Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್ ಸಮಯದ ಸ್ಟೀರಾಯ್ಡ್ ಬಳಕೆಯಿಂದ ಯುವ ಜನರಲ್ಲಿ ಹೆಚ್ಚಾಯ್ತು ಹೊಸ ಸಮಸ್ಯೆ

ಇತ್ತೀಚಿಗೆ ಯುವ ಸಮೂಹ ಸೊಂಟ ನೋವು, ಮೊಣಕಾಲು ನೋವು ಅಂತ ಆಸ್ಪತ್ರೆಯತ್ತ ಮುಖ ಮಾಡುತ್ತಿರುವುದು ಹೆಚ್ಚಾಗಿದೆ. ಇದಕ್ಕೆ, ಕೋವಿಡ್ ಸಮಯದಲ್ಲಿ ತೆಗೆದುಕೊಂಡ ಅತಿಯಾದ ಸ್ಟೀರಾಯ್ಡ್ ಕಾರಣ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಹಾಗಾದರೆ ಸಮಸ್ಯೆಯಿಂದ ಬಳಲುತ್ತಿರುವವರು ಏನು ಮಾಡಬೇಕು? ವೈದ್ಯರು ನೀಡಿದ ಎಚ್ಚರಿಕೆ ಏನು? ಇಲ್ಲಿದೆ ಮಾಹಿತಿ.

ಕೋವಿಡ್ ಸಮಯದ ಸ್ಟೀರಾಯ್ಡ್ ಬಳಕೆಯಿಂದ ಯುವ ಜನರಲ್ಲಿ ಹೆಚ್ಚಾಯ್ತು ಹೊಸ ಸಮಸ್ಯೆ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: Ganapathi Sharma

Updated on: Jan 20, 2025 | 7:49 AM

ಬೆಂಗಳೂರು, ಜನವರಿ 20: ಕೊರೊನಾ ವೈರಸ್ ಹೆಸರು ಕೇಳಿದರೆ ಈಗಲೂ ಜನ ಆತಂಕಕ್ಕೊಳಗಾಗುತ್ತಾರೆ. ಅಷ್ಟರ ಮಟ್ಟಿಗೆ ಜನರ ಜೀವನದ ಮೇಲೆ ಪರಿಣಾಮ ಬೀರಿದ್ದ ಕೋವಿಡ್ ಪರಿಣಾಮ ಈಗಲೂ ಯುವ ಸಮೂಹದ ಮೇಲೆ ಕಂಡುಬರುತ್ತಿದೆ. ಯುವ ಜನರಲ್ಲಿ ಮೊಣಕಾಲು ಸೆಳೆತ, ಸ್ಪೈನ್ ಸವೆಯುವುದಕ್ಕೆ ಕೋವಿಡ್ ಕೂಡ ಪರೋಕ್ಷ ಕಾರಣವಾಗಿದೆ. ಕೊರೊನಾ ಸಮಯದಲ್ಲಿ ಚಿಕಿತ್ಸೆಗಾಗಿ ತೆಗೆದುಕೊಂಡ ಅತಿಯಾದ ಸ್ಟೀರಾಯ್ಡ್​​ನಿಂದ ಯುವಕರಲ್ಲಿ ಕೂಡ ಇದೀಗ ಸೊಂಟ ನೋವು, ಮಂಡಿ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಬಹಿರಂಗವಾಗಿದೆ.

