DigiYatra ಕಾಗದ ರಹಿತ ವಿಮಾನ ಪ್ರಯಾಣ: ದೆಹಲಿ ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಜಿಯಾತ್ರಾ ಸೌಲಭ್ಯ

ಈತಂತ್ರಜ್ಞಾನವು ಬೋರ್ಡಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಪ್ರತಿ ಪ್ರಯಾಣಿಕರಿಗೆ ಪ್ರತಿ ಟಚ್‌ಪಾಯಿಂಟ್‌ನಲ್ಲಿ ಮೂರು ಸೆಕೆಂಡುಗಳಿಗಿಂತ ಕಡಿಮೆ ಸಮಯ ಬೇಕಾಗುತ್ತದೆ

DigiYatra ಕಾಗದ ರಹಿತ ವಿಮಾನ ಪ್ರಯಾಣ: ದೆಹಲಿ ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಜಿಯಾತ್ರಾ ಸೌಲಭ್ಯ
ದೆಹಲಿ ವಿಮಾನ ನಿಲ್ದಾಣದಲ್ಲಿ ಡಿಜಿ ಯಾತ್ರಾ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Aug 16, 2022 | 4:29 PM

ದೆಹಲಿ: ಸರ್ಕಾರದ ಮಹತ್ವಾಕಾಂಕ್ಷೆಯ “ಡಿಜಿಯಾತ್ರಾ” (DigiYatra) ಅಡಿಯಲ್ಲಿ ಕಾಗದ ರಹಿತ ದೇಶೀಯ ವಿಮಾನ ಪ್ರಯಾಣವು ಕೆಲವು ಜನನಿಬಿಡ ಮೆಟ್ರೋ ವಿಮಾನ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ. 75 ನೇ ಸ್ವಾತಂತ್ರ್ಯ ದಿನದಂದು ದೆಹಲಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳು ಡಿಜಿಯಾತ್ರಾ (DY) ಆಪ್‌ನ ಬೀಟಾ ಆವೃತ್ತಿಯನ್ನು ಹೊರತಂದಿವೆ. ಈ ಅಪ್ಲಿಕೇಶನ್ ಪ್ರಸ್ತುತ ಗೂಗಲ್ ಪ್ಲೇಸ್ಟೋರ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು, ಶೀಘ್ರದಲ್ಲೇ ಐಒಎಸ್ ಆವೃತ್ತಿ ಲಭ್ಯವಾಗಲಿದೆ. ಯಾವುದೇ ವಿಮಾನದಲ್ಲಿ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ರಿಂದ ಪ್ರಯಾಣಿಸುವ ದೇಶೀಯ ಪ್ರಯಾಣಿಕರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ತಡೆರಹಿತ ಪ್ರಯಾಣದ ಅನುಭವಕ್ಕಾಗಿ  ನೋಂದಾಯಿಸಿಕೊಳ್ಳಬಹುದು ಎಂದು ದೆಹಲಿ ಅಂತರರಾಷ್ಟ್ರೀಯ ಏರ್‌ಪೋರ್ಟ್ ಲಿಮಿಟೆಡ್ (DIAL) ಹೇಳಿದೆ. ಈ ತಂತ್ರಜ್ಞಾನದೊಂದಿಗೆ, ವಿಮಾನ ನಿಲ್ದಾಣದ ಪ್ರವೇಶ, ಭದ್ರತಾ ತಪಾಸಣೆ ಪ್ರದೇಶಗಳು ಮತ್ತು ವಿಮಾನ ಬೋರ್ಡಿಂಗ್ ಸೇರಿದಂತೆ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಪ್ರವೇಶವನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಇ-ಗೇಟ್‌ಗಳಲ್ಲಿ ಡಿವೈ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆ. ದೇಶೀಯ ಪ್ರಯಾಣಕ್ಕಾಗಿ ಚೆಕ್‌ಪಾಯಿಂಟ್‌ಗಳನ್ನು ಒಳಗೊಂಡಂತೆ ಹಂತ ಹಂತವಾಗಿ ಎಲ್ಲಾ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅಳವಡಿಸಲಾಗುತ್ತದೆ.  ವಿಸ್ತಾರಾ ಮತ್ತು ಏರ್ ಏಷಿಯಾ ಇಂಡಿಯಾ ಪ್ರಸ್ತುತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿವೈಯೊಂದಿಗೆ ಸಂಯೋಜಿಸಲ್ಪಟ್ಟಿವೆ. ಪ್ರಯಾಣಿಕರು ಡಿಜಿಯಾತ್ರಾ ಅಪ್ಲಿಕೇಶನ್‌ನಲ್ಲಿ ಸುಲಭವಾಗಿ ನೋಂದಾಯಿಸಿಕೊಳ್ಳಬಹುದು ಎಂದು ಬಿಐಎಎಲ್ ಹೇಳಿದೆ.

