ರಾಮ ಮಂದಿರಕ್ಕೆ ಸಾವಿರ ವರ್ಷ ಆಯಸ್ಸು, ಮಂದಿರ ನಿರ್ಮಾಣದ ಕಲ್ಲು ಪರೀಕ್ಷಿಸಿದ್ದು ಕೋಲಾರದ ವಿಜ್ಞಾನಿಗಳು

ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿರುವ NIRMನ ಹಿರಿಯ ವಿಜ್ಞಾನಿ, ಪ್ರಿನ್ಸಿಪಲ್ ಸೈಂಟಿಸ್ಟ್ ಡಾ.ರಾಜನ್ ಬಾಬು ಅವರು ರಾಮ ಮಂದಿರ ನಿರ್ಮಾಣದ ಪ್ರತಿ ಹಂತದಲ್ಲೂ ಭಾಗಿಯಾಗಿದ್ದಾರೆ. ದೇವಾಲಯದ ಅಡಿಗಲ್ಲಿನಿಂದ ಹಿಡಿದು ದೇವಾಲಯದ ವಿನ್ಯಾಸಕ್ಕೆ ಬಳಸಲಾಗಿರುವ ಕಲ್ಲು, ನೆಲಹಾಸಿಗೆ ಬಳಸಲಾಗಿರುವ ಕಲ್ಲು, ಅಷ್ಟೇ ಯಾಕೆ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಲಾಗಿರುವ ಕಲ್ಲನ್ನು ಸಹ ಇವರೇ ಪರೀಕ್ಷಿಸಿ ಅಂತಿಮಗೊಳಿಸಿದ್ದು.

ರಾಮ ಮಂದಿರಕ್ಕೆ ಸಾವಿರ ವರ್ಷ ಆಯಸ್ಸು, ಮಂದಿರ ನಿರ್ಮಾಣದ ಕಲ್ಲು ಪರೀಕ್ಷಿಸಿದ್ದು ಕೋಲಾರದ ವಿಜ್ಞಾನಿಗಳು
ಡಾ.ರಾಜನ್ ಬಾಬು
Follow us
| Updated By: ಆಯೇಷಾ ಬಾನು

Updated on: Jan 21, 2024 | 8:22 AM

ಕೋಲಾರ, ಜ.21: ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿಯಾದರೆ ರಾಮಲಲ್ಲಾನ ವಿಗ್ರಹ ಕೆತ್ತನೆಗೆ ಯಾವ ಕಲ್ಲನ್ನು ಬಳಸಬೇಕು, ಯಾವ ಗುಣಮಟ್ಟದ ಕಲ್ಲನ್ನು ಬಳಸಬೇಕು, ಮಂದಿರವನ್ನು (Ayodhya Ram Mandir) ಹೇಗೆ ನಿರ್ಮಾಣ ಮಾಡಬೇಕು ಅನ್ನೋದನ್ನು ಅಂತಿಮಗೊಳಿಸಿದ್ದು ಚಿನ್ನದ ನಾಡು ಕೋಲಾರದ NIRMನ ವಿಜ್ಞಾನಿಗಳು. ಈ ಮೂಲಕ ದೇಶದ ಹೆಮ್ಮೆಯ ಪ್ರತೀಕವಾಗಿರುವ ರಾಮಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರ (Kolar) ಬಹುದೊಡ್ಡ ಕೊಡುಗೆಯನ್ನೇ ನೀಡಿದೆ.

ಸದ್ಯ ಈಗಂತೂ ದೇಶದಾದ್ಯಂತ ಎಲ್ಲಿ ನೋಡಿದ್ರು ಈಗ ಅಯೋಧ್ಯೆ ಶ್ರೀರಾಮನದ್ದೇ ಸುದ್ದಿ. ಈನಿಟ್ಟಿನಲ್ಲಿ ಆಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರ ಬಹುಮುಖ್ಯ ಪಾತ್ರ ವಹಿಸುವ ಮೂಲಕ ಕೋಲಾರ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಮತ್ತೊಂದು ಹೆಗ್ಗಳಿಕೆಯ ಗರಿ ಮುಡಿಗೇರಿಸಿಕೊಂಡಿದೆ. ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿರುವ NIRMನ ಹಿರಿಯ ವಿಜ್ಞಾನಿ, ಪ್ರಿನ್ಸಿಪಲ್ ಸೈಂಟಿಸ್ಟ್ ಡಾ.ರಾಜನ್ ಬಾಬು ಅವರು ರಾಮ ಮಂದಿರ ನಿರ್ಮಾಣದ ಪ್ರತಿ ಹಂತದಲ್ಲೂ ಭಾಗಿಯಾಗಿದ್ದಾರೆ. ದೇವಾಲಯದ ಅಡಿಗಲ್ಲಿನಿಂದ ಹಿಡಿದು ದೇವಾಲಯದ ವಿನ್ಯಾಸಕ್ಕೆ ಬಳಸಲಾಗಿರುವ ಕಲ್ಲು, ನೆಲಹಾಸಿಗೆ ಬಳಸಲಾಗಿರುವ ಕಲ್ಲು, ಅಷ್ಟೇ ಯಾಕೆ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಲಾಗಿರುವ ಕಲ್ಲನ್ನು ಸಹ ಇವರೇ ಪರೀಕ್ಷಿಸಿ ಅಂತಿಮಗೊಳಿಸದ ನಂತರವಷ್ಟೇ ಕಲ್ಲುಗಳನ್ನು ಬಳಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಶ್ರೀರಾಮ ಮಂದಿರದ ಅಡಿಪಾಯಕ್ಕೆ ಕರ್ನಾಟಕದ ಚಿಕ್ಕಬಳ್ಳಾಪುರ, ಸಾದರಹಳ್ಳಿ, ದೇವನಹಳ್ಳಿ, ಆಂಧ್ರದ ವರಾಂಗಲ್​, ಮತ್ತು ತೆಲಂಗಾಣದ ಕರೀಂ ನಗರದ ಕಲ್ಲುಗಳನ್ನು ಬಳಕೆ ಮಾಡಲಾಗಿದೆ.

