SBI KYC: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆವೈಸಿ ಹೆಸರಿನಲ್ಲಿ ಮೋಸದ ಜಾಲ ಬೀಸುತ್ತಿರುವ ವಂಚಕರ ಬಗ್ಗೆ ಎಚ್ಚರಿಕೆಯಿಂದಿರಿ
ಕೆವೈಸಿ ಹೆಸರಲ್ಲಿ ಎಸ್‌ಬಿಐ ಗ್ರಾಹಕರಿಗೆ ವಂಚನೆ ಮಾಡುವ ಪ್ರಯತ್ನ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್‌ಬಿಐ) ಗ್ರಾಹಕರ ಖಾತೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಎಸ್ಸೆಮ್ಮೆಸ್ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತದೆ. ಅಲ್ಲದೆ, ಗ್ರಾಹಕರಿಗೆ ಬ್ಯಾಂಕ್ನಿಂದ ಹೊಸ ನಿಯಮಗಳನ್ನು ಕೂಡ ಸಂದೇಶಗಳ ಮೂಲಕವೇ ತಿಳಿಸಲಾಗುತ್ತದೆ. ಆದರೆ ನಿಮಗೆ ಗೊತ್ತಿರಲಿ, ಎಸ್‌ಬಿಐ ಕಳುಹಿಸುವ ಸಂದೇಶಗಳನ್ನೇ ಹೋಲುವಂಥದ್ದನ್ನು ಬಳಸಿಕೊಂಡು ಅನೇಕ ಸೈಬರ್ ಅಪರಾಧಿಗಳು ಜನರನ್ನು ಬಲೆಗೆ ಕೆಡವುತ್ತಿದ್ದಾರೆ. ಇಂತಹ ಅನೇಕ ಪ್ರಕರಣಗಳು ಈಚೆಗೆ ಬರುತ್ತಿದ್ದು, ಇದರಲ್ಲಿ ಕೆವೈಸಿ ಬಗ್ಗೆ ತಪ್ಪು ಸಂದೇಶಗಳನ್ನು ಕಳುಹಿಸಿ, ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಎಸ್‌ಬಿಐನಿಂದ ಅನೇಕ ಬಾರಿ ಸಂದೇಶಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ಎಚ್ಚರಿಸಲಾಗಿದೆ. ಬ್ಯಾಂಕ್ನಿಂದ ಹಲವು ಬಾರಿ ಟ್ವೀಟ್ ಮಾಡಲಾಗಿದೆ. ಯಾವುದೇ ಸಂದೇಶವನ್ನು ಸರಿಯಾಗಿ ಓದಿ, ಅದನ್ನು ಎಲ್ಲಿಂದ ಕಳುಹಿಸಲಾಗಿದೆ ಎಂದು ನೋಡಿ ಎಂದು ಬ್ಯಾಂಕ್ ತಿಳಿಸುತ್ತಲೇ ಇದೆ. ವಂಚನೆ ಮಾಡುವಂಥ ಸಂದರ್ಭದಲ್ಲಿ ಯಾವ ರೀತಿಯ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಮತ್ತು ಆಗ ಏನು ಹೇಳಬೇಕೆಂದು ತಿಳಿಸಲಾಗುತ್ತಿದೆ.…
ಎಂಥ ಸಂದೇಶಗಳು ಬರುತ್ತಿವೆ? ಈ ಮುಂಚೆಯಾದರೆ ಜನರಿಗೆ ದುಡ್ಡಿನ ಆಸೆ ತೋರಿಸಿದ ತಕ್ಷಣ ಬಲೆಗೆ ಬಿದ್ದು ಬಿಡುತ್ತಿದ್ದರು. ಆದರೆ ಈಗ, ನಿಮಗೆ ಬಹುಮಾನ ಬಂದಿದೆ ಅಥವಾ ಇಷ್ಟು ಹಣವನ್ನು ಗೆಲ್ಲುವ ಅವಕಾಶ ಇದೆ ಹೀಗೆ ತಮಾಷೆಯ ಭರವಸೆಗಳಿಗೆ ಮಾರುಹೋಗಿ ಜನರು ಮೋಸದ ಬಲೆಗೆ ಬೀಳುತ್ತಿದ್ದಾರೆ. ಈಗ ಬ್ಯಾಂಕಿನ ಗ್ರಾಹಕರಿಗೆ ಸೈಬರ್ ಅಪರಾಧಿಗಳು ಕೆವೈಸಿಗೆ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಸಂಬಂಧಿಸಿದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಕೆವೈಸಿ ಇಲ್ಲದ ಕಾರಣ ನಿಮ್ಮ ಖಾತೆಯನ್ನು ಸ್ಥಗಿತ ಮಾಡಲಾಗಿದೆ ಎಂದು ಸಂದೇಶ ಕಳುಹಿಸಲಾಗುತ್ತಿದೆ.
ಆ ನಂತರ, ಕೆವೈಸಿ ಮುಗಿಸಲು ಲಿಂಕ್ ಅಥವಾ ಸಂಖ್ಯೆಯನ್ನು ನೀಡಲಾಗುತ್ತದೆ. ಅದನ್ನು ಕ್ಲಿಕ್ ಮಾಡಿದಲ್ಲಿ ಗೋಪ್ಯ ಮಾಹಿತಿಯು ಅವರನ್ನು ತಲುಪುತ್ತವೆ. ಆದ್ದರಿಂದ ಅಂತಹ ಸಂದೇಶಗಳ ಬಗ್ಗೆ ನೀವು ಜಾಗರೂಕರಾಗಿರಬೇಕು ಮತ್ತು ಮೊದಲು ಸಂದೇಶವು ಬ್ಯಾಂಕಿನಿಂದ ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ನೋಡಿ. ಯಾವುದೇ ಸಂದೇಹವಿದ್ದರೆ ಬ್ಯಾಂಕ್ ಅನ್ನು ಸಂಪರ್ಕಿಸಿ.