ಪ್ರಯಾಣಿಕರ ಪ್ರಯಾಣವನ್ನು ಸರಳಗೊಳಿಸಲು ಮತ್ತು ಸಾಧ್ಯವಾದಷ್ಟು ತಡೆರಹಿತವಾಗಿಸಲು ನವೀನ ಮಾರ್ಗಗಳನ್ನು ನೀಡಲು ಬಿಐಎಎಲ್ ನಲ್ಲಿ ನಮ್ಮ ನಿರಂತರ ಪ್ರಯತ್ನವಾಗಿದೆ. ಡಿವೈ ಸೆಂಟ್ರಲ್ ಇಕೋಸಿಸ್ಟಮ್ (DYCE) ಅಳವಡಿಕೆಯು ಇದನ್ನು ಸಾಧಿಸಲು ಇರುವ ಹೆಜ್ಜೆಯಾಗಿದೆ. ಮೊದಲ ಹಂತದ ಅನುಷ್ಠಾನದ ಭಾಗವಾಗಲು ನಮಗೆ ಸಂತೋಷವಾಗಿದೆ ಎಂದು ಬಿಐಎಎಲ್ ಎಂಡಿ ಮತ್ತು ಸಿಇಒ ಹರಿ  ಮಾರಾರ್ ಹೇಳಿದ್ದಾರೆ. ಗೌಪ್ಯತೆ ಬಗ್ಗೆ ಕಾಳಜಿ ವಹಿಸಲಾಗುತ್ತದೆ. ಪ್ರಯಾಣಿಕರು ತಮ್ಮ ಡೇಟಾವನ್ನು ಹಂಚಿಕೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ. ಅದು ಸುರಕ್ಷಿತವಾಗಿದೆ ಮತ್ತು ಅವರ ಪ್ರಯಾಣದ ನಂತರ 24 ಗಂಟೆಗಳ ನಂತರ ಅಳಿಸಲಾಗುತ್ತದೆ ಎಂದು ಬಿಐಎಎಲ್ ಹೇಳಿದೆ. DYCE 2019 ರಲ್ಲಿ ಜಂಟಿ ಉದ್ಯಮವಾಗಿ ಸ್ಥಾಪಿಸಲಾದ ಡಿಜಿ ಯಾತ್ರಾ ಫೌಂಡೇಶನ್ (DYF) ನ ಉಪಕ್ರಮವಾಗಿದ್ದು ಬಿಐಎಲ್ ಪ್ರಮುಖ ಷೇರುದಾರರಲ್ಲಿ ಒಂದಾಗಿದೆ. ಡಿಜಿಯಾತ್ರಾ ಫೌಂಡೇಶನ್ ಪ್ಯಾನ್-ಇಂಡಿಯಾ ಘಟಕವಾಗಿದೆ ಮತ್ತು ಪ್ರಯಾಣಿಕರ ಐಡಿ ಮೌಲ್ಯೀಕರಣ ಪ್ರಕ್ರಿಯೆಯ ಹೊಣೆ ಹೊತ್ತಿದೆ.

ತಂತ್ರಜ್ಞಾನವು ಬೋರ್ಡಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಪ್ರತಿ ಪ್ರಯಾಣಿಕರಿಗೆ ಪ್ರತಿ ಟಚ್‌ಪಾಯಿಂಟ್‌ನಲ್ಲಿ ಮೂರು ಸೆಕೆಂಡುಗಳಿಗಿಂತ ಕಡಿಮೆ ಸಮಯ ಬೇಕಾಗುತ್ತದೆ. ಅವರ ಮುಖವು ಗುರುತಿನ ದಾಖಲೆ, ಲಸಿಕೆ ಖಲೆಗಳಾಗಿ ಕಾರ್ಯನಿರ್ವಹಿಸುತ್ತದೆ. ಅದೇ ವೇಳೆ ಮುಖವೇ ಬೋರ್ಡಿಂಗ್ ಪಾಸ್ ಆಗಿ ಕಾರ್ಯನಿರ್ವಹಿಸುತ್ತದೆ ”ಎಂದು ಡಿಐಎಎಲ್ ಹೇಳಿಕೆಯಲ್ಲಿ ತಿಳಿಸಿದೆ.

ಏರ್‌ಲೈನ್ಸ್ ನಿರ್ಗಮನ ನಿಯಂತ್ರಣ ವ್ಯವಸ್ಥೆಯೊಂದಿಗೆ ಪ್ರಯಾಣಿಕರ ಡೇಟಾವನ್ನು ಮೌಲ್ಯೀಕರಿಸಿದ ಕಾರಣ ಇದು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆಯನ್ನು ಖಚಿತಪಡಿಸುತ್ತದೆ, ಆ ಮೂಲಕ ನಿರ್ದಿಷ್ ಪ್ರಯಾಣಿಕರು ಮಾತ್ರ ಟರ್ಮಿನಲ್‌ಗೆ ಪ್ರವೇಶಿಸಬಹುದು. ಸಂಪೂರ್ಣ ಪ್ರಕ್ರಿಯೆಯು ಸರಾಗ ಮತ್ತು ಸ್ವಯಂಚಾಲಿತವಾಗಿ ಸಿಐಎಸ್‌ಎಫ್, ಏರ್‌ಲೈನ್ಸ್ ಮತ್ತು ಇತರ ಪಾಲುದಾರರಿಗೆ ಸಿಬ್ಬಂದಿಗಳ ಆಪ್ಟಿಮೈಸೇಶನ್‌ಗೆ ಕಾರಣವಾಗುತ್ತದೆ ಎಂದು ಡಿಐಎಎಲ್ ಹೇಳಿದೆ.

ಮುಖ ಗುರುತಿಸುವಿಕೆ ವ್ಯವಸ್ಥೆಯೊಂದಿಗೆ (ಎಫ್‌ಆರ್‌ಎಸ್) ಸಿದ್ಧವಾಗಿರುವ ದೇಶದ ಮೊದಲ ಕೆಲವು ವಿಮಾನ ನಿಲ್ದಾಣಗಳಲ್ಲಿ ದೆಹಲಿ ವಿಮಾನ ನಿಲ್ದಾಣವೂ ಸೇರಿದೆ. ಈ ವ್ಯವಸ್ಥೆಯು ಪ್ರಯಾಣಿಕರಿಗೆ ತಡೆರಹಿತ ಅನುಭವವನ್ನು ನೀಡಲಿದೆ. ಎಫ್ಆರ್​​ಎಸ್ ಅನೇಕ ಹಂತಗಳಲ್ಲಿ ಗುರುತಿನ ತಪಾಸಣೆಯ ಪ್ರಕ್ರಿಯೆಯಿಂದ ಪ್ರಯಾಣಿಕರ ಸಮಯ ಉಳಿಸುವುದಲ್ಲದೆ ಅವುಗಳನ್ನು ಕಾಗದರಹಿತವಾಗಿ ಪ್ರಯಾಣಿಸಲು ಪ್ರೋತ್ಸಾಹಿಸುತ್ತದೆ ಮತ್ತು ವಿಮಾನ ನಿಲ್ದಾಣದಲ್ಲಿ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಡಿಐಎಎಲ್ ಸಿಇಒ ವಿದೇಹ್ ಕುಮಾರ್ ಜೈಪುರಿಲಾಲ್ ಹೇಳಿದ್ದಾರೆ.