ಕೋವಿಡ್ ಸೋಂಕಿನ ಸಂದರ್ಭದಲ್ಲಿ ಜೀವ ಉಳಿಸಲು, ವೈರಸ್ ವಿರುದ್ಧ ಹೋರಾಡಲು ಅತಿಯಾದ ಪ್ರಮಾಣದಲ್ಲಿ ಸ್ಟೀರಾಯ್ಡ್ ಬಳಕೆ ಮಾಡಲಾಗಿತ್ತು. ಇದೇ ಅದುವೇ ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಕಳೆದ ಕೆಲವು ದಿನಗಳಿಂದ ಯುವಕರಲ್ಲಿ ಹಾಗೂ ವಯೋವೃದ್ಧರಲ್ಲಿ ಮೊಣಕಾಲು ನೋವು ಸೇರಿದಂತೆ ಕಾಲು ನೋವು, ಸೊಂಟ ನೋವು, ಬೆನ್ನು ನೋವು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಕೊವಿಡ್ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಯುವಕರಲ್ಲಿಯೂ ಮೊಣಕಾಲು, ಸೊಂಟ ನೋವು ಹೆಚ್ಚಾಗುತ್ತಿದೆ. ಅತಿಯಾದ ಸ್ಟೀರಾಯ್ಡ್ ಬಳಕೆಯೇ ಇದಕ್ಕೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ಕಾಲು, ಸೊಂಟ, ಬೆನ್ನು ನೋವಿದ್ದರೆ ನಿರ್ಲಕ್ಷ್ಯ ಬೇಡ: ವೈದ್ಯರ ಎಚ್ಚರಿಕೆ

ಕೊವಿಡ್ ಸಮಯದಲ್ಲಿ ಜೀವ ಉಳಿಸಲು ಸಹಾಯ ಮಾಡಿದ್ದ ಸ್ಟೀರಾಯ್ಡ್ ಈಗ ಜನರ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತಿದೆ. ಅತಿಯಾದ ಸ್ಟೀರಾಯ್ಡ್ ಬಳಕೆಯಿಂದಾಗಿ ಕಾಲು, ಸೊಂಟ ಹಾಗೂ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಯುವಕರು ಕಾಲು, ಸೊಂಟ, ಬೆನ್ನು ನೋವುಗಳ ನಿರ್ಲಕ್ಷ್ಯ ಮಾಡದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಅತಿಯಾದ ಸ್ಟೀರಾಯ್ಡ್ ಬಳಕೆ ಅಡ್ಡಪರಿಣಾಮಗಳೇನು?

ವಯಸ್ಸಾದವರಲ್ಲಾದರೆ ಮಂಡಿ ನೋವು, ಸೊಂಟ ನೋವು ಸಾಮಾನ್ಯ. ಆದರೆ ಈಗ 25ರ ಯುವಕ, ಯುವತಿಯರು ಕೂಡ ಸೊಂಟ ನೋವು, ಮಂಡಿ ನೋವು ಎಂದು ಆಸ್ಪತ್ರೆ ಮೆಟ್ಟಿಲೇರುತ್ತಿದ್ದಾರೆ. ವೈದ್ಯರು ಇದರ ಕಾರಣ ಹುಡುಕಿ ಹೊರಟಾಗ ಅತಿಯಾದ ಸ್ಟೀರಾಯ್ಡ್ ಕಾರಣ ಎಂಬುದು ಪತ್ತೆಯಾಗಿದೆ. ಅತಿಯಾದ ಸ್ಟೀರಾಯ್ಡ್ ಸೇವನೆ ಯುವಕರಲ್ಲಿ ಕಾರ್ಟಿಲೇಜ್ ನಷ್ಟಕ್ಕೆ ಕಾರಣವಾಗ್ತಿದೆ. ಅಲ್ಲದೇ ಸಂಧಿವಾತಕ್ಕೆ ಎಡೆ ಮಾಡಿಕೊಡ್ತಿದೆ. ದೇಹದ ಮೂಳೆ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ದುರ್ಬಲಗೊಳಿಸಿದೆ. ಸ್ಟೀರಾಯ್ಡ್ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡ ಕಾರಣ ದೇಹದ ಮೂಳೆ ಬಲ ಕುಸಿದಿದೆ. ಇದರಿಂದ ಸೊಂಟ, ಮಂಡಿ ನೋವುಗಳು ಕಾಣಿಸಿಕೊಳ್ತಿದೆ. ವಿಕ್ಟೋರಿಯಾ ಆಸ್ಪತ್ರೆಯ ಆರ್ಥೋಪೆಡಿಕ್ ವಿಭಾಗಕ್ಕೆ ವೃದ್ಧರಷ್ಟೇ ಸಂಖ್ಯೆಯಲ್ಲಿ ಸದ್ಯ ಯುವ ಸಮೂಹ ಕೂಡ ಚಿಕಿತ್ಸೆಗಾಗಿ ಬರುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಬಗ್ಗೆ ಬೆಂಗಳೂರು ಮೆಡಿಕಲ್ ಕಾಲೇಜು ಡೀನ್ ಡಾ. ರಮೇಶ್ ಕೃಷ್ಣ ಕೂಡ ಮಾಹಿತಿ ನೀಡಿದ್ದಾರೆ. ಅತಿಯಾದ ಸ್ಟೀರಾಯ್ಡ್ ಬಳಕೆಯ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ನೀಡಿರುವ ಅವರು, ಎಚ್ಚರ ಅಗತ್ಯ ಎಂದಿದ್ದಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ಯೂರಿಕ್ ಆಸಿಡ್ ಕಮ್ಮಿ ಮಾಡುವ ಪಾನೀಯಗಳು

