ಬೆಂಗಳೂರು: ಕೊರೊನಾ ವಿರುದ್ಧ ಸಮರ ಸಾರಿರುವ ಸರ್ಕಾರ ಕೊರೊನಾ ನಿಯಂತ್ರಣ ಕ್ರಮವಾಗಿ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಸಂಚಾರಕ್ಕೆ ಕಡಿವಾಣ ಹಾಕಿದೆ. ಇದರಿಂದ ರಸ್ತೆಗಳು ಬಿಕೋ ಅನ್ನುತ್ತಿವೆ. ಆದರೂ ಈ ಮಧ್ಯೆ ರಸ್ತೆ ಅಪಘಾತ ಸಂಭವಿಸುತ್ತದೆ ಅಂದ್ರೆ… ಹೊಸಕೋಟೆ ಬಳಿ ಇಂದು ಬೆಳಗ್ಗೆ ಹೀಗೆಯೇ ಆಗಿದೆ.
ಬೈಕ್ ಸವಾರಿ ಮಾಡುತ್ತಿದ್ದ ಯುವಕನ ಕೈ ಕಟ್ ಲಾಕ್ಡೌನ್ ಸಂದರ್ಭದಲ್ಲೂ ರಸ್ತೆ ಅಪಘಾತ ನಿಲ್ತಿಲ್ಲ ಎಂಬುದು ವಿಷಾದದ ಸಂಗತಿಯೇ ಸರಿ. ವಾಹನಗಳ ಓಡಾಟ ಕಡಿಮೆಯಾಗಿದ್ರೂ ಹೊಸಕೋಟೆ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಬೈಕ್ ಹಾಗೂ ತರಕಾರಿ ಸಾಗಿಸುತ್ತಿದ್ದ ಟ್ರಕ್ ಮಧ್ಯೆ ಅಪಘಾತವಾಗಿದೆ. ಬೈಕ್ ಸವಾರನ ಕೈ ಕಟ್ ಆಗಿ, ರಸ್ತೆಗೆ ಬಿದ್ದಿದ್ದಾನೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದೇ ಸಮಾಧಾನದ ಸಂಗತಿ. ವಿಶೇಷ ಸಂಗತಿಯೆಂದರೆ ಹೀಗೆ ಅಪಘಾತವಾದಾಗ ದೇಹದಿಂದ ಬೇರ್ಪಟ್ಟ ದೇಹದ ಭಾಗಗಳನ್ನು ಸಕಾಲಕ್ಕೆ ವೈದ್ಯರಲ್ಲಿ ತೆಗೆದುಕೊಂಡು ಹೋದರೆ ಆ ಅವಯವಗಳ ಮರುಜೋಡಣೆ ಸಾಧ್ಯವಾಗುತ್ತದೆ. ಇದಕ್ಕೆ ಅನೇಕ ಉದಾಹರಣೆಗಳು ಇವೆ. ಈ ಪ್ರಕರಣದಲ್ಲಿಯೂ ಯುವಕನಿಗೆ ಆತನ ಕೈ ಮೊದಲಿನಂತಾಗಲಿ.
(road accident in hoskote during coronavirus lockdown)
ಚಿಕ್ಕಬಳ್ಳಾಪುರ ಸಮೀಪ ಲಾರಿ ಡಿಕ್ಕಿ: ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು