ಕೊರೊನಾಗೆ ನಿವೃತ್ತ ಕೆಇಬಿ ನೌಕರ ಬಲಿ; 4 ಲಕ್ಷ ಹಣ ಕಟ್ಟಿ ಬಾಡಿ ತೆಗೆದುಕೊಂಡು ಹೋಗಿ ಅಂತಿರೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

|

Updated on: Jun 01, 2021 | 10:46 AM

ನಿನ್ನೆ ರಾತ್ರಿ ಕೊರೊನಾದಿಂದ ನಮ್ಮ ಅಪ್ಪ ಅಸುನೀಗಿದ್ದಾರೆ. ಈ ಮಧ್ಯೆ, ಅವರ ಚಿಕಿತ್ಸೆಗಾಗಿ 4 ಲಕ್ಷದ 80 ಸಾವಿರ ಬಿಲ್ ಪಾವತಿ ಮಾಡಲಾಗಿದೆ. ಇನ್ನೂ 4 ಲಕ್ಷದ 72 ಸಾವಿರ ರೂಪಾಯಿ ಪಾವತಿ ಮಾಡಿದರೆ ಮಾತ್ರವೇ ಶವ ನೀಡುವುದಾಗಿ ಆಸ್ಪತ್ರೆಯವರು ಹೇಳುತ್ತಿದ್ದಾರೆ ಎಂದು ಗಿರಿಯಪ್ಪ ಪುತ್ರ ಶಿವಕುಮಾರ್ ಅವರು ಶಂಕರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಾರೆ.

ಕೊರೊನಾಗೆ ನಿವೃತ್ತ ಕೆಇಬಿ ನೌಕರ ಬಲಿ; 4 ಲಕ್ಷ ಹಣ ಕಟ್ಟಿ ಬಾಡಿ ತೆಗೆದುಕೊಂಡು ಹೋಗಿ ಅಂತಿರೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಕೊರೊನಾಗೆ ನಿವೃತ್ತ ಕೆಇಬಿ ನೌಕರ ಬಲಿ; 4 ಲಕ್ಷ ಹಣ ಕಟ್ಟಿ ಬಾಡಿ ತೆಗೆದುಕೊಂಡು ಹೋಗಿ ಅಂತಿರೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
Follow us on

ಬೆಂಗಳೂರು: ಕೊರೊನಾದಿಂದ ಮೃತಪಟ್ಟರೆ ಸಂಬಂಧಿಕರಿಗೆ ಆ ವ್ಯಕ್ತಿಯ ಶವ ನೀಡದೇ ಸತಾಯಿಸುವ ಆಸ್ಪತ್ರೆಗಳ ವಿರುದ್ಧ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶವಿದೆ. ಚಿಕಿತ್ಸೆಯ ಬಾಕಿ ಬಿಲ್‌ ಕಟ್ಟಲು ಒತ್ತಡ ಹೇರಬಾರದು. ಒಂದು ವೇಳೆ ಅಂತಹ ಪ್ರಸಂಗ ನಡೆದರೆ ಲೈಸೆನ್ಸ್ ರದ್ದು ಮಾಡುವುದಾಗಿಯೂ ಸರ್ಕಾರ ಎಚ್ಚರಿಕೆ ನೀಡಿದೆ. ಆದರೆ ರಾಜಧಾನಿಯ ಹೃದಯ ಭಾಗದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದು ಸರ್ಕಾರಿ ಆದೇಶಕ್ಕೂ ಡೋಂಟ್‌ಕೇರ್, ಮಾನವೀಯತೆಗೂ ಡೋಂಟ್‌ಕೇರ್ ಅನ್ನುತ್ತಿದೆ.

ಮಾರಕ ಕೊರೊನಾ ಸೋಂಕಿನಿಂದ ನಿವೃತ್ತ ಕೆಇಬಿ ನೌಕರ ಗಿರಿಯಪ್ಪ (67) ಎಂಬುವವರು ಕನಕಪುರ ರಸ್ತೆಯಲ್ಲಿರುವ ಶಂಕರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 7-30 ಕ್ಕೆ ಸಾವಿಗೀಡಾಗಿದ್ದಾರೆ. ಕೆಂಗೇರಿಯ ಬಳಿಯ ನಾಗದೇವನಹಳ್ಳಿ ನಿವಾಸಿ ಗಿರಿಯಪ್ಪ ಕಳೆದ 19 ರಂದು ಶಂಕರ್ ಆಸ್ಪತ್ರೆ ಸೇರಿದ್ದರು. ಒಂದು ತಿಂಗಳಿನಿಂದ ಅವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು.

ಆದರೆ ಕೊನೆಗೂ ಅವರು ಬದುಕುಳಿಯಲಿಲ್ಲ. ನಿನ್ನೆ ರಾತ್ರಿ ಅಸುನೀಗಿದ್ದಾರೆ. ಈ ಮಧ್ಯೆ, ಗಿರಿಯಪ್ಪ ಚಿಕಿತ್ಸೆಗಾಗಿ 4 ಲಕ್ಷದ 80 ಸಾವಿರ ಬಿಲ್ ಪಾವತಿ ಮಾಡಲಾಗಿದೆ. ಇನ್ನೂ 4 ಲಕ್ಷದ 72 ಸಾವಿರ ರೂಪಾಯಿ ಪಾವತಿ ಮಾಡಿದರೆ ಮಾತ್ರವೇ ಶವ ನೀಡುವುದಾಗಿ ಆಸ್ಪತ್ರೆಯವರು ಹೇಳುತ್ತಿದ್ದಾರೆ ಎಂದು ಗಿರಿಯಪ್ಪ ಪುತ್ರ ಶಿವಕುಮಾರ್ ಅವರು ಶಂಕರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಾರೆ. ಸರ್ಕಾರದ ಆದೇಶದ ಬಗ್ಗೆ ಆಸ್ಪತ್ರೆಯ ಗಮನ ಸೆಳೆದರೂ ಡೋಂಟ್‌ಕೇರ್ ಅನ್ನುತ್ತಿದ್ದಾರೆ ಎಂದು ಶಿವಕುಮಾರ್ ಚಿಂತಾಕ್ರಾಂತರಾಗಿದ್ದಾರೆ.

ಗಿರಿಯಪ್ಪ ಚಿಕಿತ್ಸೆಗಾಗಿ 4 ಲಕ್ಷದ 80 ಸಾವಿರ ಬಿಲ್ ಪಾವತಿ ಮಾಡಲಾಗಿದೆ. ಇನ್ನೂ 4 ಲಕ್ಷದ 72 ಸಾವಿರ ರೂಪಾಯಿ ಪಾವತಿ ಮಾಡಿದರೆ ಮಾತ್ರವೇ ಶವ ನೀಡುವುದಾಗಿ ಆಸ್ಪತ್ರೆಯವರು ಹೇಳುತ್ತಿದ್ದಾರೆ

(shankar super speciality hospital in shankarapuram allegedly demand arrears from covid patient family)

ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಟ್ಟಿರುವ ವೆಂಟಿಲೇಟರ್​ ರಿಪೇರಿ ಮಾಡಲಿದೆ ಬಾಷ್ ಕಂಪನಿ