ಪತಿ ಸೈಕೋ ವರ್ತನೆ ಆರೋಪ ಕೇಸ್​​ಗೆ ಭರ್ಜರಿ ಟ್ವಿಸ್ಟ್​: ಮಹಿಳೆಯಾಗಿದ್ದು ಮೂರು ಮದುವೆ?

ಪತಿ ಸೈಕೋನಂತೆ ವರ್ತಿಸ್ತಾನೆಂದು ಪತ್ನಿ ಆರೋಪಿಸಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪತಿ ಮಂಜುನಾಥ್, ತನ್ನ ವಿರುದ್ಧ ಆರೋಪ ಮಾಡಿರುವ ಪತ್ನಿ ಮೇಘಶ್ರೀಗೆ ಈಗಾಗಲೇ ಮೂರು ಮದುವೆಗಳಾಗಿವೆ ಎಂದು  ಪ್ರತ್ಯಾರೋಪಿಸಿದ್ದಾರೆ. ಹಣ ಮತ್ತು ಚಿನ್ನಾಭರಣಕ್ಕಾಗಿ ಮದುವೆ ನಾಟಕವಾಡುತ್ತಿದ್ದಾಳೆಂದೂ ಆಪಾದಿಸಿದ್ದಾರೆ. ಬೆಂಗಳೂರಿನ ಈ ಕೌಟುಂಬಿಕ ಕಲಹ ಪ್ರಕರಣ ಇದೀಗ ಮತ್ತಷ್ಟು ಕುತೂಹಲ ಕೆರಳಿಸಿದೆ.

ಪತಿ ಸೈಕೋ ವರ್ತನೆ ಆರೋಪ ಕೇಸ್​​ಗೆ ಭರ್ಜರಿ ಟ್ವಿಸ್ಟ್​: ಮಹಿಳೆಯಾಗಿದ್ದು ಮೂರು ಮದುವೆ?
ಆರೋಪಿತ ಮಹಿಳೆ ಮೇಘಶ್ರೀ
Edited By:

Updated on: Jan 11, 2026 | 10:46 AM

ಬೆಂಗಳೂರು, ಜನವರಿ 11: ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುವ ಜೊತೆಗೆ ಮನೆಯಲ್ಲಿ ಎಲ್ಲರ ಮುಂದೆಯೇ ಬೆತ್ತಲೆಯಾಗಿ ಪತಿ ಓಡಾಡ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡೋದಲ್ಲದೆ, ಹಾಗೆಯೇ ಪ್ಯಾಸೇಜ್​​ಗೆ ಕೂಡ ಹೋಗಿ ಅಕ್ಕ ಪಕ್ಕದವರಿಗೂ ಮುಜುಗರ ಉಂಟುಮಾಡ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದ ಪ್ರಕರಣಕ್ಕೀಗ ಹೊಸ ಟ್ವಿಸ್ಟ್​​ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಆರೋಪಿ ಪತಿ ಮಂಜುನಾಥ್​ ಹೆಂಡತಿ ವಿರುದ್ಧವೇ ಬಿಗ್​​ ಬಾಂಬ್​​ ಸಿಡಿಸಿದ್ದಾರೆ.

ತನ್ನ ಮೇಲೆ ಸೈಕೋ ವರ್ತನೆ ಮಾಡಿರುವ ಪತ್ನಿ ವಿರುದ್ಧವೇ ಪತಿ ಮಂಜುನಾಥ್​ ಗಂಭೀರ ಆರೋಪ ಮಾಡಿದ್ದು, ಹಲವು ಮದುವೆಗಳು ಅವಳಿಗಾಗಿವೆ. ಈಗ ನಾಲ್ಕನೇ ಗಂಡ ಬೇಕಂತೆ. ಶೋಕಿಗೆ ಗಂಡಂದಿರ ಹಣ ಬಳಸಿಕೊಂಡು ಹೀಗೆ ಮಾಡ್ತಿದ್ದಾಳೆ ಎಂದು ದೂರಿದ್ದಾರೆ. ಎರಡನೇ ಗಂಡನ ಜೊತೆ ಜಾಲಿ ಟ್ರಿಪ್​​, ಶೋಕಿಗೆ ಗಂಡನ ಹಣ ಚಿನ್ನಾಭರಣ ಬಳಸಿಕೊಂಡಿದ್ದಳು. ಆ ಬಳಿಕ ಮೂರನೇಯವನಾಗಿ ನನಗೆ ಖೆಡ್ಡಾ ತೋಡಿದ್ದಳು. 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್​​ಗಳನ್ನು ತನ್ನಿಂದ ಪಡೆದಿರೋದಾಗಿ ದೂರುದಾರೆ ಮೇಘಶ್ರೀ ವಿರುದ್ಧವೇ ಮಂಜುನಾಥ್​​ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆತ್ತಲೆ ಓಡಾಟ, ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ; ಸೈಕೋ ಪತಿ ಕಾಟಕ್ಕೆ ಪತ್ನಿ ಕಂಗಾಲು

ಮೊದಲ ಹಾಗೂ ಎರಡನೇ ಗಂಡನ ವಿರುದ್ಧ ಮೇಘಶ್ರೀ ಈಗಾಗಲೇ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಆರೋಪಿಸಿರುವ ಮಂಜುನಾಥ್​​ ತನ್ನ ವಿರುದ್ಧ ಕಂಪ್ಲೇಂಟ್​​ ದಾಖಲಾಗುತ್ತಿದ್ದಂತೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಆರೋಪಿಸಿ ಆಕೆ ತನ್ನ ವಿರುದ್ಧ ದೂರು ನೀಡಿದ್ದಾಳೆ. ಆಕೆಗೆ 12 ಲಕ್ಷ ಹಣ ನೀಡಿ ಆಕೆಗೆ ಮನೆ ಲೀಸ್​​ಗೆ ಕೊಡಿಸಿದ್ದೆ. ಅವಳ ಅಸಲಿ ಮುಖವಾಡವನ್ನ ಪೊಲೀಸರ ಮುಂದೆ ಬಯಲು ಮಾಡ್ತೀನಿ ಎಂದು ಮಂಜುನಾಥ್​​ ಹೇಳಿದ್ದಾರೆ.

ಮದುವೆಗೆ ಅಂತಾ ದಾಖಲಾತಿ ಕೇಳಿದಾಗ ಆಕೆ ನೀಡಿಲ್ಲ. ಮನೆಯಲ್ಲಿ ಬಟ್ಟೆ ಬದಲಿಸುವಾಗ ಕದ್ದು ಫೋಟೋ ತೆಗೆದಿದ್ದಾಳೆ. ಆಕೆ ಕೆಲಸಕ್ಕೆ ಸೇರಿರೋದು ಕೂಡ ಫೇಕ್​​ ದಾಖಲೆಗಳನ್ನು ನೀಡಿ. ಅಲ್ಲದೆ ರೌಡಿಶೀಟರ್ ಓರ್ವನಿಂದ ತನಗೆ ಧಮ್ಕಿ ಕೂಡ ಹಾಕಿಸಿದ್ದಾಳೆ ಎಂದು ಆರೋಪಿಸಿ ಮಂಜುನಾಥ್​​ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.