ಡಿವೈ ಎಂಬುದು ಬಯೋಮೆಟ್ರಿಕ್ ಎನೇಬಲ್ಡ್ ಸೀಮ್ ಲೆಸ್ ಟ್ರಾವೆಲ್ (BEST- ಬಯೋಮೆಟ್ರಿಕ್ ಆಧಾರಿತ ಸುಗಮ ಪ್ರಯಾಣ) ಅನುಭವವನ್ನು ನೀಡುತ್ತದೆ. ಇದು ಪ್ರಯಾಣಿಕರಿಗೆ ಕಾಗದರಹಿತ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಭಾರತದಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಿದ ಮೊದಲ ಕೆಲವು ವಿಮಾನ ನಿಲ್ದಾಣಗಳಲ್ಲಿ ಐಜಿಐಎ IGIA ಕೂಡ ಸೇರಿದೆ. ಡಿಐಎಲ್ T3 ನಲ್ಲಿ ಅಗತ್ಯವಿರುವ ಸೌಲಭ್ಯವನ್ನು ಸ್ಥಾಪಿಸಿದ್ದು ಸುಮಾರು 20,000 ಪ್ರಯಾಣಿಕರೊಂದಿಗೆ ಪ್ರಯೋಗಗಳನ್ನು ನಡೆಸಿತು.

ದೆಹಲಿ ವಿಮಾನ ನಿಲ್ದಾಣದಿಂದ ಹೊರಡುವ ಪ್ರಯಾಣಿಕರು ಡಿವೈ ಹೇಗೆ ಪಡೆಯಬಹುದು ಎಂಬುದು ಇಲ್ಲಿದೆ:

1. ಬಯೋಮೆಟ್ರಿಕ್ ನೋಂದಣಿ

2. ಪ್ಲೇ ಸ್ಟೋರ್ ಅಥವಾ ಐಒಎಸ್​ನಿಂದ ಡಿಜಿಯಾತ್ರಾ ಆಪ್ ಡೌನ್ ಲೋಡ್ ಮಾಡಿ

3.ನಿಮ್ಮ ಫೋನ್ ಸಂಖ್ಯೆ ಮತ್ತು ಒಟಿಪಿ ಬಳಸಿ ನೋಂದಣಿ ಮಾಡಿ

4.ಡಿಜಿ ಲಾಕರ್ ಬಳಸಿ ಆಧಾರ್ ಮಾಹಿತಿ ನೀಡಿ

5. ಡಿಜಿಲಾಕರ್ ನೋಂದಣಿ ಆಗಿರದಿದ್ದರೆ ನೋಂದಣಿ ಮಾಡಿಕೊಳ್ಳಿ

6. ಸೆಲ್ಫಿ ಕ್ಲಿಕ್ಕಿಸಿಕೊಳ್ಳಿ. ಸೆಲ್ಫಿಯ ಮೌಲ್ಯೀಕರಣವನ್ನು ಆಧಾರ್ ಮತ್ತು ಇನ್ನಿತರ ಮಾಹಿತಿಗಳಿಂದ ಮಾಡಲಾಗುತ್ತದೆ

