AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗೆ ಬಂದ ಅಪರೂಪದ ಹಾವಿನ ಮರಿ; ನಟ ಮಂಡ್ಯ ರಮೇಶ್​ಗೆ ಶಾಕ್

ಹಾವಿನ ಮರಿಯನ್ನು ಕೈಯಲ್ಲಿ ಹಿಡಿಯುವಂತೆ ಹೇಳಿದಾಗ, ಅದು ಸಾಧ್ಯ ಇಲ್ಲ 5 ಸಾವಿರ ಪ್ರೇಕ್ಷಕರನ್ನು ಬೇಕಾದರೆ ಪಕ್ಕದಲ್ಲಿರಿಸಿಕೊಳ್ಳುತ್ತೇನೆ. ಹಾವು ಮುಟ್ಟುವುದು ಸಾಧ್ಯವೇ ಇಲ್ಲ ಎಂದು ಮಂಡ್ಯ ರಮೇಶ್ ಹೇಳುತ್ತಾರೆ. ಆದರೂ ಪಟ್ಟು ಬಿಡದ ಸೂರ್ಯ ಕೀರ್ತಿ, ಇದು ವಿಷರಹಿತ ಹಾವು ಎಂದು ಧೈರ್ಯ ತುಂಬಿ ಮಂಡ್ಯ ರಮೇಶ್​ಗೆ ನೀಡುತ್ತಾರೆ.

ಮನೆಗೆ ಬಂದ ಅಪರೂಪದ ಹಾವಿನ ಮರಿ; ನಟ ಮಂಡ್ಯ ರಮೇಶ್​ಗೆ ಶಾಕ್
ಅಪರೂಪದ ಹಾವನ್ನು ಕೈಯಲ್ಲಿ ಹಿಡಿದುಕೊಂಡ ನಟ ಮಂಡ್ಯ ರಮೇಶ್
sandhya thejappa
|

Updated on: Jun 01, 2021 | 12:02 PM

Share

ಮೈಸೂರು: ಲಾಕ್​ಡೌನ್​ನಲ್ಲಿ ದಟ್ಟಗಳ್ಳಿ ಮನೆಯಲ್ಲಿದ್ದ ನಟ ಮಂಡ್ಯ ರಮೇಶ್ ಮನೆಗೆ ಅಪರೂಪದ ಹಾವಿನ ಮರಿ ಬಂದಿದ್ದು, ಅದನ್ನು ಕಂಡ ಮಂಡ್ಯ ರಮೇಶ್ ಭಯ ಭೀತರಾಗಿದ್ದರು. ಪುಟಾಣಿ ಹಾವು ಕಂಡ ಅವರು ಪ್ಲಾಸ್ಟಿಕ್ ಡಬ್ಬದಲ್ಲಿ ಮುಚ್ಚಿಟ್ಟಿದ್ದರು. ಉರುಗ ಸಂರಕ್ಷಕ ಸೂರ್ಯ ಕೀರ್ತಿಯಿಂದ ಹಾವಿನ ಮರಿ ಸಂರಕ್ಷಣೆ ಮಾಡಲಾಯಿತು. ತೋಳದ ಜಾತಿಯ ವಿಷರಹಿತ ಹಾವಿನ ಮರಿಯನ್ನು ಕಂಡ ಮಂಡ್ಯ ರಮೇಶ್​ಗೆ ಕೈಯಲ್ಲಿ ಹಿಡಿಯುವಂತೆ ಸೂರ್ಯ ಕೀರ್ತಿ ಮನವಿ ಮಾಡಿದರು.

ಹಾವಿನ ಮರಿಯನ್ನು ಕೈಯಲ್ಲಿ ಹಿಡಿಯುವಂತೆ ಹೇಳಿದಾಗ, ಅದು ಸಾಧ್ಯ ಇಲ್ಲ 5 ಸಾವಿರ ಪ್ರೇಕ್ಷಕರನ್ನು ಬೇಕಾದರೆ ಪಕ್ಕದಲ್ಲಿರಿಸಿಕೊಳ್ಳುತ್ತೇನೆ. ಹಾವು ಮುಟ್ಟುವುದು ಸಾಧ್ಯವೇ ಇಲ್ಲ ಎಂದು ಮಂಡ್ಯ ರಮೇಶ್ ಹೇಳುತ್ತಾರೆ. ಆದರೂ ಪಟ್ಟು ಬಿಡದ ಸೂರ್ಯ ಕೀರ್ತಿ, ಇದು ವಿಷರಹಿತ ಹಾವು ಎಂದು ಧೈರ್ಯ ತುಂಬಿ ಮಂಡ್ಯ ರಮೇಶ್​ಗೆ ನೀಡುತ್ತಾರೆ. ನಡುಗುವ ಕೈಯಲ್ಲಿ ನಟ ಸ್ವಲ್ಪ ಹೊತ್ತು ಹಾವಿನ ಮರಿಯನ್ನು ಅಂಗೈನಲ್ಲಿ ಇಟ್ಟುಕೊಂಡಿದ್ದರು.

ಚಿರತೆ ಹಿಡಿಯಲು ಹರಸಾಹಸ ಬಾಗಲಕೋಟೆ: ಜಮಖಂಡಿ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ಬಳಿ ಮೇ 27ರಂದು ನಾಯಿಯನ್ನು ಕೊಂದು ತಿಂದಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಚಿರತೆ ಮೇ 27ರಂದು ನಾಯಿಯನ್ನು ಕೊಂದು ತಿಂದಿತ್ತು. ಚಿರತೆ ಹಿಡಿಯಲು ಕಳೆದ ಐದು ದಿನಗಳಿಂದ ಹರಸಾಹಸ ಪಡುತ್ತಿದ್ದಾರೆ. ಓಡಾಡುತ್ತಿದ್ದರೂ ಇರಿಸಿದ ಬೋನಿಗೆ ಚಿರತೆ ಬೀಳುತ್ತಿಲ್ಲ. ಚಿರತೆ ಚಲನವಲನ ಬಗ್ಗೆ ಮಾಹಿತಿ ತಿಳಿಯಲು ಸುಮಾರು 13 ಕ್ಯಾಮರಾವನ್ನು ಅಳವಡಿಸಲಾಗಿದೆ.

ಮಹಿಳೆಯ ಮೇಲೆ ಚಿರತೆ ದಾಳಿ ಚಿತ್ರದುರ್ಗ: ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕುರುಬರಹಳ್ಳಿ ನಡೆದಿದೆ. ಗಾಯಾಳು ಲಕ್ಷ್ಮೀಬಾಯಿಯನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಸುತ್ತಮುತ್ತಲ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ

ಲಾಕ್​ಡೌನ್​ ಕಾರಣ ಸೈಕಲ್​ ಏರಿ ಮಗಳೊಂದಿಗೆ 1,200 ಕಿ.ಮೀ ಪ್ರಯಾಣಿಸಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

ಗೆಳತಿಯ ನಿಶ್ಚಿತಾರ್ಥದ ಉಂಗುರಕ್ಕಾಗಿ ದೇಶಾದ್ಯಂತ ತಿರುಗಿ, ಸ್ವತಃ ಗಣಿಗಾರಿಕೆ ನಡೆಸಿ ವಜ್ರ ಹುಡುಕಿ ತಂದ ಲಿಡೆನ್​! ಯಾರೀತ?

(A rare snake has come home to actor Mandya Ramesh in mysuru)