ಕಲಬುರಗಿ ವಿಷನ್ 2050: 30 ವರ್ಷದೊಳಗೆ ಕಲಬುರಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ

ಎಲ್ಲಾ ಇಲಾಖೆಗಳಲ್ಲಿ ಸಮನ್ವಯತೆ ಸಾಧಿಸುವುದರ ಜೊತೆಗೆ ‌ ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿ ರಚನೆ ಮಾಡುವ ಗುರಿಯನ್ನು ‌ಹಾಕಿಕೊಳ್ಳಲಾಗಿದೆ. ಜಿಲ್ಲೆಗೆ ಪೂರಕವಾಗಿ ಅಲ್ಪಾವಧಿ, ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸಿ‌ ಕಾಲಮಿತಿಯೊಳಗೆ ಅನುಷ್ಠಾನ ಮಾಡುವುದು ಇದರ ಉದ್ದೇಶ ಎಂದರು.

ಕಲಬುರಗಿ ವಿಷನ್ 2050: 30 ವರ್ಷದೊಳಗೆ ಕಲಬುರಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ
ಮುರುಗೇಶ್ ನಿರಾಣಿ
Follow us
TV9 Web
| Updated By: ganapathi bhat

Updated on:Aug 14, 2021 | 1:07 PM

ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರ ಬಿಂದು ಕಲಬುರಗಿ ಜಿಲ್ಲೆಯನ್ನು ಮುಂದಿನ 30 ವಷ೯ದೊಳಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಪಡಿಸುವ ಸದುದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಕಲಬುರಗಿ ವಿಷನ್ 2050 ಎಂಬ ವಿನೂತನ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಇಂದಿಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದಿರುವ ಕಲಬುರಗಿ ಜಿಲ್ಲೆಯನ್ನು ಇನ್ನು ಮೂರು ದಶಕದೊಳಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಪಡಿಸಲು ಕಲಬುರಗಿ ವಿಷನ್-2050 ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಒಂದು ಜಿಲ್ಲೆಯನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸಲು ಹಾಕಿಕೊಂಡಿರುವ ಯೋಜ‌ನೆ ರಾಜ್ಯದಲ್ಲಿ ಪ್ರಪ್ರಥಮವಾಗಿ ಕಲಬುರಗಿಯಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದರು.

ಕಲಬುರಗಿ ವಿಷನ್-2050ರಲ್ಲಿ ‌ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಮುಂತಾದ ಕ್ಷೇತ್ರಗಳ 15 ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಲ್ಲಿ ಸ್ಥಳೀಯ ಶಾಸಕರು, ನಿವೃತ್ತಿ ಹೊಂದಿದವರು, ಆಯಾ ಕ್ಷೇತ್ರಗಳಲ್ಲಿ ಅನುಭವ-ಪರಿಣತಿ ಹೊಂದಿರುವವರು ಸೇರಿಸಿಕೊಳ್ಳಲಾಗುವುದು. ಆಯಾ ಇಲಾಖೆಯ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನು ಆಯಾ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳನ್ನಾಗಿ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಈ ಎಲ್ಲಾ ಸಮಿತಿಯ ಅಧ್ಯಕ್ಷರುಗಳು ಪ್ರಧಾನ ಸಮಿತಿ ಸದಸ್ಯರಾಗಿರುತ್ತಾರೆ. ಪ್ರಧಾನ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು ಮುಂತಾದವರು ಸದಸ್ಯರಿರುತ್ತಾರೆ ಎಂದು ವಿವರಿಸಿದರು.

ಎಲ್ಲಾ ಇಲಾಖೆಗಳಲ್ಲಿ ಸಮನ್ವಯತೆ ಸಾಧಿಸುವುದರ ಜೊತೆಗೆ ‌ ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿ ರಚನೆ ಮಾಡುವ ಗುರಿಯನ್ನು ‌ಹಾಕಿಕೊಳ್ಳಲಾಗಿದೆ. ಜಿಲ್ಲೆಗೆ ಪೂರಕವಾಗಿ ಅಲ್ಪಾವಧಿ, ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸಿ‌ ಕಾಲಮಿತಿಯೊಳಗೆ ಅನುಷ್ಠಾನ ಮಾಡುವುದು ಇದರ ಉದ್ದೇಶ ಎಂದರು.

ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ‌ ನಡೆಯಲಿದ್ದು,ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಎಂದು ಹೇಳಿದರು. ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಳಕೆ ಮಾಡಿಕೊಂಡು ಗುಡಿ, ಸಣ್ಣ ಮತ್ತು ಬೃಹತ್ ಕೈಗಾರಿಕೆಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.