7. ಕೋವಿನ್ ಮಾಹಿತಿ ಬಳಸಿ ಲಸಿಕೆಯ ವಿವರ ನೀಡಿ

8.  ಸ್ಕ್ಯಾನ್ ಬೋರ್ಡಿಂಗ್ ಪಾಸ್ (ಪೂರ್ವಾಪೇಕ್ಷಿತ – ಚೆಕ್-ಇನ್) – ಸ್ಕ್ಯಾನಿಂಗ್ ಉದ್ದೇಶಗಳಿಗಾಗಿ ಫೋನ್ ಹೊರತುಪಡಿಸಿ ಬೇರೆ ಸಾಧನದಲ್ಲಿ ಭೌತಿಕ ಬೋರ್ಡಿಂಗ್ ಪಾಸ್ ಅಥವಾ ಬೋರ್ಡಿಂಗ್ ಪಾಸ್ QR ಕೋಡ್ / ಬಾರ್ ಕೋಡ್ ಹೊಂದಿರಬೇಕು

9. ವಿಮಾನ ನಿಲ್ದಾಣದಲ್ಲಿ ಈ ಮಾಹಿತಿ ಮತ್ತು ಬೋರ್ಡಿಂಗ್ ಪಾಸ್ ಮಾಹಿತಿ ಹಂಚಿಕೊಳ್ಳಿ

ವಿಮಾನ ನಿಲ್ದಾಣದಲ್ಲಿ ಇ ಗೇಟ್ ಪ್ರವೇಶ 1. ಪ್ರಯಾಣಿಕರು ಇ ಗೇಟ್ ಮೂಲಕ ಪ್ರವೇಶಿಸಬೇಕು

2. ಬಾರ್ ಕೋಡ್ ಇರುವ ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಿ

3. ಇ ಗೇಟ್ ನಲ್ಲಿ ಸ್ಥಾಪಿಸಿರುವ ಫೇಷಿಯಲ್ ರೆಕಗ್ನಿಷನ್ ಸಿಸ್ಟಂ ಕ್ಯಾಮೆರಾಕ್ಕೆ ಮುಖ ತೋರಿಸಿ

4. ಇದು ಪ್ರಯಾಣಿಕರ ಐಡಿ ಮತ್ತು ಪ್ರಯಾಣದ ಮಾಹಿತಿಯನ್ನು ಪರಿಶೀಲಿಸುತ್ತದೆ. ಪರಿಶೀಲನೆ ನಂತರ ಇ ಗೇಟ್ ತೆರೆಯುತ್ತದೆ.

ಭದ್ರತಾ ತಪಾಸಣೆಗೆ ಪ್ರವೇಶ

1. ಪ್ರಯಾಣಿಕರು ಪ್ರವೇಶ ಇ-ಗೇಟ್‌ಗೆ ಬರಬೇಕು

2. ಇ-ಗೇಟ್‌ನಲ್ಲಿ ಸ್ಥಾಪಿಸಲಾದ FRS ಕ್ಯಾಮೆರಾ ನೋಡಿ

3. ಸಿಸ್ಟಂ ಪ್ರಯಾಣಿಕರ ಐಡಿ ಮತ್ತು ಪ್ರಯಾಣ ದಾಖಲೆಯನ್ನು ಮೌಲ್ಯೀಕರಿಸುತ್ತದೆ

4. ಪ್ರಯಾಣಿಕರಿಗೆ ಭದ್ರತಾ ತಪಾಸಣೆಗೆ ಅವಕಾಶ ನೀಡಲು ಇ-ಗೇಟ್ ತೆರೆಯುತ್ತದೆ.

ಇದರ ನಂತರ, ಪ್ರಯಾಣಿಕರು ಭದ್ರತೆ ತಪಾಸಣೆಗೊಳಗಾಗಿ ವಿಮಾನವನ್ನು ಹತ್ತಲು ಸಾಮಾನ್ಯ ವಿಧಾನವನ್ನು ಅನುಸರಿಸುತ್ತಾರೆ.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