ಕುಳಿತುಕೊಳ್ಳಲು ಕಷ್ಟ ಆಗುವುದು, ಮೆಟ್ಟಿಲು ಇಳಿಯಲು ಕಷ್ಟಪಡುವುದು, ನಡೆಯುವಾಗ ವಿಪರೀತ ನೋವು ಇತ್ಯಾದಿಗಳನ್ನು ನಿರ್ಲಕ್ಷ್ಯ ಮಾಡಬಾರದು. ಮೊದಲ ಹಂತದಲ್ಲಿ ಔಷಧಿ ಮೂಲಕ ನೋವು ಶಮನ ಮಾಡಬಹುದು. ನಿರ್ಲಕ್ಷ್ಯ ಮಾಡಿದರೆ ನಂತರ ಹಿಪ್ ರೀಪ್ಲೇಸ್ಮೆಂಟ್, ಅಥವಾ ಮಂಡಿಚಿಪ್ಪು ರಿಪ್ಲೇಸ್​​ಮೆಂಟ್ ಸರ್ಜರಿಗೆ ಒಳಪಡಬೇಕಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು
ರೆಡ್ ಕಾರ್ಪೆಟ್ ರೀ ಲಾಂಚ್​ಗೆ ಸ್ಟೈಲ್​ ಆಗಿ ಎಂಟ್ರಿ ಕೊಟ್ಟ ಪವಿತ್ರಾ ಗೌಡ
ರೆಡ್ ಕಾರ್ಪೆಟ್ ರೀ ಲಾಂಚ್​ಗೆ ಸ್ಟೈಲ್​ ಆಗಿ ಎಂಟ್ರಿ ಕೊಟ್ಟ ಪವಿತ್ರಾ ಗೌಡ
ವಿದ್ಯಾರ್ಥಿಗಳಿಗೆ ಅನುಕೂಲವಾಗದ ನಮ್ಮ ಮೆಟ್ರೊ ಟಿಕೆಟ್ ದರ ಪರಿಷ್ಕರಣೆ
ವಿದ್ಯಾರ್ಥಿಗಳಿಗೆ ಅನುಕೂಲವಾಗದ ನಮ್ಮ ಮೆಟ್ರೊ ಟಿಕೆಟ್ ದರ ಪರಿಷ್ಕರಣೆ
ಮದುವೆಗೆ ಟೆಂಪಲ್-ಗೋಲ್ಡ್​ ಥೀಮ್; ಹೀಗಿರುತ್ತೆ ಡಾಲಿ ಧನಂಜಯ್ ವಿವಾಹ
ಮದುವೆಗೆ ಟೆಂಪಲ್-ಗೋಲ್ಡ್​ ಥೀಮ್; ಹೀಗಿರುತ್ತೆ ಡಾಲಿ ಧನಂಜಯ್ ವಿವಾಹ
ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಚಲಿಸಿದ ಡೀಸೆಲ್ ಟ್ಯಾಂಕರ್!
ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಚಲಿಸಿದ ಡೀಸೆಲ್ ಟ್ಯಾಂಕರ್!