿಕ್ಷೆ(Life Imprisonment) ನೀಡಿ ಬೆಂಗಳೂರಿನ 62ನೇ ಸೆಷನ್ಸ್ ನ್ಯಾಯಾಲಯ(Sessions Court) ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
ಆಂಧ್ರಪ್ರದೇಶ ಮೂಲದ ಅಪರಾಧಿ ರಾಮಾಂಜನೇಯ ಬೆಂಗಳೂರಿನಲ್ಲಿ ಶೌಚಾಲಯ ಸ್ವಚ್ಚಗೊಳಿಸುವ ಕೆಲಸ ಮಾಡುತ್ತಿದ್ದ. ವಾರಕ್ಕೊಮ್ಮೆ ಇಟ್ಟಮಡು 10ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ನಿವೃತ್ತ ನ್ಯಾಯಾಂಗ ಅಧಿಕಾರಿ ರಾಘವೇಂದ್ರ ರಾವ್ ಮನೆಗೆ ಬಂದು ಶೌಚಾಲಯ ಸ್ವಚ್ಚಗೊಳಿಸುತ್ತಿದ್ದ. ಆದ್ರೆ 2014ರ ಡಿಸೆಂಬರ್ 17ರಂದು ಹ್ಯಾಮರ್ ನಿಂದ ಹೊಡೆದು ರಾಘವೇಂದ್ರನ ಹತ್ಯೆ ಮಾಡಿದ್ದ. ರಾಘವೇಂದ್ರ ಪತ್ನಿ ಸುಧಾಕುಮಾರಿಗೂ ಹ್ಯಾಮರ್ ನಿಂದ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿದ್ದ. ರಾಘವೇಂದ್ರ ಅವರ ಕತ್ತಿನಲ್ಲಿದ್ದ ಸರ, ಸುಧಾ ಅವರ 30 ಗ್ರಾಂ ಮಾಂಗಲ್ಯಸರ ಕದ್ದು ರಾಮಾಂಜನೇಯ ಪರಾರಿಯಾಗಿದ್ದ.
ಬಳಿಕ ಸಮೀಪದಲ್ಲೇ ಮತ್ತೊಂದು ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ರಾಘವೇಂದ್ರರ ಮಗ ಮಧುಸೂದನ್ ಅಪ್ಪ-ಅಮ್ಮನನ್ನು ನೋಡಲು ಅದೇ ದಿನದ ರಾತ್ರಿ 7.30ಕ್ಕೆ ಮನೆಗೆ ಬಂದಿದ್ದಾರೆ. ಆಗ ಕೃತ್ಯ ಬಯಲಾಗಿದೆ. ನಂತರ ಈ ಬಗ್ಗೆ ಸಿ.ಕೆ ಅಚ್ಚು ಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರು ಆಧರಿಸಿ ರಾಮಾಂಜನೇಯನನ್ನ ತನಿಖಾಧಿಕಾರಿ ಬಿ.ಕೆ ಶೇಖರ್ ಬಂಧಿಸಿದ್ದರು. ಸೂಕ್ತ ಸಾಕ್ಷ್ಯಾಧಾರಗಳನ್ನ ಕಲೆಹಾಕಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸದ್ಯ ಆರೋಪಿಗೆ ಜೀವಾವಾಧಿ ಶಿಕ್ಷೆ ನೀಡಿ 62ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಧೀಶರಾದ ಎ.ಈರಣ್ಣ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇದನ್ನು ಕ್ಲಿಕ್ ಮಾಡಿ
Published On - 7:57 pm, Tue, 16 August 22