ಯಾವುದೇ ಫಲಾಪೇಕ್ಷೆ ಬಯಸದ ಕಲಬುರಗಿ ಜಿಲ್ಲೆಯ ಬುದ್ಧಿಜೀವಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು. ರಾಜ್ಯದ ನಿವೃತ್ತ ಮುಖ್ಯಕಾರ್ಯದರ್ಶಿ ರಂಗನಾಥ್, ಹಿರಿಯ ಐಎಎಸ್ ಅಧಿಕಾರಿ ಡಾ.ಶಾಲಿನಿ ರಜನೀಶ್ ಅವರು ಈ ಕಾರ್ಯಕ್ಕೆ ನೆರವಾಗಲು ಮುಂದೆ ಬಂದಿದ್ದಾರೆ ಎಂದು ಸಚಿವರು ಹೇಳಿದರು. ಸಮಿತಿ ರಚನೆಯಾದ ಮೇಲೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಮುಖರಿಂದ ಸದಸ್ಯರಿಗೆ ತರಬೇತಿ ಕೊಡಿಸಲಾಗುವುದು ಎಂದರು.

ಕಲಬುರಗಿ ವಿಷನ್-2050 ನಿಟ್ಟಿನಲ್ಲಿ ಬಹಳಷ್ಟು ಕೆಲಸ ಮಾಡುವುದಿದೆ. ಭಾರತ ಸೇರಿದಂತೆ 154 ದೇಶಗಳಲ್ಲಿ ಕನ್ಸಲ್ಟೆನ್ಸಿ ಸೇವೆ ಒದಗಿಸುತ್ತಿರುವ ಐಎಲ್‌ಅಂಡ್‌ಎಫ್‌ಎಸ್‌ಎಲ್ ಮತ್ತು ಅಮೇರಿಕಾ ಮೂಲದ ಇ ಅಂಡ್ ವೈ ಕಂಪೆನಿಗಳಿಂದ ಕಲಬುರಗಿ ಅಭಿವೃದ್ಧಿ ಸಲುವಾಗಿ ಸೇವೆ ಪಡೆಯುವ ನಿಟ್ಟಿನಲ್ಲಿ ಅಲೋಚಿಸಲಾಗಿದೆ ಎಂದು ಅವರು ಹೇಳಿದರು.

ಕಲಬುರಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಸರಿಸಬೇಕಿದೆ. ಕಲ್ಯಾಣ ಕರ್ನಾಟಕ ಎಂಬ ಹೆಸರು ಕೇವಲ ನಾಮಕರಣ ಎಂಬುದಕ್ಕೆ ಸೀಮಿತವಗದೆ, ಅಭಿವೃದ್ಧಿಯ ವಸ್ತುಸ್ಥಿತಿಯಾಗಬೇಕು ಎಂದು ಅವರು ಪ್ರತಿಪಾದಿಸಿದರು. ತಮ್ಮ ಸ್ವಕ್ಚೇತ್ರ ಬಾಗಲಕೋಟೆಯ ಬೀಳಗಿಯಲ್ಲಿ ಶಿಕ್ಷಣ ಅಭಿವೃದ್ಧಿಯಲ್ಲಿ ಮಾಡಿರುವ ಸಾಧನೆಗಳನ್ನು ಉಲ್ಲೇಖಿಸಿದ ಅವರು, ಕಲಬುರಗಿ ವಿಷನ್-2050ಯಲ್ಲಿ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಏಳ್ಗೆ ಸಾಧಿಸಬಹುದಾಗಿದೆ ಎಂದು ಒತ್ತಿ ಹೇಳಿದರು.

ನೀರಿನ ವ್ಯವಸ್ಥೆ, ಲೈಮ್ ಸ್ಟೋನ್ ಗಳಿಂದ ಕಲಬುರಗಿ ಜಿಲ್ಲೆ ಶ್ರೀಮಂತವಾಗಿದೆ. ಆದರೆ, ಉದ್ದಿಮೆಗಳಿಗೆ ಇವುಗಳನ್ನು ಬಳಸಿಕೊಂಡು ಕರ್ನಾಟಕದ ಹೊರಗಿನವರು ಇಲ್ಲಿ ಅಭಿವೃದ್ಧಿಯಾಗುತ್ತಿದ್ದಾರೆ. ಜಿಲ್ಲೆಯ ಎಂಬಿಎ, ಎಂಟೆಕ್, ಪಿಎಚ್‌ಡಿ ಪದವೀಧರರಿಗೆ ಸಣ್ಣ-ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿಕೊಟ್ಟರೆ, ಮುಂದಿನ ದಿನ 10-20 ವರ್ಷಗಳಲ್ಲಿ ನೂರಾರು ಜನರಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕಲಬುರಗಿ ಜಿಲ್ಲೆಗೆ ಬೋಯಿಂಗ್ ಇಂಡಿಯಾ ಸಂಸ್ಥೆಯ 250 ಆಕ್ಸಿಜನ್ ಬೆಡ್ ಆಸ್ಪತ್ರೆ ನಿರ್ಮಾಣ: ಮುರುಗೇಶ್ ನಿರಾಣಿ ಮಾಹಿತಿ

Published On - 11:05 pm, Sat, 29 May 21

ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು