ಬೆಂಗಳೂರಿನಲ್ಲಿ ರಾಮೋತ್ಸವ: ಬೀದಿ, ಬೀದಿಗಳಲ್ಲಿ ರಾರಾಜಿಸುತ್ತಿವೆ ಶ್ರೀ ರಾಮನ ಬೃಹತ್ ಕಟ್ ಔಟ್
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕೌಂಡ್ ಡೌನ್ ಶುರುವಾಗಿದೆ. ದೇಶದ ಎಲ್ಲೆಡೆ ಸಂಭ್ರಮ ಜೋರಾಗಿದೆ. ಈ ನಡುವೆ ಸಿಲಿಕಾನ್ ಸಿಟಿಯಲ್ಲಿಯೂ ಸಂಭ್ರಮ ಹೆಚ್ಚಾಗಿದ್ದು ಸಿಟಿಯ ಪ್ರಮುಖ ಜಂಕ್ಷನ್ ಗಳಲ್ಲಿ ಬೃಹತ್ ರಾಮನ ಕಟೌಟ್ ತಲೆ ಎತ್ತುತ್ತಿವೆ. ಸಿಟಿಯಲ್ಲಿಯೂ ರಾಮೋತ್ಸವ ಶುರುವಾಗಿದೆ.
ಬೆಂಗಳೂರು, ಜ.21: ಅಯೋಧ್ಯೆಯಲ್ಲಿ ಜನವರಿ 22ರಂದು ಪ್ರಭು ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆಯಾಗ್ತೀದೆ (Ayodhya Ram Mandir). ಈ ದಿನದ ಸಂಭ್ರಮಕ್ಕೆ ದೇಶವೇ ಹಬ್ಬದಂತೆ ಸಿದ್ಧವಾಗಿದೆ. ಕೋಟ್ಯಾಂತರ ಹಿಂದೂಗಳು ಈ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದರಂತೇ ಸಿಲಿಕಾನ್ ಸಿಟಿಯಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಜನವರಿ 22ರಂದು ರಾಮಮೂರ್ತಿ ಪ್ರಾಣಪ್ರತಿಷ್ಠಾಪನೆ ಹಿನ್ನಲೆ ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆ, ಜಂಕ್ಷನ್ಗಳಲ್ಲಿ ರಾಮನ (Lord Rama) ಬೃಹತ್ ಕಟೌಟ್, ಪ್ಲೆಕ್ಸ್ ಹಾಕಲಾಗ್ತಿದ್ದು ಬೆಂಗಳೂರಿನಲ್ಲಿಯೂ ಸಂಭ್ರಮ ಶುರುವಾಗಿದೆ.
ಕೋಟ್ಯಾಂತರ ಭಾರತೀಯರ ಕನಸ್ಸು ಪ್ರಭು ಶ್ರೀರಾಮ ಮಂದಿರ ನಿರ್ಮಾಣ. ಇದಕ್ಕೆ ಈಗ ಕಾಲ ಕೂಡಿ ಬಂದಿದೆ. ಜನವರಿ 22 ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಾಗುವ ದಿನ. ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠಯಾಗುವ ಶುಭ ಗಳಿಗೆ. ಅದರಲ್ಲೂ ಅಂದು ಬಾಲ ರಾಮನ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ದಿನದ ಸಂಭ್ರಮ ದೇಶಾದ್ಯಂತ ಹಿಂದೂಗಳಲ್ಲಿ ಈಗಾಗಲೇ ಮನೆ ಮಾಡಿದೆ. ಮನೆಮನೆಗೆ ಅಯೋಧ್ಯೆಯಿಂದ ಈಗಾಗಲೇ ಅಕ್ಷತೆ ಬಂದು ತಲುಪುತ್ತಿದೆ. ಇನ್ನು ಕೆಲವರು ಅಂದು ರಾಮ ಭಜನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದಾರೆ, ಮತ್ತೆ ಕೆಲವರು ಆ ದಿನ ರಾಜ ಜ್ಯೋತಿ ಬೆಳಗಿ ದೀಪಾವಳಿಯಾಗಿ ವಿಶೇಷವಾಗಿಸಬೇಕೆಂದುಕೊಂಡಿದ್ದಾರೆ. ಹಲವು ದೇವಸ್ಥಾನಗಳಲ್ಲಿ ಅನ್ನಪ್ರಸಾದಕ್ಕೆ ಪ್ಲಾನ್ ಮಾಡಲಾಗಿದೆ.
