ಬೆಂಗಳೂರಿಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಆಗಮನ ಹಿನ್ನೆಲೆ; ರಾಘವೇಂದ್ರ ಸ್ವಾಮಿ ಮಠಕ್ಕೆ ಸಿಎಂ ಭೇಟಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 07, 2022 | 4:23 PM

ಏ.10ರಿಂದ ಶ್ರೀರಾಮ್ ರಥಯಾತ್ರೆ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಾದ್ಯಾಂತ 10 ಸಾವಿರ ಜನ ಭಾಗವಹಿಸಲಿದ್ದಾರೆ.

ಬೆಂಗಳೂರಿಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಆಗಮನ ಹಿನ್ನೆಲೆ; ರಾಘವೇಂದ್ರ ಸ್ವಾಮಿ ಮಠಕ್ಕೆ ಸಿಎಂ ಭೇಟಿ
ಸಿಎಂ ಬಸವರಾಜ ಬೊಮ್ಮಾಯಿ, ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು, ಸಚಿವ ಆರ್. ಅಶೋಕ್,
Follow us on

ಬೆಂಗಳೂರು: ಜಯನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swami Math) ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದರು. ಬೆಂಗಳೂರಿಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಆಗಮನ ಹಿನ್ನೆಲೆ ಸಿಎಂ ಭೇಟಿ ನೀಡಿದ್ದು, ರಾಘವೇಂದ್ರನ ಸ್ವಾಮಿ ದರ್ಶನ ಪಡೆದುಕೊಂಡರು. ರಾಘವೇಂದ್ರ ಸ್ವಾಮಿಗೆ ಆರತಿ ಬೆಳಗಿದರು. ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಭೇಟಿ ಮಾಡಿ, ಶ್ರೀಗಳಿಗೆ ಹಾರ ಹಾಕಿ ಸನ್ಮಾನಿಸಿದರು. ಇದೇ ವೇಳೆ ಮಾತನಾಡಿದ ಸುಭುದೇಂದ್ರ ತೀರ್ಥ ಶ್ರೀಗಳು, ಮಂತ್ರಲಾಯದ ರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಮುಖ್ಯಮಂತ್ರಿಗಳು ಬರಬೇಕು. ಮುಖ್ಯಮಂತ್ರಿಗಳು ನಮ್ಮ ಹಾವೇರಿ ಜಿಲ್ಲೆಯವರು. ಉತ್ತಮ ಸೇವೆ ಸಲ್ಲಿಸುತ್ತಾ ಕಾಮನ್ ಸಿಎಂ ಆಗಿದ್ದಾರೆ ಎಂದು ಸಿಎಂ ಬೊಮ್ಮಾಯಿಯನ್ನ ಗುಣಗಾನ ಮಾಡಿದರು. ಯಾವುದೇ ಕಾರ್ಯಕ್ರಮ ಮಾಡಿದ್ರೆ ಸಕಾರಾತ್ಮಕವಾಗಿರುತ್ತೆ. ಧಾರ್ಮಿಕ ಸಂಘಟನೆ, ಆರೋಗ್ಯದ ಬಗ್ಗೆ ಮಾತಾಡಿದ್ದೇವೆ. ಮಂತ್ರಾಲಯದಲ್ಲಿ ನಮ್ಮ ಕರ್ನಾಟಕದ ಛತ್ರ ಇದೆ. ಅನ್ನದಾಸೋಹಕ್ಕೆ 5 ಕೋಟಿ ರೂ. ದೇಣಿಗೆ ಕೇಳಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಘೋಷಿಸಿದ್ದಾರೆ.

ಈಗ ಮುಖ್ಯವಾಗಿ ಕೋಮುಸೌಹಾರ್ದತೆ ನೆಲೆಗೊಳ್ಳಬೇಕು. ಕರ್ನಾಟಕ ಶಾಂತಿಯ ತೋಟ, ಇಲ್ಲಿಂದಲೇ ಶುರುವಾಗಲಿ. ಹಿಂದೂಗಳ ಜೊತೆಗೆ ಎಲ್ಲರಿಗೂ ಈ ದೇಶ ಅವಕಾಶ ಕೊಟ್ಟಿದೆ. ಮನುಕುಲ ಉಳಿಯಬೇಕು, ಅದಕ್ಕೆ ನಮ್ಮ ಮೊದಲ ಆದ್ಯತೆ. ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕು ಎಂದು ಬೆಂಗಳೂರಿನಲ್ಲಿ ಸುಭುದೇಂದ್ರ ಶ್ರೀ ಹೇಳಿಕೆ ನೀಡಿದ್ದಾರೆ. ಸಚಿವ ವಿ.ಸೋಮಣ್ಣ ಮತ್ತು ಸಚಿವ ಆರ್. ಅಶೋಕ್ ಸಾಥ್ ಸಿಎಂಗೆ ಸಾಥ್ ನೀಡಿದರು. ಏ.10ರಿಂದ ಶ್ರೀರಾಮ್ ರಥಯಾತ್ರೆ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಾದ್ಯಾಂತ 10 ಸಾವಿರ ಜನ ಭಾಗವಹಿಸಲಿದ್ದಾರೆ. ಏ.10ರಿಂದ ಪದ್ಮನಾಭನಗರದಿಂದ ರಥಯಾತ್ರೆ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಮೊದಲ ಬಾರಿ ಪ್ರಾರಂಭ ಮಾಡಲಾಗುತ್ತಿದ್ದು, ಇವತ್ತು ರಥ ಬರುತ್ತದೆ. ಎಲ್ಲಾ ಧರ್ಮದವರು ವ್ಯಾಪಾರ ಮಾಡಬಹುದು. ರಾಮನನ್ನು ಪ್ರೀತಿಸುವವರು ಎಲ್ಲರೂ ಭಾಗವಹಿಸಬಹುದು ಎಂದು ಹೇಳಿದ್ದಾರೆ.


ಇದನ್ನೂ ಓದಿ:

World Health Day ಕೆಂಪು ಕೋಟೆಯಲ್ಲಿ ಯೋಗ ಉತ್ಸವ; ಲೋಕಸಭೆ ಸ್ಪೀಕರ್, ಕೇಂದ್ರ ಸಚಿವರು ಭಾಗಿ

Uttara Kannada: ಹಾದಿಯೇ ತೋರಿದ ಹಾದಿ: ಹೆರಿಗೆ ಮಾಡಿಸಿದಾಗ 15 ರೂಪಾಯಿ ಕೊಡಲೂ ಹಿಂದೇಟು ಹಾಕುವವರಿದ್ದಾರೆ

Published On - 2:55 pm, Thu, 7 April 22