ಆರ್ಬಿಐ ಹೆಸರಲ್ಲಿ ಸುಮಾರು 2 ಕೋಟಿ ವಂಚನೆ ಮಾಡಿದ್ದ ಯುವತಿ, ಕೃತ್ಯಕ್ಕೆ ಸಹಕರಿಸುತ್ತಿದ್ದ ನಟ ಬಂಧನ
ವಿದೇಶದಿಂದ ಹಣ ಬಂದಿದೆ ತೆರಿಗೆ ಕಟ್ಟಿ ಹಣ ಪಡೆಯಬೇಕು ಎಂದು ಉದ್ಯಮಿಗಳಿಗೆ ಅರ್ಚನಾ ವಂಚನೆ ಮಾಡುತ್ತಿದ್ದರು. ಆರ್ಬಿಐ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದರು.
ಚಿಕ್ಕಬಳ್ಳಾಪುರ: ಉದ್ಯಮಿಗಳನ್ನು ವಂಚಿಸುತ್ತಿದ್ದ ಮಹಿಳೆಯ ಮನೆ ಮೇಲೆ ಚಿಕ್ಕಬಳ್ಳಾಪುರ ಪೊಲೀಸರು ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಕೋಟೆ ಬಡಾವಣೆಯಲ್ಲಿರುವ ನಿವಾಸದ ಮಹಿಳೆ ಅರ್ಚನಾ ಎಂಬವರ ನಿವಾಸದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅರ್ಚನಾ ಉದ್ಯಮಿಗಳಿಗೆ ಆರ್ಬಿಐ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿದ್ದರು. ಭಾರೀ ಮೊತ್ತ ಪಡೆದುಕೊಂಡು ಮೋಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ವಿದೇಶದಿಂದ ಹಣ ಬಂದಿದೆ ತೆರಿಗೆ ಕಟ್ಟಿ ಹಣ ಪಡೆಯಬೇಕು ಎಂದು ಉದ್ಯಮಿಗಳಿಗೆ ಅರ್ಚನಾ ವಂಚನೆ ಮಾಡುತ್ತಿದ್ದರು. ಆರ್ಬಿಐ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದರು. 24 ಕೋಟಿ ರೂಪಾಯಿ ಸೆಸ್ ಪಾವತಿಸಿದರೆ ಹಣ ಬರುತ್ತದೆ, 6 ಲಕ್ಷ 35 ಸಾವಿರ ಕೋಟಿ ರೂಪಾಯಿ ಬರುತ್ತದೆ ಎಂದು ಮೋಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ವಂಚಕಿ ಅರ್ಚನಾ ಗ್ಯಾಂಗ್‌ಗೆ ಸಹಕರಿಸುತ್ತಿದ್ದ ನಟ ಶಂಕರ್, ಅರ್ಚನಾ ಸಹೋದರ ಶ್ರೀಹರಿ, ಸಂಬಂಧಿ ಶ್ರೀಪತಿ ಎಂಬವರನ್ನು ಕೂಡ ಬಂಧಿಸಲಾಗಿದೆ. ಸದ್ಯ ಅರ್ಚನಾ ಕೊವಿಡ್ ಸೋಂಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಯುವತಿ ಬೆಂಗಳೂರಿನ ವಂಶಿಕೃಷ್ಣ ಎಂಬವರಿಗೆ 2 ಕೋಟಿ 2 ಲಕ್ಷ ರೂಪಾಯಿ ವಂಚನೆ ಮಾಡಿದ್ದರು. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರೆಮ್ಡಿಸಿವಿರ್, ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ವಂಚನೆ; ಅಪರಿಚಿತ ಸಂಖ್ಯೆಗೆ ಹಣ ಕಳಿಸುವ ಮುನ್ನ ಎಚ್ಚರ
Published On - 9:07 pm, Sat, 29 May 21