ನೆಲಹಾಸಿಗೆ ರಾಜಸ್ಥಾನದ ಮಕ್ರಾನಾ ಮಾರ್ಬಲ್​ ಕಲ್ಲುಗಳನ್ನು ಬಳಸಲಾಗಿದೆ. ಇನ್ನು ದೇವಾಲಯದ ಗೋಡೆ ಹಾಗೂ ವಿನ್ಯಾಸಕ್ಕಾಗಿ ಬಯಾನದ ಸ್ಯಾಂಡ್ ಸ್ಟೋನ್ ಗಳನ್ನು ಬಳಕೆ ಮಾಡಲಾಗಿದೆ. ರಾಮಲಲ್ಲಾನ ವಿಗ್ರಹ ಕೆತ್ತನೆಗಾಗಿ ಮೈಸೂರಿನ ಹೆಗ್ಗಡದೇವನಕೋಟೆಯ ಕರಿಯ ಶಿಲೆಯ ಕಲ್ಲನ್ನು ಬಳಕೆ ಮಾಡಲಾಗಿದೆ. ಇನ್ನು ದೇವಾಲಯದ ನಿರ್ಮಾಣಕ್ಕಾಗಿ ಗುಣಮಟ್ಟದ ಕಲ್ಲನ್ನು ಹೊರತುಪಡಿಸಿ ಇನ್ಯಾವುದೇ ವಸ್ತುಗಳನ್ನು ಬಳಕೆ ಮಾಡಿಲ್ಲ ಅನ್ನೋದು ವಿಶೇಷ. ಇಡೀ ದೇವಾಲಯವನ್ನು ಕಲ್ಲಿನಿಂದ ಕಲ್ಲಿಗೆ ಇಂಟರ್​ ಲಾಕಿಂಗ್ ಸಿಸ್ಟಂ ಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ. ಹಾಗಾಗಿ ದೇವಾಲಯಕ್ಕೆ ಒಂದು ಸಾವಿರ ವರ್ಷ ಆಯಸ್ಸು ಇರುತ್ತದೆ. ಈ ದೇವಾಲಯಕ್ಕೆ ಸಿಡಿಲು, ಗುಡುಗು, ಮಳೆ ಹಾಗೂ ಭೂಕಂಪನವಾದರೂ ದೇವಾಲಯಕ್ಕೆ ಯಾವುದೇ ಹಾನಿಯಾಗದಂತೆ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂದು ಹಿರಿಯ ವಿಜ್ಞಾನಿ ರಾಜನ್​ ಬಾಬು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ರಾಮೋತ್ಸವ: ಬೀದಿ, ಬೀದಿಗಳಲ್ಲಿ ರಾರಾಜಿಸುತ್ತಿವೆ ಶ್ರೀ ರಾಮನ ಬೃಹತ್ ಕಟ್ ಔಟ್