ಬ್ಯಾಂಕ್ ಯಾವ ಮಾಹಿತಿಯನ್ನು ಒದಗಿಸಿತು? ಇತ್ತೀಚೆಗೆ, ಗ್ರಾಹಕರೊಬ್ಬರು ಟ್ವಿಟ್ಟರ್ ಮೂಲಕ ಇಂತಹ ಸಂದೇಶಗಳ ಬಗ್ಗೆ ಬ್ಯಾಂಕ್‌ಗೆ ತಿಳಿಸಿದರು. ಈ ಬಾರಿ ಎಸ್‌ಬಿಐ ಬ್ಯಾಂಕ್ ಅಂತಹ ಸಂದೇಶಗಳನ್ನು ಕಳುಹಿಸುತ್ತಿಲ್ಲ ಎಂದು ಟ್ವೀಟ್ ಮಾಡಿದೆ. ಅಂತಹ ಪರಿಸ್ಥಿತಿಯಲ್ಲಿ ಬ್ಯಾಂಕಿಂಗ್ ಪಾಸ್‌ವರ್ಡ್ ಬದಲಾಯಿಸಿ ಮತ್ತು ಬ್ಯಾಂಕಿಗೆ ದೂರು ನೀಡಿ. ಇದನ್ನು ಎಸ್‌ಬಿಐ ಮಾಡಿದ ಟ್ವಿಟ್ಟರ್‌ನಲ್ಲಿ ಬರೆಯಲಾಗಿದೆ, “ಪ್ರಿಯ ಗ್ರಾಹಕರೇ, ನಿಮ್ಮ ಜಾಗ್ರತೆಯನ್ನು ಪ್ರಶಂಸಿಸುತ್ತೇವೆ. ಅಂತಹ ಎಸ್‌ಎಂಎಸ್ ಅಥವಾ ಇಮೇಲ್ ಬಗ್ಗೆ ಜಾಗರೂಕರಾಗಿರಿ. ಎಸ್‌ಬಿಐ ಎಂದಿಗೂ ಬಳಕೆದಾರರ ಐಡಿ, ಪಾಸ್‌ವರ್ಡ್, ಡೆಬಿಟ್ ಕಾರ್ಡ್ ಸಂಖ್ಯೆ, ಪಿನ್, ಸಿವಿವಿ ಇತ್ಯಾದಿಗಳ ಬಗ್ಗೆ ಕೇಳುವುದಿಲ್ಲ,” ಎಂದು ಟ್ವೀಟ್ ಮಾಡಿದೆ.
ಅಂತಹ ಇಮೇಲ್‌ಗಳು, ಎಂಬೆಡೆಡ್ ಲಿಂಕ್‌ಗಳು, ಕರೆಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ. ಇದರಲ್ಲಿ ಬಳಕೆದಾರ ಐಡಿ, ಪಾಸ್‌ವರ್ಡ್, ಡೆಬಿಟ್ ಕಾರ್ಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಖ್ಯೆ, ಪಿನ್, ಸಿವಿವಿ ಬಗ್ಗೆ ಮಾಹಿತಿಯನ್ನು ನೀಡುವಂತೆ ಕರೆ, ಎಸ್‌ಎಂಎಸ್ ಅಥವಾ ಇಮೇಲ್ ಬಂದಲ್ಲಿ ಬ್ಯಾಂಕ್‌ಗೆ ತಿಳಿಸಿ. ನಿಮ್ಮ ಗೋಪ್ಯ ಮಾಹಿತಿಯನ್ನು ಆಕಸ್ಮಿಕವಾಗಿ ಎಲ್ಲೋ ಹಂಚಿಕೊಂಡಿದ್ದರೆ, ತಕ್ಷಣವೇ ಪಾಸ್‌ವರ್ಡ್ ಅನ್ನು ಬದಲಾಯಿಸಿ. ಅಲ್ಲದೆ, ಶಾಖೆ ಮತ್ತು ಕಾನೂನು ಜಾರಿ ಸಂಸ್ಥೆಗೆ ತಿಳಿಸಿ ಎಂದು ಮಾಹಿತಿ ನೀಡಲಾಗಿದೆ.
We advise our customers to be alert of fraudsters and not to share any sensitive details online or download any app from an unknown source.#StaySafe #StaySecure #BeAlert #CyberSecurity #CyberSafety #SBIAapkeSaath pic.twitter.com/GuhDZTc9eg
— State Bank of India (@TheOfficialSBI) May 28, 2021
ಇದನ್ನೂ ಓದಿ: SBI KYC: ಆನ್ಲೈನ್ನಲ್ಲಿ ಎಸ್‌ಬಿಐ ಕೆವೈಸಿ ಅಪ್ಡೇಟ್ ಮಾಡಲು ಆಗದಿದ್ದಲ್ಲಿ ದೂರು ಸಲ್ಲಿಸುವುದು ಹೇಗೆ?
ಇದನ್ನೂ ಓದಿ: ಡಿಜಿಟಲ್ ಪೇಮೆಂಟ್ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲೇಬೇಡಿ; ಗ್ರಾಹಕರನ್ನು ಎಚ್ಚರಿಸಿದ ಎಸ್‌ಬಿಐ
(SBI alerts customers about fraudsters who are sending messages in the name of KYC and cheating people)
Published On - 7:41 pm, Fri, 28 May 21