ಶಿವಾಜಿನಗರ: ಕೋಟ್ಯಂತರ ರೂ ಖರ್ಚು ಮಾಡಿ ಕಟ್ಟಿದ್ಧ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೀಗ

| Updated By: ಆಯೇಷಾ ಬಾನು

Updated on: Jan 21, 2024 | 6:55 AM

ಕೋವಿಡ್ ಟೈಮ್​ನಲ್ಲಿ ಶಿವಾಜಿನಗರದಲ್ಲಿ ಸುಸಜ್ಜಿತವಾದ ನಾಲ್ಕು ಮಹಡಿಗಳ ಕಟ್ಟಡ ಸೌಲಭ್ಯದ ಚರಕ ಆಸ್ಪತ್ರೆಯನ್ನ ಸರ್ಕಾರ ನಿಮಾರ್ಣ ಮಾಡಿತ್ತು. ಆದರೆ ಕೊವಿಡ್ ಬಳಿಕ ಈ ಆಸ್ಪತ್ರೆ ಈಗ ಮೂಲೆಗುಂಪಾಗಿದೆ. ಸದ್ಯ ಈ ಚರಕ ಆಸ್ಪತ್ರೆಯಲ್ಲಿ ಹೈಟೆಕ್ ತಂತ್ರಜ್ಞಾನದ ಸೌಲಭ್ಯವಿದ್ರೂ ಪ್ರಯೋಜನವಿಲ್ಲದಂತಾಗಿದೆ.

ಶಿವಾಜಿನಗರ: ಕೋಟ್ಯಂತರ ರೂ ಖರ್ಚು ಮಾಡಿ ಕಟ್ಟಿದ್ಧ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೀಗ
ಚರಕ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
Follow us on

ಬೆಂಗಳೂರು, ಜ.21: ಕೋವಿಡ್ ಟೈಮ್​ನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ತಲೆ ಎತ್ತಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಕೋವಿಡ್ (Covid 19) ಬಳಿಕ ಈಗ ಒಂದೊಂದೆ ನೆಲ ಕಚ್ಚುತ್ತಿವೆ. ಸಿಲಿಕಾನ್ ಸಿಟಿಯಲ್ಲಿನ ಹೈಟೆಕ್ ಸರ್ಕಾರಿ ಆಸ್ಪತ್ರೆ ಮೂಲೆಗುಂಪು ಸೇರುತ್ತಿದ್ದು ಬೆಂಗಳೂರಿನಲ್ಲಿ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು (Charaka Super Speciality Hospital) ಇದ್ರೂ ನೋ ಯೂಸ್ ಎನ್ನುವಂತಾಗಿದೆ. ನಿತ್ಯ ಸಾವಿರಾರು ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಲಕ್ಷ ಲಕ್ಷ ಖರ್ಚು ಮಾಡಿ ಪರದಾಡುತ್ತಿದ್ದರೂ ಸರ್ಕಾರದ ದಿವ್ಯ ನಿರ್ಲಕ್ಷ್ಯ ಕಂಡು ಬರ್ತಿದೆ.

ಕೋವಿಡ್ ಟೈಮ್​ನಲ್ಲಿ ಶಿವಾಜಿನಗರದಲ್ಲಿ ಸುಸಜ್ಜಿತವಾದ ನಾಲ್ಕು ಮಹಡಿಗಳ ಕಟ್ಟಡ ಸೌಲಭ್ಯದ ಚರಕ ಆಸ್ಪತ್ರೆಯನ್ನ ಸರ್ಕಾರ ನಿಮಾರ್ಣ ಮಾಡಿತ್ತು. ಆದರೆ ಕೊವಿಡ್ ಬಳಿಕ ಈ ಆಸ್ಪತ್ರೆ ಈಗ ಮೂಲೆಗುಂಪಾಗಿದೆ. ಸದ್ಯ ಈ ಚರಕ ಆಸ್ಪತ್ರೆಯಲ್ಲಿ ಹೈಟೆಕ್ ತಂತ್ರಜ್ಞಾನದ ಸೌಲಭ್ಯವಿದ್ರೂ ಪ್ರಯೋಜನವಿಲ್ಲದಂತಾಗಿದೆ. ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಈ ಆಸ್ಪತ್ರೆ ಎರಡು ವರ್ಷದಿಂದ ನಿರುಪಯುಕ್ತವಾಗಿದೆ. ಸದ್ಯ ಈ ಆಸ್ಪತ್ರೆಯಲ್ಲಿ ತಲಾ ಇಬ್ಬರು ಶುಶ್ರೂಷಕರು, ಗ್ರೂಪ್ ಡಿ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ರು. ಆದರೆ ಕಳೆದ ಎರಡು ದಿನದಿಂದ ಈ ಸೇವಗೂ ಬ್ರೇಕ್ ಬಿದಿದ್ದು ಸಂಪೂರ್ಣವಾಗಿ ಬೀಗ ಹಾಕಿ ಆಸ್ಪತ್ರೆ ಕ್ಲೋಸ್ ಮಾಡಲಾಗಿದೆ.

