AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟಾಕಿ ಹಚ್ಚಿ ಯುವತಿಯರ ಮೇಲೆ ಎಸೆದ ಪುಡಿರೌಡಿ: ಗಡೀಪಾರು ಮಾಡುವಂತೆ ಸ್ಥಳೀಯರ ಆಗ್ರಹ

ಪಟಾಕಿ ಹಚ್ಚಿ ಯುವತಿಯರ ಮೇಲೆ ಎಸೆದ ಪುಡಿರೌಡಿ: ಗಡೀಪಾರು ಮಾಡುವಂತೆ ಸ್ಥಳೀಯರ ಆಗ್ರಹ

ಬಸವರಾಜ್​ ಯರಗಣವಿ
| Edited By: |

Updated on: Nov 11, 2026 | 8:27 AM

Share

ದೀಪಾವಳಿ 2026ರಂದು ಶಿವಮೊಗ್ಗ ಹೊರವಲಯದ ಹರಿಗೆ ಗ್ರಾಮದಲ್ಲಿ ಪುಡಿರೌಡಿ ನಿರಂಜನ್ ಅಲಿಯಾಸ್ ಶಕೆ ಯುವತಿಯರ ಮೇಲೆ ಪಟಾಕಿ ಎಸೆದಿದ್ದಾನೆ. ಈ ಕೃತ್ಯದಿಂದ ಪಕ್ಕದ ಮನೆಯ ಮಹಿಳೆಗೆ ಗಾಯಗಳಾಗಿವೆ. ಈತನನ್ನು ಗಡಿಪಾರು ಮಾಡುವಂತೆ ಶಿವಮೊಗ್ಗ ಎಸ್‍ಪಿ ಕಚೇರಿ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ರೌಡಿಶೀಟರ್ ಆಗಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಶಿವಮೊಗ್ಗ, ನವೆಂಬರ್ 11: ದೀಪಾವಳಿ ಸಂಭ್ರಮದ ನಡುವೆಯೇ ಶಿವಮೊಗ್ಗ ಹೊರವಲಯದ ಹರಿಗೆ ಗ್ರಾಮದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಪುಡಿರೌಡಿ ನಿರಂಜನ್ ಅಲಿಯಾಸ್ ಶಕೆ ಎಂಬಾತ ಯುವತಿಯರ ಮೇಲೆ ಪಟಾಕಿ ಎಸೆದಿದ್ದಾನೆ. ಅಷ್ಟೇ ಅಲ್ಲದೆ, ರಘು ಎಂಬುವರ ಮನೆಗೆ ರಾಕೆಟ್ ಪಟಾಕಿ ಬಿಟ್ಟಿದ್ದು, ಅದು ತಗುಲಿ ಪಕ್ಕದ ಮನೆಯ ಮಹಿಳೆಗೆ ಗಾಯಗಳಾಗಿವೆ. ಘಟನೆ ಕುರಿತು ಮಾಹಿತಿ ಪಡೆದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ನಿರಂಜನ್ ಯುವತಿಯರ ಮೇಲೆ ಪಟಾಕಿ ಎಸೆದಿದ್ದಲ್ಲದೆ ಅದಕ್ಕೂ ಮುನ್ನ, ಪಟಾಕಿ ಹೊಡೆಯಬೇಡಿ ಎಂದು ಹೇಳಿದವರ ಜತೆ ಗುಂಡಾಗಿರಿ ಪ್ರದರ್ಶಿಸಿದ್ದಾನೆ. ಅಲ್ಲದೆ, ‘‘ನನ್ನನ್ನು ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ, ಮೂರು ದಿನದಲ್ಲಿ ಕೊಲೆ ಮಾಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ನಿರಂಜನ್, ರಿತು ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿ ನಿರಂಜನ್ ಕಳೆದ ನಾಲ್ಕು ವರ್ಷಗಳಿಂದ ರೌಡಿಶೀಟರ್ ಆಗಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಗಡಿಪಾರಾಗಿದ್ದರೂ ಸಹ, ಹರಿಗೆ ಬೀದಿ ಒಳಗೆ ಬಂದು ಯುವತಿಯರ ಮೇಲೆ ಪಟಾಕಿ ಬಿಸಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ದೂರು ಸ್ವೀಕರಿಸದೆ ಎಸ್‍ಪಿ ಕಚೇರಿಗೆ ಹೋಗುವಂತೆ ವಾಪಸ್ ಕಳುಹಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಪುಡಿರೌಡಿ ನಿರಂಜನ್ ಅನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಶಿವಮೊಗ್ಗ ಎಸ್‍ಪಿ ಕಚೇರಿ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಸವರಾಜ್​ ಯರಗಣವಿ
ಬಸವರಾಜ್​ ಯರಗಣವಿ

ಬಸವರಾಜ್ ಯರಗಣವಿಯವರು ಮೂಲತಃ ಧಾರವಾಡ ಜಿಲ್ಲೆಯವರು. ಇವರು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ 2008ರ ಏಪ್ರಿಲ್ ನಿಂದ ವೃತ್ತಿ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವರ್ಷ, ನಂತರ ಹಾವೇರಿ ಜಿಲ್ಲೆಯಲ್ಲಿ 3 ವರ್ಷ ವರದಿಗಾರಿಕೆಯ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ, ಅಪರಾಧ, ಮಹತ್ವದ ಬೆಳವಣಿಗೆ ಹಾಗೂ ಮಾನವೀಯ ಸುದ್ದಿಗಳನ್ನು ವರದಿ ಮಾಡಿರುವ ಅನುಭವವಿದೆ.

Read More