AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ಬೆಳಗಾವಿ ರೈತರಿಗೆ ಲಾಠಿ ಏಟು

ಬಂದ ರೈತರು ರೈತ ಸಂಪರ್ಕ ಕೇಂದ್ರದ ಮುಂದೆ ಅರ್ಧ ಕಿಲೋಮೀಟರ್ ನಷ್ಟು ಸಾಲುಗಟ್ಟಿ ನಿಂತಿದ್ದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಿನ್ನೆಲೆ ರೈತರನ್ನ ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.

ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ಬೆಳಗಾವಿ ರೈತರಿಗೆ ಲಾಠಿ ಏಟು
ಬಿತ್ತನೆ ಬೀಜಕ್ಕಾಗಿ ಸಾಲಾಗಿ ನಿಂತ ರೈತರು
sandhya thejappa
|

Updated on: Jun 01, 2021 | 1:35 PM

Share

ಬೆಳಗಾವಿ: ದೈಹಿಕ ಅಂತರ ಮರೆತು ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರಿಗೆ ಪೊಲೀಸರು ಲಾಠಿ ಬೀಸಿದ್ದಾರೆ. ಈ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ. ಮುಂಗಾರು ಹಂಗಾಮಿನ ಬಿತ್ತನೆ ಬೀಜ ಖರೀದಿಗಾಗಿ ರೈತರ ಪರದಾಟ ಪಡುತ್ತಿದ್ದರು. ಕೃಷಿ ಇಲಾಖೆಯ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ಹೊರಹಾಕಿದ್ದರು. ರೋಶಿ, ಜೈನಾಪುರ್, ಮಜಲತ್ತಿ, ಮುಗಳಿ, ಕಾಜಗೌಡನಹಟ್ಟಿ, ಹತ್ತರವಾಡಿ ಸೇರಿದಂತೆ ಎಂಟು ಗ್ರಾಮದ ರೈತರು ಬಿತ್ತನೆ ಬೀಜಕ್ಕಾಗಿ ಬಂದಿದ್ದರು. ಬಂದ ರೈತರು ರೈತ ಸಂಪರ್ಕ ಕೇಂದ್ರದ ಮುಂದೆ ಅರ್ಧ ಕಿಲೋಮೀಟರ್ ನಷ್ಟು ಸಾಲುಗಟ್ಟಿ ನಿಂತಿದ್ದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಿನ್ನೆಲೆ ರೈತರನ್ನ ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.

ರೈತನಿಂದ ಧರಣಿ ಮೈಸೂರು: ರಾಗಿ ಖರೀದಿಸಿ 3 ತಿಂಗಳಾದರೂ ಹಣ ನೀಡದ ಹಿನ್ನೆಲೆ ತಾಲೂಕು ಕಚೇರಿ ಮುಂದೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ರೈತನಿಂದ ಪ್ರತಿಭಟನೆ ನಡೆಯಿತು. ರೈತ ಶ್ರೀನಿವಾಸ್ ಎಂಬ ರೈತ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರದ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿಸಲಾಗಿತ್ತು. ರಾಗಿ ಖರೀದಿ ಮಾಡಿ 3 ತಿಂಗಳಾದರೂ ಹಣ ನೀಡದ ಹಿನ್ನೆಲೆ ರೈತ ಪ್ರತಿಭಟನೆ ಮಾಡಿದ್ದಾರೆ.

ಬೆಂಬಲ ಬೆಲೆಯಲ್ಲಿ ಸರ್ಕಾರ 1.96 ಕ್ವಿಂಟಾಲ್ ರಾಗಿ ಖರೀದಿ ಮಾಡಿತ್ತು. ಲಾಕ್​ಡೌನ್​ ಕಾಲದಲ್ಲಿ ಸಂಕಷ್ಟ ಅನುಭವಿಸುವಂತಾಗಿದೆ. ತಂಬಾಕು ಹಾಗೂ ಶುಂಠಿ ಬೆಳೆ ಬೆಳೆಯಲು ಕಷ್ಟವಾಗಿದೆ. ಆದಷ್ಟು ಬೇಗ ನಮ್ಮ ಹಣ ನೀಡಿ ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ಹೂವು ಬೆಳೆಗಾರ ಕಂಗಾಲು ಹಾವೇರಿ: ಸುಗಂಧಿ ಹೂವು ಬೆಳೆದು ಮಾರಾಟ ಆಗದೆ ಹಾಗೆ ಉಳಿದಿದ್ದಕ್ಕೆ ರೈತ ಕಂಗಲಾಗಿದ್ದಾನೆ. ಜಿಲ್ಲೆ ಶಿಗ್ಗಾಂವಿ ತಾಲೂಕಿನ ಚಂದಾಪುರ ಗ್ರಾಮದ ಶಿವಾನಂದ ಗುಡ್ಡಣ್ಣವರ ಎಂಬುವವರು ಕಂಗಾಲಾದ ರೈತ. ಒಂದು ಎರಕೆ ಜಮೀನಿನಲ್ಲಿ ಎಂಬತ್ತು ಸಾವಿರ ರುಪಾಯಿ ಖರ್ಚು ಮಾಡಿ ಸುಗಂಧಿ ಹೂವು ಬೆಳೆದಿದ್ದರು. ಮದುವೆ ಮತ್ತಿತರೆ ಕಾರ್ಯಕ್ರಮಗಳು ಬಂದ್ ಆಗಿದ್ದಕ್ಕೆ ಮಾರಾಟ ಆಗದೆ ಜಮೀನಿನಲ್ಲೇ ಹೂವು ಬಾಡಿ ಹೋಗುತ್ತಿದೆ.

ಇದನ್ನೂ ಓದಿ

World Milk Day 2021 ಕೊರೊನಾ ಸಮಯದಲ್ಲಿ ಇಮ್ಮ್ಯುನಿಟಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಹಾಲಿನ ಮೂರು ಬೆಸ್ಟ್ ಉತ್ಪನ್ನ

ಲಾಕ್​ಡೌನ್​ ಕಾರಣ ಸೈಕಲ್​ ಏರಿ ಮಗಳೊಂದಿಗೆ 1,200 ಕಿ.ಮೀ ಪ್ರಯಾಣಿಸಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

(Belagavi police lati charge on farmers who que for sowing seeds)