ಬೆಂಗಳೂರಿನ ಪಾರ್ಟ್ಮೆಂಟ್ನ 23ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

| Updated By: ಆಯೇಷಾ ಬಾನು

Updated on: Mar 14, 2022 | 9:35 PM

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಅಂಜನ್, ಸಾಕಷ್ಟು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಎಂಬುವುದು ತಿಳಿದು ಬಂದಿದೆ. ಹೀಗಾಗಿ ಅಂಜನ್ ಇಂತಹ ಕೃತ್ಯಕ್ಕೆ ಮುಂದಾಗಿದ್ದಾನೆ.

ಬೆಂಗಳೂರಿನ ಪಾರ್ಟ್ಮೆಂಟ್ನ 23ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಅಪಾರ್ಟ್ಮೆಂಟ್ನಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಇಂದು (ಮಾರ್ಚ್ 14) ಬೆಳಗ್ಗೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಕನ್ ಸಿಟಿ ಅಪಾರ್ಟ್ಮೆಂಟ್ನ 23ನೇ ಮಹಡಿಯಿಂದ ಜಿಗಿದು ಅಂಜನ್ (17) ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಕೊಳ್ಳೇಗಾಲದವನಾದ ವಿದ್ಯಾರ್ಥಿ ಅಂಜನ್, ಪ್ರತಿಷ್ಠಿತ ಕಾಲೇಜಿನಲ್ಲಿ ಸೆಕೆಂಡ್ ಪಿಯು ವ್ಯಾಸಂಗ ಮಾಡುತಿದ್ದ. ಆದ್ರೆ ಸಾಕಷ್ಟು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಎಂಬುವುದು ತಿಳಿದು ಬಂದಿದೆ. ಹೀಗಾಗಿ ಅಂಜನ್ ಇಂತಹ ಕೃತ್ಯಕ್ಕೆ ಮುಂದಾಗಿದ್ದಾನೆ. ಅಂಜನ್ ತನ್ನ ದೊಡ್ಡಪ್ಪನ ಮಗನ ಜೊತೆ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದ. ಅಂಜನ್, ನಿನ್ನೆ ಸಂಬಂಧಿ ಜೊತೆ ಇಂಡಿಯಾ ಮ್ಯಾಚ್​ ನೋಡಲು ಹೋಗಿದ್ದ.  ಸಾಯುವ ಮುನ್ನ ತಂದೆಗೆ ವಿಡಿಯೋ ಕಳುಹಿಸಿದ್ದ. ವಿಡಿಯೋದಲ್ಲಿ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿದ್ದ. ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಣನಕುಂಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪುನರಾಭಿವೃದ್ಧಿಪಡಿಸಿದ ಸೆಂಟ್ರಲ್ ವಿಸ್ಟಾ ಅವೆನ್ಯೂ ಮೇ ತಿಂಗಳ ವೇಳೆಗೆ ಸಿದ್ಧವಾಗಲಿದೆ: ಸರ್ಕಾರ

Fire Acccident: ಜಮ್ಮುವಿನ ಗುಡಿಸಲುಗಳಲ್ಲಿ ಬೆಂಕಿ ಅವಘಡ; ಮೂವರು ಸಜೀವ ದಹನ, 14 ಜನರಿಗೆ ಗಾಯ

Published On - 9:13 pm, Mon, 14 March 22