ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಟ್ಟಿರುವ ವೆಂಟಿಲೇಟರ್ ರಿಪೇರಿ ಮಾಡಲಿದೆ ಬಾಷ್ ಕಂಪನಿ
ತನ್ನ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ನೆರವಿನಿಂದ ಕೆಟ್ಟಿರುವ ವೆಂಟಿಲೇಟರ್ಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡಲು ಬಾಷ್ ಕಂಪನಿ ಒಪ್ಪಿದ್ದು, ವೆಂಟಿಲೇಟರ್ ಎಷ್ಟು ಮತ್ತು ಯಾವ ಆಸ್ಪತ್ರೆಗಳಲ್ಲಿ ಕೆಟ್ಟಿವೆ ಎಂಬುದನ್ನು ಪತ್ತೆ ಮಾಡಿ ತಿಳಿಸಲು ಸರ್ಕಾರಕ್ಕೆ ತಿಳಿಸಿದೆ.
ಬೆಂಗಳೂರು: ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಟ್ಟಿರುವ ವೆಂಟಿಲೇಟರ್ಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡುವ ಕುರಿತು ಬಾಷ್ ಕಂಪನಿ ಪ್ರತಿನಿಧಿ ರಮೇಶ ಸಾಲಿಗ್ರಾಮ ಅವರ ಜತೆ ಉಪ ಮುಖ್ಯಮಂತ್ರಿ ಮತ್ತು ಕೊವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ.ಅಶ್ವತ್ಥ ನಾರಾಯಣ ಚರ್ಚೆ ನಡೆಸಿದರು. ತನ್ನ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ನೆರವಿನಿಂದ ಕೆಟ್ಟಿರುವ ವೆಂಟಿಲೇಟರ್ಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡಲು ಬಾಷ್ ಕಂಪನಿ ಒಪ್ಪಿದ್ದು, ವೆಂಟಿಲೇಟರ್ ಎಷ್ಟು ಮತ್ತು ಯಾವ ಆಸ್ಪತ್ರೆಗಳಲ್ಲಿ ಕೆಟ್ಟಿವೆ ಎಂಬುದನ್ನು ಪತ್ತೆ ಮಾಡಿ ತಿಳಿಸಲು ಸರ್ಕಾರಕ್ಕೆ ತಿಳಿಸಿದೆ.
ಕರ್ನಾಟಕದಲ್ಲಿ ಇಂದು ಒಂದೇ ದಿನ 20,628 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 492 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು ಒಂದೇ ದಿನ 42,444 ಜನರು ಸೋಂಕುಮುಕ್ತರಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿ 21,126 ಜನರು ಕೊವಿಡ್ನಿಂದ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಕೊವಿಡ್ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.14.95ರಷ್ಟಿದ್ದು, ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ.8.97ರಷ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 4,889 ಜನರಿಗೆ ಕೊವಿಡ್ ಸೋಂಕು ಖಚಿತಪಟ್ಟಿದ್ದು, 278 ಜನರ ನಿಧನರಾಗಿದ್ದಾರೆ.
ಇಂದು ಖಚಿತಪಟ್ಟ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25,67,449ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 21,89,064 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 28298 ಜನರ ಸಾವನ್ನಪ್ಪಿದ್ದು, 3,50,066 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಸೋಂಕಿತರ ಅಂಕಿ ಅಂಶ ಬಾಗಲಕೋಟೆ 166, ಬಳ್ಳಾರಿ 671, ಬೆಳಗಾವಿ 1027, ಬೆಂಗಳೂರು ಗ್ರಾಮಾಂತರ 557, ಬೆಂಗಳೂರು ನಗರ 4889, ಬೀದರ್ 42, ಚಾಮರಾಜನಗರ 365, ಚಿಕ್ಕಬಳ್ಳಾಪುರ 434, ಚಿಕ್ಕಮಗಳೂರು 843, ಚಿತ್ರದುರ್ಗ 763, ದಕ್ಷಿಣ ಕನ್ನಡ 923, ದಾವಣಗೆರೆ 449, ಧಾರವಾಡ 519, ಗದಗ 307, ಹಾಸನ 1024, ಹಾವೇರಿ 194, ಕಲಬುರಗಿ 107, ಕೊಡಗು 333, ಕೋಲಾರ 684, ಕೊಪ್ಪಳ 350 ಮಂಡ್ಯ 453, ಮೈಸೂರು 1720, ರಾಯಚೂರು 340, ರಾಮನಗರ 181, ಶಿವಮೊಗ್ಗ 672, ತುಮಕೂರು 1102, ಉಡುಪಿ 684, ಉತ್ತರ ಕನ್ನಡ 536, ವಿಜಯಪುರ 210, ಯಾದಗಿರಿ ಜಿಲ್ಲೆಯಲ್ಲಿಂದು 83 ಕೊರೊನಾ ಪ್ರಕರಣ ಪತ್ತೆಯಾಗಿದೆ.
(The Bosch Company will do the ventilator repairs free in Karnataka government hospitals)