ಗೃಹ ಸಚಿವರ ಹೇಳಿಕೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ; ‘ತೀರ್ಥಹಳ್ಳಿ ಕ್ಷೇತ್ರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಳಂಕ’ ಎಂದ ಕಿಮ್ಮನೆ ರತ್ನಾಕರ್
ಕಾಂಗ್ರೆಸ್ ಭವನದಲ್ಲಿ ಗೃಹ ಸಚಿವ ಅರಗ ಜ್ಙಾನೇಂದ್ರ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಮೊಹಮ್ಮದ್ ಹ್ಯಾರಿಸ್ ನಲಪಾಡ್ ನೇತೃತ್ವದಲ್ಲಿ ಕಾಂಗ್ರೆಸ್ ಭವನದಿಂದ ಫ್ರೀಡಂ ಪಾರ್ಕ್ಗೆ ಹೊರಟಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು: ಜೆ.ಜೆ.ನಗರದಲ್ಲಿ ಯುವಕ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉರ್ದು ಮಾತಾಡದ್ದಕ್ಕೆ ಕೊಲೆಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಪ್ಪು ಹೇಳಿಕೆ ನೀಡಿದ್ದರು. ಬಳಿಕ ತಮ್ಮ ತಪ್ಪು ಅರಿವಾಗಿ ಬೈಕ್ ಡಿಕ್ಕಿಯಾಗಿ ಗಲಾಟೆಯಾಗಿ ಚಂದ್ರುಗೆ ಚೂರಿ ಇರಿತ ಆಗಿದೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ರಕ್ತಸ್ರಾವವಾಗಿ ಚಂದ್ರು ಸಾವನ್ನಪ್ಪಿದ್ದಾರೆ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಗೃಹ ಸಚಿವರ ಈ ಬೇಜವಾಬ್ದಾರಿ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈಗ ಇದೇ ಕಾರಣದಿಂದಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.
ಕಾಂಗ್ರೆಸ್ ಭವನದಲ್ಲಿ ಗೃಹ ಸಚಿವ ಅರಗ ಜ್ಙಾನೇಂದ್ರ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಮೊಹಮ್ಮದ್ ಹ್ಯಾರಿಸ್ ನಲಪಾಡ್ ನೇತೃತ್ವದಲ್ಲಿ ಕಾಂಗ್ರೆಸ್ ಭವನದಿಂದ ಫ್ರೀಡಂ ಪಾರ್ಕ್ಗೆ ಹೊರಟಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಪೋಲಿಸರು ತಡೆದಿದ್ದಾರೆ. ಹೈಗ್ರೌಂಡ್ ಪೋಲಿಸರು ಪ್ರತಿಭಟನಾ ನಿರತರನ್ನ ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆ ವೇಳೆ ನಲಪಾಡ್, ಗೃಹ ಸಚಿವರನ್ನ ಅವಿವೇಕಿ ಎಂದಿದ್ದಾರೆ. ಕೋಮುಗಲಭೆಯನ್ನ ಸೃಷ್ಟಿಸಲು ಈ ರೀತಿ ಹೇಳಿದ್ದಾರೆ. ಗೃಹಸಚಿವರು ರಾಜೀನಾಮೆ ಕೊಡಲೇ ಬೇಕು ಎಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಒತ್ತಾಯ ಮಾಡಿದ್ದು ಗೃಹಸಚಿವರ ವಿರುದ್ದ ಯೂತ್ ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ. ಇನ್ನು ಗೃಹ ಸಚಿವರ ಹೇಳಿಕೆ ಖಂಡಿಸಿ ಕಾಂಗ್ರೆಸ್ನಿಂದ ಮುತ್ತಿಗೆ ಹಿನ್ನೆಲೆ ಆರಗ ಜ್ಞಾನೇಂದ್ರ ಸರ್ಕಾರಿ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಿದೆ. ಬೆಂಗಳೂರಿನ ಜಯಮಹಲ್ನಲ್ಲಿರುವ ಆರಗ ಜ್ಞಾನೇಂದ್ರ ಮನೆಗೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಆಡಳಿತ ಪಕ್ಷದಿಂದ ಕೋಮುಗಲಭೆ ಸೃಷ್ಟಿ ದುರದೃಷ್ಟಕರ ಸಂಗತಿ ‘ತೀರ್ಥಹಳ್ಳಿ ಕ್ಷೇತ್ರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಳಂಕ’ ಎಂದು ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಮ್ಮನೆ ರತ್ನಾಕರ್ ಆಕ್ರೋಶ ಹೊರ ಹಾಕಿದ್ದಾರೆ. ಸಚಿವ ಆರಗ ಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಬೇಕು. ಆಡಳಿತ ಪಕ್ಷದಿಂದ ಕೋಮುಗಲಭೆ ಸೃಷ್ಟಿ ದುರದೃಷ್ಟಕರ ಸಂಗತಿ. ಸಚಿವ ಆರಗ ಜ್ಞಾನೇಂದ್ರರನ್ನು ಸಿಎಂ, ರಾಜ್ಯಪಾಲರು ಕೂಡಲೇ ವಜಾ ಮಾಡಬೇಕು. ಗೃಹ ಸಚಿವರಾದವರು ಎಚ್ಚರಿಕೆಯಿಂದ ಹೇಳಿಕೆ ನೀಡಬೇಕಿತ್ತು. ಗೃಹ ಸಚಿವರೇ ಕೋಮು ಪ್ರಚೋದನೆ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಆರಗ ಜ್ಞಾನೇಂದ್ರ 2 ಜ್ಞಾನಪೀಠ ಪ್ರಶಸ್ತಿ ಪಡೆದ ಕ್ಷೇತ್ರದ ಶಾಸಕ. ತೀರ್ಥಹಳ್ಳಿ ಕ್ಷೇತ್ರದ ಗೌರವ ಉಳಿಸಲು ರಾಜೀನಾಮೆ ನೀಡಬೇಕು ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಉರ್ದು ಮಾತಾಡದ್ದಕ್ಕೆ ಕೊಲೆ ಎಂಬ ಹೇಳಿಕೆ ತಪ್ಪಾಗಿದೆ; ಇದೀಗ ಪೊಲೀಸರು ವಿಸ್ತೃತ ವರದಿ ನೀಡಿದ್ದಾರೆ ಎಂದ ಆರಗ ಜ್ಞಾನೇಂದ್ರ
ಹಿಂದೂ ಯುವಕನೊಬ್ಬನ ಕೊಲೆಯಾದರೆ ಸಿದ್ದರಾಮಯ್ಯನವರ ಬಾಯಲ್ಲಿ ಒಂದು ಸಂತಾಪದ ಮಾತು ಕೂಡ ಬರಲ್ಲ: ಸಿಟಿ ರವಿ