ಇನ್ನು ರಾಜನ್​ ಬಾಬು ಅವರು ರಾಮಮಂದಿರದ ನಿರ್ಮಾಣಕ್ಕೂ ಮೊದಲಿನಿಂದಲೂ ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಮಂದಿರ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ತೆಗೆಯುವುದರಿಂದ ಹಿಡಿದು, ಬೇರೆ ಬೇರೆ ರಾಜ್ಯಗಳಲ್ಲಿನ ಕ್ವಾರಿಗಳಲ್ಲಿ ಹೋಗಿ ಕಲ್ಲುಗಳ ಗುಣಮಟ್ಟ ಪರೀಕ್ಷಿಸಿದ ಆಯ್ಕೆ ಮಾಡುವವರೆಗೂ ಪ್ರತಿ ಹಂತದಲ್ಲೂ ಕೆಲಸ ಮಾಡಿದ್ದಾರೆ. ಮೊದಲು ಕ್ವಾರಿಯಲ್ಲಿ ಕಲ್ಲಿನ ಮಾದರಿಯನ್ನು ತಂದು ಇದೇ ಕೆಜಿಎಫ್​ನಲ್ಲಿರುವ NIRMನ ಲ್ಯಾಬ್​ ನಲ್ಲಿ ಪರೀಕ್ಷೆ ನಡೆಸಿ ನಂತರ ಅದು ಗುಣಮಟ್ಟದ ಕಲ್ಲು ಅನ್ನೋದು ಅಂತಿಮಗೊಳಿಸುತ್ತಿದ್ದರು. ಕೇವಲ ಒಂದು ರಾಜ್ಯದಲ್ಲಿ ಮಾತ್ರ ಕಲ್ಲುಗಳನ್ನು ಆಯ್ಕೆ ಮಾಡಿಲ್ಲ, ಮಂದಿರದ ಒಂದೊಂದು ಭಾಗಕ್ಕೆ ಒಂದೊಂದು ರೀತಿಯ ಕಲ್ಲುಗಳನ್ನು ಬಳಕೆ ಮಾಡಲಾಗಿದೆ. ಈ ಮೂಲಕ ಮಂದಿರಕ್ಕೆ ಇಡೀ ದೇಶದ ಪ್ರಮುಖ ತಂತ್ರಜ್ಞರ, ಎಂಜಿನಿಯರ್​ಗಳ, ಹಾಗೂ ಹತ್ತಾರು ವಿಭಿನ್ನ ಶಿಲ್ಪಿಗಳ ಎಲ್ಲರ ಬುದ್ದಿಶಕ್ತಿಯನ್ನು ಒಂದೆಡೆ ಕಲೆಹಾಕಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ದೇಶದ ಹೆಮ್ಮೆಯ ಪ್ರತೀಕ ಅಂಥಾದೊಂದು ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇ ರೋಚಕ, ಇದು ನನ್ನ ಜೀವನದ ಮರೆಯಲಾಗದ ಅನುಭವ, ಈ ಕೆಲಸ ನನಗೆ ಆತ್ಮತೃಪ್ತಿ ನೀಡಿದೆ ಅನ್ನೋದು ವಿಜ್ಞಾನಿ ರಾಜನ್​ ಬಾಬು ಅವರ ವೈಯಕ್ತಿಕ ಅಭಿಪ್ರಾಯ.

ಇನ್ನು ಇವರ ಸೇವೆಯನ್ನ ಮೆಚ್ಚಿ ಕೇಂದ್ರದ ಗಣಿ ಮತ್ತೂ ಭೂ ವಿಜ್ಞಾನ ಇಲಾಖೆ ಕೂಡ ಶ್ಲಾಘನೆ ವ್ಯಕ್ತಪಡಿಸಿದೆ. ರಾಮ ಜನ್ಮ ಭುಮಿ ಟ್ರಸ್ಟ್ ಅಧ್ಯಕ್ಷರು ಸೇರಿದಂತೆ ಎಲ್ಲರೂ ಸಹ ಸಹಕಾರ ನೀಡಿದ್ರು. ಹಾಗಾಗಿ ನಾವು ಸಹ ರಾಮನ ಸೇವೆ ಮಾಡಿದ್ದು ಖುಷಿ ಕೊಟ್ಟಿದೆ‌ ಎಂದು ಹಿರಿಯ ವಿಜ್ಞಾನಿ ರಾಜನ್ ಬಾಬು ತಿಳಿಸಿದರು.

ಒಟ್ಟಾರೆ ಎಲ್ಲಿಯ ಉತ್ತರದ ಅಯೋಧ್ಯೆ ಎಲ್ಲಿಯ ದಕ್ಷಿಣದ ಚಿನ್ನದ ನಾಡು ಕೆಜಿಎಫ್, ಎತ್ತಣಿಂದೆತ್ತ ಸಂಬಂಧವಯ್ಯ ಎನ್ನುವಂತೆ ನಿಜಕ್ಕೂ ದೇಶದ ಹೆಮ್ಮೆಯ ಪ್ರತೀಕವಾಗಿರುವ ಹಿಂದುಗಳ ಭಕ್ತಿ ಭಾವನೆಗಳ ಕೇಂದ್ರವಾಗಿರುವ ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರದ ವಿಜ್ಞಾನಿಗಳ ಕೊಡುಗೆ ನೀಡಲು ಅವಕಾಶ ಸಿಕ್ಕಿದ್ದೇ ಜಿಲ್ಲೆಗೆ ಹೆಮ್ಮೆಯ ವಿಚಾರ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಯಾರೂ ಉಳಿಯಲ್ಲ’; ತೊಡೆ ತಟ್ಟಿದ ಉಗ್ರಂ ಮಂಜು
‘ಯಾರೂ ಉಳಿಯಲ್ಲ’; ತೊಡೆ ತಟ್ಟಿದ ಉಗ್ರಂ ಮಂಜು
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