ಇದನ್ನೂ ಓದಿ: ಕೋಲಾರ: ಮಾಧವ ಗುರ್ಜೇನಹಳ್ಳಿಯಲ್ಲಿ ಬಾಲ್ಯ ವಿವಾಹಕ್ಕೆ ಸಿದ್ಧತೆ: ಅರಶಿನ ಶಾಸ್ತ್ರದ ವೇಳೆ ಅಧಿಕಾರಿಗಳಿಂದ ದಾಳಿ

ಚರಕ ಆಸ್ಪತ್ರೆಯ ಕಟ್ಟಡ ತಲೆಯೆತ್ತಿ ನಾಲ್ಕು ವರ್ಷವಾದರೂ ಅಗತ್ಯವಿರುವ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯ ನೇಮಕಾತಿಯನ್ನ ಸರ್ಕಾರ ಮಾಡಿಲ್ಲ. ಇದರಿಂದ ಇಲ್ಲಿ ಹೈಟೆಕ್ ಸೌಲಭ್ಯ ಇದ್ರು ವೈದ್ಯಕೀಯ ಸೇವೆ ದೊರೆಯದಂತಾಗಿದೆ. ಚಿಕಿತ್ಸೆಗೆ ವೈದ್ಯರು ಹಾಗೂ ಶುಶ್ರೂಷಕರಿಲ್ಲ. ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳಿದ್ದರೂ ಅದರ ನಿರ್ವಹಣೆಗೆ ತಂತ್ರಜ್ಞರಿಲ್ಲದೆ ಚಿಕಿತ್ಸಾ ಸೌಲಭ್ಯವಿಲ್ಲದಾಗಿದೆ. ಕೊವಿಡ್ ಸಮಯದಲ್ಲಿ ಕೆಲ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿತ್ತು. ಕೋವಿಡ್ ಬಳಿಕ ಇಲ್ಲಿ ಒಳರೋಗಿಗಳ ವೈದ್ಯಕೀಯ ಸೇವೆ ಸ್ಥಗಿತಗೊಂಡಿದ್ದು ನಿರುಪಯುಕ್ತವಾಗಿದೆ. ಕಳೆದ ಎರಡು ದಿನದಿಂದ ಎಲ್ಲ ಸೇವೆಗಳನ್ನ ಬಂದ್ ಮಾಡಿರುವ ಸರ್ಕಾರ ರೋಗಿಗಳಿಗೆ ಬೌರಿಂಗ್ ಆಸ್ಪತ್ರೆ ಲೇಡಿ ಕರ್ಜನ್ ಆಸ್ಪತ್ರೆಗೆ ಹೋಗುವಂತೆ ಆಸ್ಪತ್ರೆಯ ಮುಂದೆ ಬೋರ್ಡ್ ಹಾಕಿ ಬೀಗ ಹಾಕಿ ಲಾಕ್ ಮಾಡಿದೆ.

ಚರಕ ಆಸ್ಪತ್ರೆಯನ್ನ ಕಾರ್ಡಿಯಾಲಾಜಿ, ನ್ಯೂರಾಲಜಿಸ್ಟ್‌, ಗ್ಯಾಸ್ಟ್ರೋಲಜಿ, ಯುರಾಲಜಿ ವಿಭಾಗದ ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡಲು ನಿರ್ಮಾಣ ಮಾಡಲಾಗಿತ್ತು. ಆದರೆ, ಇದಕ್ಕೆ ತಜ್ಞ ವೈದ್ಯರ ತಂಡವೇ ಇಲ್ಲ. ಸದ್ಯ ಬಡ ಜನರು ಸಿಟಿಯಲ್ಲಿ ಸೂಪರ್ ಸ್ಪೆಸಾಲಿಟಿ ಸರ್ಕಾರಿ ಆಸ್ಪತ್ರೆಗಳ ಕೊರತೆಯಿಂದ ಖಾಸಗಿ ಆಸ್ಪತ್ರೆಗಳ ಮೊರೆ ಹೋಗ್ತಾ ಇದ್ದಾರೆ. ಆದರೆ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸಿದೆ. ಇನ್ನು ಈ ಬಗ್ಗೆ ಉನ್ನತ್ತ ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್ ಕೇಳಿದ್ರೆ ಕ್ಯಾಬಿನೇಟ್ ಅನುಮತಿ ಪಡೆದಿದ್ದೇನೆ ಶೀಘ್ರದಲ್ಲಿಯೇ ಸರಿ ಮಾಡ್ತೀವಿ ಎಂದು ತಿಳಿಸಿದ್ದಾರೆ.

ಒಟ್ನಲ್ಲಿ ಸರ್ಕಾರ ಕೋವಿಡ್ ಟೈಮ್ನಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ಹೊಸ ಕಟ್ಟಡ ನಿರ್ಮಿಸಿ ಭೂತ ಬಂಗಲೆಯಾಗಿಸುವ ಬದಲಾಗಿ, ಈಗಾಗಲೇ ನಿರ್ಮಾಣವಾಗಿ ಕಾರ್ಯಾಚರಣೆ ಮಾಡದ ಆಸ್ಪತ್ರೆಗಳನ್ನು ಪ್ರಾರಂಭಿಸುವತ್ತ ಸರ್ಕಾರ ಚಿಂತನೆ ಮಾಡಬೇಕಾಗಿದೆ. ಬಡ ಜನರಿಗೆ ಅನಕೂಲ ಮಾಡುವತ್ತ ಗಮನ ಹರಿಸಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