ಕೋಲಾರದಲ್ಲಿ ಸಂಸದ ಮುನಿಸ್ವಾಮಿ ಕಾರಿನ ಮುಂಭಾಗ ನಿಂತು ಜನ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ! ಏನು ವಿಶೇಷ?
ಕೋಲಾರದಲ್ಲಿ ಅಯೋಧ್ಯೆ ಶ್ರೀರಾಮನ ಸ್ಟಿಕ್ಕರ್ ಕಟ್ಟಿಂಗ್ ಮಾಡಲಾಗಿರುವ ಕಾರ್ನ ಮುಂಭಾಗ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಕಾರಿನ ಮೇಲೆ ನನ್ನ ಆರಾಧ್ಯ ದೈವ ರಾಮನ ಚಿತ್ರ ಹಾಕಿಸಿಕೊಂಡಿದ್ದೇನೆ. ಇದು ನನ್ನ ಖುಷಿ, ಯಾರೂ ಏನೂ ಮಾಡುವಂತಿಲ್ಲ - ಸಂಸದ ಮುನಿಸ್ವಾಮಿ
ಸದ್ಯ ಈಗಂತೂ ಎಲ್ಲಿ ನೋಡಿದರೂ ರಾಮನದ್ದೇ ಜಪ, ಎಲ್ಲರೂ ಕೂಡಾ ರಾಮನ ಹೆಸರಲ್ಲಿ ವಿಭಿನ್ನವಾಗಿ ಏನಾದರೂ ಮಾಡಿ ಗಮನ ಸೆಳೆಯುವ ಕೆಲಸ ಮಾಡಲಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಕೋಲಾರದಲ್ಲಿ ಸಂಸದ ಮುನಿಸ್ವಾಮಿ ಅವರು ತಮ್ಮ ಕಾರಿಗೆ ಅಯೋಧ್ಯೆ ಶ್ರೀರಾಮ ಮಂದಿರ ಹಾಗೂ ಅಯೋಧ್ಯೆ ಶ್ರೀರಾಮನ ಚಿತ್ರಗಳಿರುವ ಸ್ಟಿಕ್ಕರ್ ಕಟ್ಟಿಂಗ್ ಮಾಡಿಸುವ ಮೂಲಕ ತಮ್ಮ ಫಾರ್ಚೂನರ್ ಕಾರ್ನ್ನು ಆಕರ್ಷಕವಾಗಿಸಿದ್ದಾರೆ.
ತಮ್ಮ ಕಾರ್ ಮೇಲೆ ಅಯೋಧ್ಯೆ ಶ್ರೀರಾಮ ಮಂದಿರದ ಚಿತ್ರವಿರುವ ಸ್ಟಿಕ್ಕರ್ ಹಾಗೂ ಅಯೋಧ್ಯೆ ರಾಮನ ಚಿತ್ರವಿರುವ ಸ್ಟಿಕ್ಕರ್ ಕಟ್ಟಿಂಗ್ ಮಾಡಿಸಿದ್ದಾರೆ. ಇನ್ನು ಕಾರಿನ ಹಿಂಭಾಗದಲ್ಲಿ ನರೇಂದ್ರ ಮೋದಿ ಹಾಗೂ ರಾಮಲಲ್ಲಾರ ಚಿತ್ರವನ್ನು ಬಿಡಿಸಲಾಗಿದೆ. ಸದ್ಯ ಕೋಲಾರದಲ್ಲಿ ಸಂಸದ ಮುನಿಸ್ವಾಮಿ ಅವರ ಕಾರು ಎಲ್ಲರಿಗೂ ಆಕರ್ಷಣೆಯಾಗಿದೆ.
ಹಾಗಾಗಿ ಅಯೋಧ್ಯೆ ಶ್ರೀರಾಮನ ಸ್ಟಿಕ್ಕರ್ ಕಟ್ಟಿಂಗ್ ಮಾಡಲಾಗಿರುವ ಕಾರ್ನ ಮುಂಭಾಗ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಈ ಬಗ್ಗೆ ಮಾತನಾಡಿರುವ ಕೋಲಾರ ಸಂಸದ ಕೋಲಾರದಲ್ಲಿ ಶ್ರೀರಾಮನ ಫ್ಲೆಕ್ಸ್ ಬ್ಯಾನರ್ಗಳನ್ನು ಹಾಕಲು ನಿರ್ಬಂಧ ಮಾಡಿದ್ದಾರೆ. ಹಾಗಾಗಿ ನನ್ನ ಕಾರಿನ ಮೇಲೆ ನಾನು ನನ್ನ ಆರಾಧ್ಯ ದೈವ ರಾಮನ ಚಿತ್ರವನ್ನು ಹಾಕಿಸಿಕೊಂಡಿದ್ದೇನೆ. ಇದು ನನ್ನ ಖುಷಿ ಯಾರೂ ಏನೂ ಮಾಡುವಂತಿಲ್ಲ ಎಂದರು.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