ಕಾವ್ಯಾ ಮಾರನ್ ವಿವಾಹ; ಅದ್ದೂರಿ ಮದುವೆಗೆ ಸೆಲೆಬ್ರಿಟಿಗಳ ದಂಡು
ಪ್ರಸಿದ್ಧ ಸಂಗೀತ ನಿರ್ದೇಶಕ ಅನಿರ್ವಿುತ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ವಿವಾಹವು ಗ್ರೀಸ್‌ನಲ್ಲಿ ಆರಂಭವಾಗಿದೆ. ರಜನಿಕಾಂತ್ ಮತ್ತು ಎಂ.ಕೆ. ಸ್ಟಾಲಿನ್ ಸೇರಿದಂತೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ದಿಗ್ಗಜರು ಈ ಅದ್ಧೂರಿ ಸಮಾರಂಭದಲ್ಲಿ ಭಾಗವಹಿಸಲು ಗ್ರೀಸ್‌ಗೆ ಪ್ರಯಣ ಬೆಳೆಸಿದ್ದು, ಚೆನ್ನೈನಲ್ಲಿ ಭವ್ಯ ಆರತಕ್ಷತೆ ಕೂಡ ಆಯೋಜಿಸಲಾಗಿದೆ.

ಮುಖ್ಯಾಂಶಗಳು
- ಗ್ರೀಸ್ ದೇಶದಲ್ಲಿ ಅನಿರ್ವಿುತ್ ಹಾಗೂ ಕಾವ್ಯಾ ಮಾರನ್ ಅದ್ಧೂರಿ ವಿವಾಹ ಸಂಭ್ರಮ
- ಗ್ರೀಸ್‌ಗೆ ಪಯಣ ಬೆಳೆಸಿದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಎಂ.ಕೆ. ಸ್ಟಾಲಿನ್
- ಚೆನ್ನೈನಲ್ಲಿ ನವೆಂಬರ್ 21ರಂದು ಗಣ್ಯರಿಗಾಗಿ ಭವ್ಯ ಆರತಕ್ಷತೆ ಆಯೋಜನೆ
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮುಖ್ಯಸ್ಥೆ ಕಾವ್ಯಾ ಮಾರನ್ ಅವರ ವಿವಾಹ ಮಹೋತ್ಸವವು ಗ್ರೀಸ್ ದೇಶದಲ್ಲಿ ಅತ್ಯಂತ ವಿಜೃಂಭಣೆಯಿಂದ ಆರಂಭವಾಗಿದೆ. ಸಿನಿಮಾ, ರಾಜಕೀಯ ಹಾಗೂ ಕ್ರಿಕೆಟ್ ಲೋಕದ ದಿಗ್ಗಜರು ಈ ಭವ್ಯ ಮದುವೆಗೆ ಸಾಕ್ಷಿಯಾಗಲು ಗ್ರೀಸ್‌ಗೆ ಪಯಣ ಬೆಳೆಸಿದ್ದಾರೆ.
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮಗಳು ಐಶ್ವರ್ಯಾ ರಜನಿಕಾಂತ್ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ಅವರು ರಜನಿಕಾಂತ್ ಅವರ ಸಹೋದರಿಯ ಮಗನಾಗಿದ್ದು, ಈ ಕುಟುಂಬದ ಮದುವೆಯಲ್ಲಿ ರಜನಿಕಾಂತ್ ಉಪಸ್ಥಿತಿ ವಿಶೇಷ ಗಮನ ಸೆಳೆದಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಕೂಡ ಗ್ರೀಸ್ ಮದುವೆಗಾಗಿ ಚೆನ್ನೈನಿಂದ ಹೊರಟಿದ್ದಾರೆ. ದುಬೈ ಮಾರ್ಗವಾಗಿ ಗ್ರೀಸ್‌ಗೆ ತೆರಳಲಿರುವ ಈ ನಾಯಕರು ಇಂದು (ನವೆಂಬರ್ 11) ಬುಧವಾರ ನಡೆಯಲಿರುವ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಅನಿರುದ್ಧ್-ಕಾವ್ಯಾ ಮಾರನ್ ವಿವಾಹಕ್ಕೆ ವಿಶೇಷ ಥೀಮ್; ವಿವರಿಸಿದ ಡಿಸೈನರ್ ರಂಜಿನಿ
ನವೆಂಬರ್ 10 ಮತ್ತು 11 ರಂದು ಗ್ರೀಸ್‌ನಲ್ಲಿ ಆಪ್ತರು ಹಾಗೂ ಅತಿರಥ ಮಹಾರಥರ ಸಮಕ್ಷಮದಲ್ಲಿ ಈ ಮದುವೆ ನಡೆಯಲಿದೆ. ಇದರ ನಂತರ ನವೆಂಬರ್ 21 ರಂದು ಚೆನ್ನೈನಲ್ಲಿ ಗಣ್ಯರಿಗಾಗಿ ಅತ್ಯಂತ ಭವ್ಯವಾದ ಆರತಕ್ಷತೆ ಸಮಾರಂಭವನ್ನು ಆಯೋಜಿಸಲಾಗಿದೆ.
Maapillai veedu – Thalaivar off to Greece to #Anirudh wedding❤️🔥 https://t.co/J7woyMa0La
— Vikki | #CinemaMeter🎬 (@CinemaMeterOff) November 9, 2026
ಮದುವೆ ಆಮಂತ್ರಣ ಪತ್ರಿಕೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ರಾಜಕೀಯ ನಾಯಕರಿಗೆ ಖುದ್ದಾಗಿ ಆಹ್ವಾನ ನೀಡಲಾಗಿದೆ. ಸಿನಿಮಾದ ಹಾಗೂ ಉದ್ಯಮ ಕ್ಷೇತ್ರದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಚೆನ್ನೈ ಆರತಕ್ಷತೆಯಲ್ಲಿ ಬಹುತೇಕ ಗಣ್ಯರು ಹಾಜರಿ ಹಾಕುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




