RSS ಸಿಎಂ ಬೊಮ್ಮಾಯಿ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ
ಸಂಬಂಧಿಸಿ ಸಾಂವಿಧಾನಿಕ ಹುದ್ದೆಗೆ ಸಿಎಂ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಸಿಎಂ ಬೊಮ್ಮಾಯಿ ವಿರುದ್ಧ ರಾಜ್ಯಪಾಲ ಗೆಹ್ಲೋಟ್‌ಗೆ ದೂರು ಸಲ್ಲಿಸಲಾಗಿದೆ.
ಬೆಂಗಳೂರು: ಆರ್‌ಎಸ್‌ಎಸ್‌ಗೆ(RSS) ತಲೆಬಾಗಿರುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಾಂವಿಧಾನಿಕ ಹುದ್ದೆಗೆ ಸಿಎಂ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಸಿಎಂ ಬೊಮ್ಮಾಯಿ ವಿರುದ್ಧ ರಾಜ್ಯಪಾಲ ಗೆಹ್ಲೋಟ್‌ಗೆ(Thawar Chand Gehlot) ದೂರು ಸಲ್ಲಿಸಲಾಗಿದೆ. ಅಸಂವಿಧಾನಿಕ ಸಂಘಟನೆಗೆ ಬದ್ಧರಾಗಿರುವ ಸಿಎಂ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ಹನುಮೇಗೌಡ ದೂರು ನೀಡಿದ್ದಾರೆ.
ಆರ್‌ಎಸ್‌ಎಸ್ ಸಂಘಟನೆ ಕಾನೂನಿನಡಿ ನೋಂದಣಿಯಾಗಿಲ್ಲ. ಹಲವಾರು ಕೋಟಿ ವ್ಯವಹಾರವಿದ್ದರೂ ಲೆಕ್ಕಪತ್ರ ನಿರ್ವಹಿಸಿಲ್ಲ. ಆರ್‌ಎಸ್‌ಎಸ್ ಸಂಘಟನೆ ಸರಿಯಾಗಿ ಸದಸ್ಯರ ನಿರ್ವಹಣೆ ಮಾಡಿಲ್ಲ. RSS ವಿರುದ್ಧ ಖುದ್ದು ಸಿಎಂಗೆ ದೂರು ನೀಡಿದ್ದರೂ ತನಿಖೆ ನಡೆಸಿಲ್ಲ. ಹೀಗಾಗಿ ಸಿಎಂ ವಿರುದ್ಧ ಕ್ರಮಕೈಗೊಳ್ಳಲು ಸಾಮಾಜಿಕ ಕಾರ್ಯಕರ್ತ ಹನುಮೇಗೌಡ ಆಗ್ರಹಿಸಿದ್ದಾರೆ. ಆಗಸ್ಟ್ 15ರಂದು ನಡೆದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಈ ಹೇಳಿಕೆ ನೀಡಿದ್ದರು.
ಸಿಎಂ ಹೇಳಿಕೆಗೆ ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಆಕ್ರೋಶ
ಇನ್ನು ಮತ್ತೊಂದು ಕಡೆ ಇದೇ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದೆ. ದೇಶದ್ರೋಹಿ ‘ಆರ್‌ಎಸ್‌ಎಸ್ ತತ್ವ ಸಿದ್ಧಾಂತದಂತೆ ಕೆಲಸ ಮಾಡುತ್ತೇನೆ’ ಎಂದು ಸಿಎಂ ಹೇಳಿದ್ದಾರೆ. ಆದ್ರೆ ಪ್ರಜಾಪ್ರಭುತ್ವ ವಿರೋಧಿಗಳೇ ನಿಮಗೆ ಆದರ್ಶವಾಗಿದ್ದು ರಾಜ್ಯದ ದೌರ್ಭಾಗ್ಯ ಎಂದು ಸಿಎಂ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ. ತಾವು ಸಂವಿಧಾನದ ಆಶಯಗಳ ಮೇಲೆ ಆಡಳಿತ ನಡೆಸಬೇಕಿತ್ತು. ಡಾ.ಬಿ.ಆರ್.ಅಂಬೇಡ್ಕರ್‌ರವರ ತತ್ವಗಳಲ್ಲಿ ಕೆಲಸ ಮಾಡಬೇಕಿತ್ತು. ಪ್ರಜಾಪ್ರಭುತ್ವದ ಆದರ್ಶದಂತೆ ಸಿಎಂರವರು ನಡೆಯಬೇಕಿತ್ತು. ದೇಶದ್ರೋಹಿ RSS ತತ್ವ ಸಿದ್ಧಾಂತದಂತೆ ಕೆಲಸ ಮಾಡ್ತೇನೆಂದಿದ್ದಾರೆ. ಇದು ರಾಜ್ಯದ ದೌರ್ಭಾಗ್ಯ ಎಂದು ಕಾಂಗ್ರೆಸ್ ಕಿಡಿಕಾರಿದೆ.
ದೇಶದ್ರೋಹಿ RSS ತತ್ವ ಸಿದ್ಧಾಂತದಂತೆ ಕೆಲಸ ಮಾಡುತ್ತೇನೆ ಎಂದಿದ್ದಾರೆ ಸಿಎಂ.@BSBommai ಅವರೇ,ತಾವು ಸಂವಿಧಾನದ ಆಶಯಗಳ ಮೇಲೆ ಆಡಳಿತ ನಡೆಸಬೇಕಿತ್ತು.
ಅಂಬೇಡ್ಕರ್ ತತ್ವಗಳಲ್ಲಿ ಕೆಲಸ ಮಾಡಬೇಕಿತ್ತು.
ಪ್ರಜಾಪ್ರಭುತ್ವದ ಅದರ್ಶದಲ್ಲಿ ನಡೆಯಬೇಕಿತ್ತು.
ಆದರೆಪ್ರಜಾಪ್ರಭುತ್ವ ವಿರೋಧಿಗಳೇ ನಿಮಗೆ ಆದರ್ಶ ಎನ್ನುವುದು ರಾಜ್ಯದ ದೌರ್ಭಾಗ್ಯ.
— Karnataka Congress (@INCKarnataka) August 16, 2022
Published On - 5:17 pm, Tue, 16 August 22