ಇದನ್ನೂ ಓದಿ: Ram Mandir Construction: ಸುಪ್ರೀಂ ತೀರ್ಪಿನ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತೆಗೆದುಕೊಂಡ ಸಮಯವೆಷ್ಟು?
ಸಿಲಿಕಾನ್ ಸಿಟಿಯಲ್ಲಿ ರಾಮ ಮಂದಿರ ಉದ್ಘಾಟನೆ ಸಂಭ್ರಮಕ್ಕೆ ಕೌಂಟ್ ಡೌನ್ ಶುರುವಾಗಿದ್ರೆ. ಈಗಾಗಲೇ ಸಿಟಿಯಲ್ಲಿ ರಾಮ ಮಂದಿರ ಉದ್ಘಾಟನೆಯ ಪ್ಲೆಕ್ಸ್ ಹಾಕಲಾಗಿದ್ದು. ಪ್ರತಿಯೊಂದು ರಸ್ತೆಯ ಜಂಕ್ಷನ್ ಹಾಗೂ ಮನೆಗಳ ಮುಂದೆಯೂ ಕಟೌಟ್ ಹಾಕಲಾಗಿದೆ. ರಾಮಮಂದಿರ ಉದ್ಘಾಟನೆ ಮಹತ್ವ ಪಡೆದುಕೊಂಡಿದೆ.
ಒಟ್ನಲ್ಲಿ ಜನವರಿ 22ರಂದು ಐತಿಹಾಸಿಕ ದಿನಕ್ಕೆ ಭಾರತ ಸಾಕ್ಷಿಯಾಗ್ತೀದೆ. ದೇಶದಲ್ಲಿಯೇ ರಾಮಮೂರ್ತಿ ಪ್ರತಿಷ್ಠಾಪನೆಗೆ ಹಾಗು ರಾಮಮಂದಿರ ಉದ್ಘಾಟನೆ ದೊಡ್ಡಮಟ್ಟದಲ್ಲಿ ಸಂಭ್ರಮಿಸಲಾಗುತ್ತಿದೆ. ಸದ್ಯ ಇದಕ್ಕೆ ಸಾಕ್ಷಿ ಸಂಭ್ರಮ ಎಂಬಂತೆ ಸಿಟಿಯಲ್ಲಿ ಬೃಹತ್ ಕಟ್ ಔಟ್, ಪ್ಲೆಕ್ಸ್ ಗಳನ್ನ ಸಿಲಿಕಾನ್ ಸಿಟಿ ಪ್ರಮುಖ ರಸ್ತೆಗಳಲ್ಲಿ ಹಾಕಲಾಗಿದೆ. ಬೃಹತ್ ಪ್ರಭು ಶ್ರೀರಾಮನ ಪ್ಲೆಕ್ಸ್ ಹಾಕಲಾಗ್ತಿದೆ ಇದರ ನಡುವೆ ಖಾಸಗಿ ಶಾಲೆಗಳು ರಾಮಮಂದಿರ ಉದ್ಘಾಟನೆಯನ್ನ ಲೈವ್ ಸ್ಟ್ರೀಮಿಂಗ್ ಮಾಡಲು ಮುಂದಾಗಿರುವುದು ಮತಷ್ಟು ಸಂಭ್ರಮಕ್ಕೆ ಕಾರಣವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