ಬೆಂಗಳೂರು: ಶಕ್ತಿಯೋಜನೆ (Shakti Yojana) ಜಾರಿ ಬಳಿಕ ಖಾಸಗಿ ವಾಹನ ಚಾಲಕರು ಮತ್ತು ಮಾಲಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಖಾಸಗಿ ವಾಹನ ಒಕ್ಕೂಟ ಸಚಿವ ರಾಮಲಿಂಗಾ ರೆಡ್ಡಿ (Ramlinga Reddy) ಅವರ ಜೊತೆ ಮಾತುಕತೆ ನಡೆಸಿ, ತನ್ನ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿತ್ತು. ಸರ್ಕಾರ ಆಗಸ್ಟ್ 31ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿತ್ತು. ಈ ಬೇಡಿಕೆಗಳನ್ನು ಸರ್ಕಾರ ಇನ್ನು ಕೂಡ ಈಡೇರಸದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬಂದ್ ಅಸ್ತ್ರ ಪ್ರಯೋಗಿಸಲು ಖಾಸಗಿ ವಾಹನ ಒಕ್ಕೂಟ ಮುಂದಾಗಿದೆ. 32 ಖಾಸಗಿ ಸಾರಿಗೆ ಒಕ್ಕೂಟಗಳು ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್ಗೆ (Bengaluru Bandh) ಕರೆ ನೀಡಿವೆ. ಸೆಪ್ಟೆಂಬರ್ 11 ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆವರೆಗೆ ಆಟೋ ಟ್ಯಾಕ್ಸಿ, ಖಾಸಗಿ ಬಸ್, ಶಾಲಾ ಬಸ್ ಬಂದ್ ಇರಲಿವೆ.
ಇನ್ನು ಸೆ.11 ರಂದು ಪ್ರಮುಖ ಜಂಕ್ಷನ್ ಮತ್ತು ಹೆದ್ದಾರಿಗಳಲ್ಲಿ ವಾಹನಗಳ ತಡೆಗೆ ಒಕ್ಕೂಟ ಪ್ಲಾನ್ ಮಾಡಿದೆ. ಮೆಜೆಸ್ಟಿಕ್ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಸಲಿದ್ದು, ಸರ್ಕಾರ ಲಿಖಿತ ಆದೇಶ ನೀಡೋವರೆಗೂ ಬಂದ್ ಕೈ ಬಿಡಲ್ಲ ಎಂದು ನಿನ್ನೆ (ಆ.31) ರಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Fri, 1 September 23